ಇಂದು ಪೊಲೀಸ್ ಸಂಸ್ಮರಣಾ ದಿನ
ರಾಷ್ಟ್ರ ಸೇವೆಯಲ್ಲಿ ಪ್ರಾಣ ತೆತ್ತ ಈ ಹತ್ತು ಜನ ವೀರ ಪೊಲೀಸರನ್ನು ನೆನೆಯಲು 1962ರಲ್ಲಿ ನಡೆದ ಡಿಜಿಪಿ/ಐಜಿಪಿ ಕಾನ್ಫರೆನ್ಸ್ ನಲ್ಲಿ ಅಕ್ಟೋಬರ್ 21ನ್ನು ದೇಶಾದ್ಯಂತ ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ದಿನದಂದು ದೇಶಕ್ಕಾಗಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಸೇವೆ ಸಲ್ಲಿಸುವ, ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುವ ಎಲ್ಲ ಭದ್ರತಾ ಸಿಬ್ಬಂದಿಗಳಿಗೂ ಗೌರವ ಸಲ್ಲಿಸಲಾಗುತ್ತದೆ. ಈ ದಿನದಂದು ಪೊಲೀಸ್ ಪಡೆಗಳು ಮತ್ತು ಅವರ ಕುಟುಂಬಗಳಿಗೆ, ಮತ್ತು ದೇಶ ರಕ್ಷಣೆಗಾಗಿ ಹೋರಾಡುತ್ತಾ ಪ್ರಾಣವನ್ನರ್ಪಿಸಿದ ವೀರ ಪೊಲೀಸರ ನೆನಪುಗಳಿಗೆ ಗೌರವ ಸಲ್ಲಿಸಲಾಗುತ್ತದೆ.


Post a Comment