".

Header Ads

ಮುಲ್ಕಿ: ಲವ್‌ ಜಿಹಾದ್‌ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿಗೆ ಧರ್ಮದೇಟು ನೀಡಿ ಪೊಲೀಸ್‌ ಗೊಪ್ಪಿಸಿದ ಹಿಂದೂ ಕಾರ್ಯಕರ್ತರು ?


  ಲವ್‌ ಜಿಹಾದ್‌ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿಯೋರ್ವನಿಗೆ ಹಿಂದೂ ಕಾರ್ಯಕರ್ತರು ಧರ್ಮದೇಟು ನೀಡಿ
ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಸುರತ್ಕಲ್‌ ಮೂಲದ ತೋಕೂರು ಬಳಿಯ ಬಾಡಿಗೆ ಮನೆ ನಿವಾಸಿ ಸಮೀರ್‌ ಬಂಧಿತ ಆರೋಪಿ. ಸಮೀರ್‌ ಈಗಾಗಲೇ ವಿವಾಹವಾಗಿದ್ದಾನೆ. ಆದರೆ ಹಿಂದೂ ಯುವತಿ ಸವಿ
ತ ಎಂಬಾಕೆಯನ್ನು ಪುಸಲಾಯಿಸಿ ತೋಕೂರಿನಲ್ಲಿ ಬಾಡಿಗೆ
ಮನೆಯೊಂದರಲ್ಲಿ ವಾಸಿಸುತ್ತಿದ್ದಾನೆ ಎಂದು ಮಾಹಿತಿ ಲಭ್ಯವಾದಂತೆ ಹಿಂದೂ ಕಾರ್ಯಕರ್ತರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 ಅತ ಲವ್‌ ಜಿಹಾದ್‌ ಮಾಡಿದ್ದಾನೆಂದು ಆರೋಪಿಸಿ ಧರ್ಮದೇಟು ನೀಡಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.








Powered by Blogger.