ಕಾರ್ಕಳ :ಶಿರ್ವ ಪಾದಚಾರಿಗೆ ಪಿಕಪ್ ವಾಹನ ಢಿಕ್ಕಿಯಾಗಿ ಮೃತ
ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆಬದಿ ನಡೆದುಕೊಂಡು
ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರ್ವ ನ್ಯಾರ್ಮದ ಜಯರಾಮ್ ಸರ್ವೀಸ್
ಸ್ಟೇಶನ್ ನಡೆದಿದೆ.
ಮೃತರನ್ನು ಶಿರ್ವ ನಿವಾಸಿ ಎವುಜಿನ್ ಬ್ರಿಟ್ಟೋ (50) ಎಂದು ಗುರುತಿಸಲಾಗಿದೆ.
ಶಿರ್ವ ಪೇಟೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಎವುಜಿನ್ ಅವರಿಗೆ ಕಟಪಾಡಿ
ಕಡೆಯಿಂದ ಶಿರ್ವ ಕಡೆಗೆ ಬರುತ್ತಿದ್ದ ಪಿಕಪ್ ವಾಹನ ಢಿಕ್ಕಿ ಹೊಡೆದಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment