".

Header Ads

ಪೊಲೀಸ್ ಠಾಣೆಯಲ್ಲಿ ಬೆಂಕಿ ಅವಘಡ :ದಾಖಲೆಗಳು ಬೆಂಕಿಗೆ ಆಹುತಿ


 ಬೆಂಗಳೂರು: ವಿಲ್ಸನ್ ಗಾರ್ಡನ್ ಠಾಣೆ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದಾಸ್ತಾನು ಕೊಠಡಿಯಲ್ಲಿ ಇರಿಸಿದ್ದ ವಸ್ತುಗಳು ಹಾಗೂ ಕೆಲ ದಾಖಲೆಗಳು ಸುಟ್ಟು ಕರಕಲಾಗಿವೆ.  ಕೊಠಡಿಯಲ್ಲಿಮಂಗಳವಾರ ಬೆಳಿಗ್ಗೆ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು, ಕೆಲ ಕ್ಷಣಗಳಲ್ಲಿ ಇಡೀ ಕೊಠಡಿ ಆವರಿಸಿತ್ತು. ಬೆಂಕಿ ನಂದಿಸಲು ಠಾಣೆ ಸಿಬ್ಬಂದಿ ಯತ್ನಿಸಿ ವಿಫಲರಾಗಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು’ ಎಂದು ಪೊಲೀಸರು ಹೇಳಿದರು. ’ಸಿಬ್ಬಂದಿ ಬಳಸಿದ್ದಬೂಟು, ಕ್ಯಾಪ್, ಬಟ್ಟೆ, ಟ್ರಂಕ್ಗಳು, ಹಳೇ ಕಂಪ್ಯೂಟರ್ ಸೇರಿ ಹಲವು ವಸ್ತುಗಳು ಕೊಠಡಿಯಲ್ಲಿದ್ದವು.  . 

ಬೆಂಕಿ ಹೊತ್ತಿಕೊಂಡಿದ್ದರಿಂದ ಎಲ್ಲವಸ್ತುಗಳು ಹಾಗೂ ಕಡತ ಸಂಪೂರ್ಣ ಸುಟ್ಟಿವೆ’ ಎಂದು ತಿಳಿಸಿದರು. ‘ದಾಸ್ತಾನು ಕೊಠಡಿಗೆ ಹೊಂದಿಕೊಂಡೇ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅವರೆಲ್ಲ ಹೊರಗೆ ಬಂದಿದ್ದರು’ ಎಂದು ಹೇಳಿದರು.   ತುಂಡರಿಸಿದ್ದ ತಂತಿಯಿಂದಾಗಿ ವಿದ್ಯುತ್ ಶಾರ್ಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ‘ಬೆಂಕಿ ಅವಘಡದಲ್ಲಿಯಾವೆಲ್ಲವಸ್ತುಗಳು ಸುಟ್ಟಿವೆ ಎಂಬುದರ ಬಗ್ಗೆಪರಿಶೀಲನೆ ನಡೆಸಲಾಗುತ್ತಿದೆ. ಸುಟ್ಟಿರುವ ಕಡತಗಳ ಪ್ರತಿಗಳೂ ಬೇರೆ ಕಡೆ ಇವೆ, ಅವಘಡ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ‘ ಎಂದು ತಿಳಿಸಿದರು.


Powered by Blogger.