".

Header Ads

ಉಕ್ಕಿನ ದರ ತೀವ್ರ ಕುಸಿತ : ಮನೆ ನಿರ್ಮಾಣ, ರಿಯಲ್ ಎಸ್ಟೇಟ್ ದಾರರಿಗೆ ಸಂತಸ

ಕಳೆದ 6 ತಿಂಗಳಲ್ಲಿ ಉಕ್ಕಿನ ದರ ಶೇ. 40ರಷ್ಟು ಕುಸಿದಿದ್ದು ಇದೀಗ ಟನ್‌ಗೆ 57,000 ರೂಪಾಯಿಗೆ ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ 78,000 ರೂ.ಗೆ ಜಿಗಿದಿದ್ದ ಸ್ಟೀಲ್‌ ದರ ಇಳಿಕೆಯ ಹಾದಿಯಲ್ಲಿದೆ.

ಏರುಗತಿಯಲ್ಲಿದ್ದ  ಸ್ಟೀಲ್‌ (ಉಕ್ಕು) ದರ ಕಳೆದ 6 ತಿಂಗಳಲ್ಲಿ ಶೇ.40ರಷ್ಟು ಕುಸಿದು, ಈಗ ಟನ್‌ಗೆ 57,000 ರೂಪಾಯಿಗೆ (ಜಿಎಸ್‌ಟಿ ರಹಿತ) ಇಳಿದಿದೆ. ಏಪ್ರಿಲ್‌ನಲ್ಲಿ 78,000 ರೂ.ಗೆ ಜಿಗಿದಿದ್ದ (ಶೇ. 18ರ ಜಿಎಸ್‌ಟಿ ಸೇರಿದರೆ 93,000 ರೂ.) ಉಕ್ಕಿನ ಬೆಲೆ ಇಳಿಕೆಯ ಹಾದಿಯಲ್ಲಿದೆ.

ಉಕ್ಕಿನ ದರ ಇಳಿಕೆಯಿಂದ ಮೂಲಸೌಕರ್ಯ ಹಾಗೂ ನಿರ್ಮಾಣ, ರಿಯಲ್‌ ಎಸ್ಟೇಟ್‌ ಮತ್ತು ವಸತಿ, ಆಟೋಮೊಬೈಲ್‌ ಮತ್ತು ಗ್ರಾಹಕ ಸರಕುಗಳಂತಹ ಉದ್ಯಮಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ. ದರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರು ತುಸು ನಿರಾಳಗೊಂಡಿದ್ದಾರೆ.




Powered by Blogger.