ಕಾರ್ಕಳ : ನವ ವಿವಾಹಿತೆ ಶವ ಪಾಳು ಬಾವಿಯಲ್ಲಿ ಪತ್ತೆ !
ಎಲ್ಲೂರು :ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾದ ನವ ವಿವಾಹಿತೆಯ ಶವ ಮನೆಯ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ನವವಿವಾಹಿತೆ ಎಲ್ಲೂರು ನಿವಾಸಿ ರಕ್ಷಿತಾ ಪೂಜಾರಿ(24), ಈಕೆ ಕಳೆದ ಒಂದುವರೆ ವರ್ಷಗಳ ಹಿಂದೆ ಪಾಂಗಾಳ ನಿವಾಸಿ ಸಂಜಯ್ ಆಚಾರಿ ಎಂಬುವರನ್ನು ಅಂತರ್ ಜಾತಿ ವಿವಾಹವಾಗಿದ್ದ ಈಕೆ ಗಂಡ ಹಾಗೂ ತನ್ನ ತಂದೆಯೊಂದಿಗೆ ಎಲ್ಲೂರಿನ ಮನೆಯಲ್ಲಿ ವಾಸ ವಿದ್ದಳು, ಕಾಪುವಿನ ಮಹಾಬಲ ಮಾರ್ಲ್ ಕಟ್ಟಡದ ಪ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಈಕೆ ಕಳೆದ ಮೂರನೇ ತಾರೀಖಿನಂದ್ದು ಅಂಗಡಿಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ಅಂಗಡಿ ಬಿಟ್ಟವಳು ನಾಪತ್ತೆಯಾಗಿದ್ದಳು. ಇದೀಗ ಆಕೆಯ ಶವ ಮನೆ ಪಕ್ಕದ ಹಾಡಿಯೊಂದರ ಪಾಳು ಬಾವಿಯೊಂದರಲ್ಲಿ ಪತ್ತೆಯಾಗುವ ಮೂಲಕ ಅನೇಕ ಪ್ರಶ್ನೆಗಳನ್ನು ಹುಟ್ಡು ಹಾಕಿದ? ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸಾಗಿಸಲಾಗಿದ್ದು, ಕಾಪು ಸರ್ಕಲ್ ಇನ್ಸ್
ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸ್ಸೈ ಪುರುಷೋತ್ತಮ ಪ್ರಕರಣದ ತನಿಖೆ
ನಡೆಸುತ್ತಿದ್ದು, ನೈಜ್ಯ ತನಿಖೆಯ ಬಳಿಕವಷ್ಟೇ ಪ್ರಕರಣದ ಸತ್ಯಸತ್ಯೆಗಳು ಹೊರ ಬೀಳಲಿದೆ.

Post a Comment