ನಿಮ್ಮ ಫೋನ್ 5G ಗೆ ಸಪೋರ್ಟ್ ಮಾಡುತ್ತಾ ಎಂಬುದನ್ನು ತಿಳಿಯಿರಿ
5G ಸೇವೆ ಈಗಾಗಲೇ ಭಾರತದಲ್ಲಿ ಲಾಂಚ್ ಆಗಿದೆ. ಜಿಯೋ ಮತ್ತು ಏರ್‌ಟೆಲ್ ದೇಶದ ಕೆಲವು ಪ್ರದೇಶಗಳ ವ್ಯಾಪ್ತಿಯಲ್ಲಿ ತಮ್ಮ 5G ಸೇವೆಗಳನ್ನು ಪ್ರಾರಂಭಿಸಿವೆ. ಭಾರ್ತಿ ಏರ್‌ಟೆಲ್ ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ 5G ಲಭ್ಯ ಮಾಡಿದೆ. ಅದೇ ರೀತಿ ರಿಲಾಯನ್ಸ್ ಜಿಯೋ ಟೆಲಿಕಾಂ (ಅಕ್ಟೋಬರ್ 5 ರಿಂದ) ಪ್ರಮುಖ 4 ನಗರಗಳಲ್ಲಿ ಪ್ರಾರಂಭಿಸಿದೆ.
ಸದ್ಯ ಬಹುತೇಕರು 3G ಅಥವಾ 4G ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಅವರ ಸ್ಮಾರ್ಟ್‌ಫೋನ್ 5G ಸಪೋರ್ಟ್ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಹಾಗಾದರೆ ಸದ್ಯ ನೀವು ಬಳಕೆ ಮಾಡುವ ಫೋನ್ 5G ಬೆಂಬಲ ಪಡೆದಿದೆಯೇ ಚೆಕ್ ಮಾಡಲು ಹೀಗೆ ಮಾಡಿರಿ.
ನಿಮ್ಮ ಸ್ಮಾರ್ಟ್‌ಫೋನ್ 5G ಸಪೋರ್ಟ್ ಮಾಡುತ್ತದೆಯೇ?..ಹೀಗೆ ಚೆಕ್ ಮಾಡಿ:
ಹಂತ 1: ನಿಮ್ಮ ಫೋನ್‌ನಲ್ಲಿ, ಸೆಟ್ಟಿಂಗ್ ಅಪ್ಲಿಕೇಶನ್ ಓಪನ್ ಮಾಡಿ
ಹಂತ 2: ನಂತರ 'Wi-Fi ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಆ ಬಳಿಕ 'SIM ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 4: 'Preferred network type' ಆಯ್ಕೆಯಲ್ಲಿ ನೀವು ಲಭ್ಯವಿರುವ ನೆಟ್‌ವರ್ಕ್ ಮಾಹಿತಿ ಬಗ್ಗೆ ನೋಡಲು ಸಾಧ್ಯವಾಗುತ್ತದೆ.
ಹಂತ 5: ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.
ಜಿಯೋ ಟೆಲಿಕಾಂ ಸದ್ಯ 4 ನಗರಗಳಲ್ಲಿ ಬೀಟ್ ಟ್ರಯಲ್ ಆಗಿ 5G ಸೇವೆ ಶುರು ಮಾಡಿದ್ದು, ದೀಪಾವಳಿ ವೇಳಗೆ 5G ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹಾಗೆಯೇ 5G ಸೇವೆಗಳು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಿದೆ.

Post a Comment