ದೀಪಾವಳಿ ಬಳಿಕ ಹೆಚ್ಚಳವಾಗಲಿದೆ ಸ್ಮಾರ್ಟ್ ಫೋನ್ ಬೆಲೆ
ದೀಪಾವಳಿ ಬಳಿಕ ಸ್ಮಾರ್ಟ್ ಫೋನ್ ಬೆಲೆ ಗಣನೀಯ ಹೆಚ್ಚಳವಾಗುವ ಸಾಧ್ಯತೆ ಇದೆ. ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರ ಕುಸಿತ ಕಾಣುತ್ತಿರುವುದರಿಂದ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಈ ವರ್ಷ ಸ್ಮಾರ್ಟ್ ಫೋನ್‌ಗಳ ಸಾಗಣೆಯೂ ಕಡಿಮೆಯಾಗುವ ಸಾಧ್ಯತೆ ಇದೆ. ಉದ್ಯಮದ ಪ್ರಮುಖರ ಪ್ರಕಾರ, ಹಬ್ಬದ ಋುತುವಿನ ಬೇಡಿಕೆಯನ್ನು ಉತ್ತೇಜಿಸಲು ಆಮದು ವೆಚ್ಚವನ್ನು ಸ್ಮಾರ್ಟ್‌ಫೋನ್ ಕಂಪನಿಗಳೇ ಭರಿಸುತ್ತಿವೆ.
ಈಗ ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಬಯಸುತ್ತಿವೆ. ಹೀಗಾಗಿ, ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ನ ಸರಾಸರಿ ಬೆಲೆ 20,000 ರೂ.ಗೆ ಏರುವ ಸಾಧ್ಯತೆ ಇದೆ.
ಹಬ್ಬದ ಋುತುವಿನ ಬೇಡಿಕೆಯನ್ನು ಉತ್ತೇಜಿಸಲು ಆಮದು ವೆಚ್ಚವನ್ನು ಸ್ಮಾರ್ಟ್‌ಫೋನ್ ಕಂಪನಿಗಳೇ ಭರಿಸುತ್ತಿವೆ. ಈಗ ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಬಯಸುತ್ತಿವೆ. ಹೀಗಾಗಿ, ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ನ ಸರಾಸರಿ ಬೆಲೆ 20,000 ರೂ.ಗೆ ಏರುವ ಸಾಧ್ಯತೆ ಇದೆ. ಇದು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 17,000 ರೂ. ಇತ್ತು.


Post a Comment