ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್ ; ಜ. 1 ರಂದು 28ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ
ಮುಂಬಯಿ : ವರ್ಲಿಯ ಮಧುಸೂದನ್ ಮಿಲ್ ಕೌಂಪೌಂಡಿನ ಆವರಣದಲ್ಲಿ "ಅಪ್ಪಾಜಿಬೀಡು" ಎಂದೇ ಪ್ರಸಿದ್ದಿಯಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪಡುಬಿದ್ರೆ ಬೆಂಗ್ರೆ ರಮೇಶ್ ಗುರುಸ್ವಾಮಿ ಸ್ಥಾಪಿಸಿರುವ ಶ್ರೀ ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್ (ರಿ) ಇದರ 28ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜ. 1 ರಂದು ಬೆಳಿಗ್ಗೆ 5 ರಿಂದ ರಾತ್ರಿ 11 ಗಂಟೆ ತನಕ ನಡೆಯಲಿದೆ.
28 ವರ್ಷಗಳ ಹಿಂದೆ ಸ್ಥಾಪಿಸಿದ ಅಪ್ಪಾಜಿ ಬೀಡು ಮಹಾರಾಷ್ಟ್ರ ಸರಕಾರದಿಂದ ನೋದಾಯಿಸಲ್ಪಟ್ಟಿದ್ದು, ಸಂಸ್ಥೆಯು ಪ್ರಾರಂಭದಿಂದಲೇ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ವಿವಿಧ ರೀತಿಯ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅಪ್ಪಾಜಿಬೀಡು ಪೌಂಡೇಶನ್ ನ ಆಡಳಿತ ಟ್ರಷ್ಟಿ ಶಾಂಭವಿ ಗುರುಸ್ವಾಮಿ ಇವರ ಮುಂದಾಳುತ್ವದಲ್ಲಿ ಇಲ್ಲಿ ವಿವಿಧ ಸೇವಾ ಕಾರ್ಯಗಳು ನಡೆಯುತ್ತಿದೆ.
ಅಂದು ಬೆಳಿಗ್ಗೆ 5 ರಿಂದ ಶರಣು ಘೋಷ, 6 ರಿಂದ ಗಣಹೋಮ, 9 ರಿಂದ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ರಿಂದ 1 ರ ತನಕ ಮಹಾಪೂಜೆ, ಮಂಗಳಾರತಿ, 1 ರಿಂದ 3 ರ ತನಕ ನಗರದ ಯುವ ಸಂಗೀತ ಕಲಾವಿದ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮುಂಬೈಯ ವಿವಿಧ ಉಪನಗರಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳ ನೀಡಿ ಜನಪ್ರಿಯ ರಾಗಿರುವ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ಸದ್ಗುರು ಭಜನಾ ಮಂಡಳಿ, ಮೀರಾರೋಡ್ ಇವರಿಂದ ಭಕ್ತಿ ರಸಮಂಜರಿ, ಮಧ್ಯಾಹ್ನ 1 ರಿಂದ 4 ರ ತನಕ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ಸಂಜೆ 6 ರಿಂದ ಅಯ್ಯಪ್ಪ ಸ್ವಾಮಿ ದೀಪೋತ್ಸವ, ಸಂಜೆ 7 ರಿಂದ 9.30 ರ ತನಕ ಗಣೇಶ್ ಎರ್ಮಾಳು ಬಳಗದ ಭಕ್ತಿ ರಸಮಂಜರಿ, ರಾತ್ರಿ 10.30ಕ್ಕೆ ರಮೇಶ್ ಗುರುಸ್ವಾಮಿ ಮತ್ತು ಶಾಂಭವಿ ಗುರುಸ್ವಾಮಿ ಇವರ ದಿವ್ಯ ಉಪಸ್ಥಿತಿಯಲ್ಲಿ ಗಣ್ಯರ ಸಮಕ್ಷಮದಲ್ಲಿ ಗುರುವಂದನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಿಶೋರ್ ಸ್ವಾಮಿ ಕಟಪಾಡಿ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ, ರೇ ರೋಡ್, ಜಯಕರ ಸ್ವಾಮಿ, ಅಪ್ಪಜಿ ಬೀಡು ವರ್ಲಿ ಮತ್ತು ಕೃಷ್ಣ ಹರಿ ಗುರುಸ್ವಾಮಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ವರ್ಲಿ ಇವರಿಗೆ ಗುರು ವಂದನೆ ಹಾಗೂ ನಗರದ ಬಹುಮುಖ ಪ್ರತಿಭಾನ್ವಿತ ಕಲಾವಿದ ಅಶೋಕ್ ಕುಮಾರ್ ಕೊಡ್ಯಡ್ಕ ಇವರನ್ನು ಸನ್ಮಾನಿಸಲಾಗುವುದು. ನಂತರ ಮಂಗಳಾರತಿ ಹರಿವರರಾಸನಂ ನಡೆಹಲಿದ್ದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಗಂಧ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸಿ ಅಯ್ಯಪ್ಪ ಸ್ವಾಮಿ ಯ ಕೃಪೆಗೆ ಪಾತ್ರರಾಗಬೇಕಾಗಿ ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್ ನ ಸಂಸ್ಥಾಪಕರಾದ ರಮೇಶ ಗುರುಸ್ವಾಮಿ, ಅಧ್ಯಕ್ಷರಾದ ಸಂತೋಷ್ ವಿ. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಕವಿತಾ ಜಿ. ಶೆಟ್ಟಿ, ಹಾಗೂ
ಸ್ಥಾಪಕ ಶ್ರೀ ರಮೇಶ್ ಗುರುಸ್ವಾಮಿ,
ಟ್ರಸ್ಟಿ ಗಳಾದ
ಸುರೇಶ ಎಸ್.ಶೆಟ್ಟಿ ಕೇದಗೆ .
ರತ್ನಾಕರ್ ಜಿ.ಶೆಟ್ಟಿ
ರಘುನಾಥ ಎನ್.ಶೆಟ್ಟಿ
ಬಿ.ದಿನೇಶ್ ಜಿ.ಕುಲಾಲ್
ಪುಷ್ಪರಾಜ್ ಎಸ್.ಶೆಟ್ಟಿ
ರತ್ನಾಕರ್ ಆರ್ ಶೆಟ್ಟಿ
ಮೋಹನ್ ಟಿ. ಚೌಟ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ, ಕಾರ್ಯದರ್ಶಿ
ಹರೀಶ್ ಶೆಟ್ಟಿ ಸನ್ಮಾನ್ಯ.
ಪ್ರಸಾದ್ ಶೆಟ್ಟಿ ಅರುವ ಗೌರವ. ಖಜಾಂಚಿ
ಭರತ್ ಶೆಟ್ಟಿ ಅತ್ತೂರು
ಜಂಟಿ ಕಾರ್ಯದರ್ಶಿ,
ಸತ್ಯನಾರಾಯಣ ಕಾಂಚನ್ ಜೊತೆ ಕೋಶಧಿಕಾರಿ,
ಸಲಹೆಗಾರರು
ಅರುಣ್ ಆಳ್ವ, ಕಂತಾಡಿಗುತ್ತು, ಉದಯ ಶೆಟ್ಟಿ ಮುದ್ರಾಡಿ
ಭೋಜ ಎಸ್.ಶೆಟ್ಟಿ, ಕೇದಗೆ
ಶೇಖರ್ ಶೆಟ್ಟಿ ವರ್ಲಿ
ಪ್ರವೀಣ್ ಕುಮಾರ್ ಶೆಟ್ಟಿ, ಕುರ್ಕಾಲ್, ಸನತ್ ಕುಮಾರ್ ಶೆಟ್ಟಿ,, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ
ಬಾಲಚಂದ್ರ ಡಿ ಶೆಟ್ಟಿ
ಗಣೇಶ್ ಸಾಲಿಯಾನ್
ಗಣೇಶ್ ಶೆಟ್ಟಿ
ವಿಜಯ ಶೆಟ್ಟಿ
ಶ್ರೀಕಾಂತ್ ಶೆಟ್ಟಿ,, ಸಂತೋಷ್ ಸಾಲಿಯಾನ್,,
ಸಮಿತಿಯ ಸದಸ್ಯರು
ಪಾರ್ಥಸಾರತಿ ಆರ್.ಶೆಟ್ಟಿ ಅರವಿಂದ ಶೆಟ್ಟಿ
ಅರುಣ್ ಶೆಟ್ಟಿ ಗುರುಸ್ವಾಮಿ
ಜಯಕರ ಶೆಟ್ಟಿ, ರಾಜೇಶ್ ಶೆಟ್ಟಿ
ಪ್ರಕಾಶ್ ಶೆಟ್ಟಿ
ಪ್ರಸಾದ್ ಶೆಟ್ಟಿ
ಪ್ರಕಾಶ್ ಜಾಧವ್
ಚಂದ್ರಕಾಂತ ಭಂಡಾರಿ, ಲೋಕೇಶ್ ತೋಳಾರ್ ,ಹರೀಶ್ ಶೆಟ್ಟಿ,,ದಿಲೀಪ ಮೊಗವೀರ,
ಸತೀಶ್ ಪೂಜಾರಿ,
ಸಚಿನ್ ಶೆಟ್ಟಿ ,ದಿನೇಶ್ ಶೆಟ್ಟಿ,,
ಸತೀಶ್ ಶೆಟ್ಟಿ,
ಸಂತೋಷ್ ನಾಯಕ್, ಅಜಯ್ ಶೆಟ್ಟಿ,,
ಮಹಿಳಾ ಮಂಡಳಿ ಉಪಕಾಯಾಧ್ಯಕ್ಷೆ ದಿವ್ಯ ಪಿ ಶೆಟ್ಟಿ
ಗೌರವ ಕಾರ್ಯದರ್ಶಿ. ರೋಹಿಣಿ ಎಸ್. ಪೂಜಾರಿ . ಕೋಶಾಧಿಕಾರಿ. ಶೋಭಾ ವಿ.ಶೆಟ್ಟಿ , ಜೊತೆ ಕಾರ್ಯದರ್ಶಿ
ಸುಜಾತಾ ಎನ್.ಪುತ್ರನ. ಜೊತೆ ಕೋಶ ಧಿಕಾರಿ ನಿರ್ಮಲಾ ಕೆ ಶೆಟ್ಟಿ
ಕಾರ್ಯಕಾರಿ ಸಮಿತಿ ಸದಸ್ಯರು ಗಳಾದ. ಶಾರದ ಜೆ ಶೆಟ್ಟ. ವಿಜಯಶ್ರೀ ಎಸ್.ಶೆಟ್ಟಿ. ಪ್ರಜ್ಞಾ ಎಸ್ ಶೆಟ್ಟಿ ರಮ್ಯಾ ಎಸ್ ಶೆಟ್ಟಿ ರಾಣಿ ಎ. ಶೆಟ್ಟಿ ಸರೋಜಿನಿ ಕೆ.ಕರ್ಕೇರ
ಕುಂ. ರಾಗಿಣಿ ಆರ್ ಶೆಟ್ಟಿ , ಶರ್ಮಿಳಾ ಶೆಟ್ಟಿ, ನಿಮಾ ಆರ್ ಶೆಟ್ಟಿ ಶ್ರೀಮತಿ ವೀಣಾ ಎಂ.ಹೆಗಡೆ
. ಸುಮಿತ್ರಾ ಪಿ.ಶೆಟ್ಟಿ,. ಸಂಗೀತಾ ಪಿ.ಶೆಟ್ಟಿ ಯಶಸ್ವಿ ಆರ್.ಶೆಟ್ಟಿ,. ಶೈಲಾ ಎಲ್ ಶೆಟ್ಟಿ,. ಸುಪ್ರಿತಾ ಎ.ಶೆಟ್ಟಿ ಮತ್ತು
ಸಲಹೆಗಾರರುದ ಲೀಲಾ ಎಸ್ ಶೆಟ್ಟಿ ಶ್ರೀಮತಿ ಪ್ರಮೀಳಾ ಜೆ ಶೆಟ್ಟಿ. ಉಷಾ ಬಿ ಶೆಟ್ಟಿ,. ವಿನೋದ ಜೆ ಶೆಟ್ಟಿ ಶ್ರೀಮತಿ ಯಶೋದಾ ಎಸ್.ಶೆಟ್ಟಿ,
ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಉಪಸಮಿತಿಯ ಎಲ್ಲಾ ಸದಸ್ಯರುಗಳು ವಿನಂತಿಸಿದ್ದಾರೆ.
-----------------
ಅಶೋಕ್ ಕುಮಾರ್ ಕೊಡ್ಯಡ್ಕ
ಕೊಡ್ಯಡ್ಕ ಅಚ್ಚುತ ಆಚಾರ್ಯ ಮತ್ತು ಶಾರದಾ ಆಚಾರ್ಯ ದಂಪತಿಯ ಸುಪುತ್ರರಾದ ಇವರು ಧರ್ಮಸ್ಥಳದ ಗುರುಕುಲದಲ್ಲಿ ಪದವಿ ಶಿಕ್ಷಣ ಮುಗಿಸಿ 1995ಲ್ಲಿ ಮುಂಬಯಿ ಸೇರಿದರು. ಊರಿನಲ್ಲಿಯೂ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಅನುಭವವನ್ನು ಪಡೆದ ಇವರು ಮುಂಬಯಿಯಲ್ಲೂ ಅದನ್ನು ಮುಂದುವರಿಸಿದರು. ಕೇವಲ ನಾಟಕಗಳಲ್ಲಿಅಭಿನಯ ಮಾತ್ರವಲ್ಲ ಶಿಲ್ಪ ಕೆತ್ತನೆದ ಪ್ರಭುದ್ದತೆಯನ್ನು ಹೊಂದಿದ ಇವರು ಹಲವಾರು ಧಾರ್ಮಿಕ ಕ್ಷೇತ್ರಗಳ ಆವರಣಗಳ ಶಿಲ್ಪ ಕೆತ್ತನೆಯ ಕೆಲಸಗಳನ್ನು ಮಾಡಿದ ಕೀರ್ತಿ ಇವರದ್ದು. ಇವರು ಅಭಿನಯಿಸಿದ ನಾಟಕಗಳು ಜನಮೆಚ್ಚುಗೆ ಗಳಿಸಿದೆ.
------------------------
ಕಿಶೋರ್ ಶೆಟ್ಟಿ
ಉಡುಪಿಯ ಶ್ರೀಧರ ಶೆಟ್ಟಿ ಮತ್ತು ಶಕುಂತಳ ಶೆಟ್ಟಿ ದಂಪತಿಯ ಪುತ್ರರಾದ ಕಿಶೋರ್ ಶೆಟ್ಟಿ ಬಾಲ್ಯದಿಂದಲೇ ನಾಯಕತ್ವದ ಗುಣವನ್ನು ಹೊಂದಿದವರು. ಶಿಕ್ಷಣದ ನಂತರ ಉಡುಪಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. 2002ರಲ್ಲಿ ಮುಂಬಯಿ ಸೇರಿ ಹೋಟೇಲಿನಲ್ಲಿ ದುಡಿಯತೊಡಗಿದರು. ಹಂತ ಹಂತವಾಗಿ ಹೋಟೇಲು ಉದ್ಯಮದ ಅನುಭವವನ್ನು ಪಡೆದು ಮುಂದೆ ಸ್ವಂತ ಹೋಟೇಲು ಉದ್ಯಮ ಪ್ರಾರಂಬಿಸಿದರು. ಇದೀಗ ಸುಮಾರು 100 ಮಂದಿ ಉದ್ಯೋಗಿಗಳ ಅನ್ನದಾತರಾಗಿದ್ದಾರೆ. ನಾಡಿನ ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರವಲ್ಲದೆ, ಶೈಕ್ಷಣಿಕ ಹಾಗೂ ಸಮಾಜಿಕ ಕ್ಷೇತ್ರಗಳಿಗೆ ಸಹಾಯ ಹಸ್ತವನ್ನು ನೀಡುತ್ತಾ ಜನಪ್ರೀಯರಾಗಿದ್ದಾರೆ. ಇವರು ಈ ಸಲ 18ನೇ ವರ್ಷದ ಶಬರಿಮಲೆ ಯಾತ್ರೆಯನ್ನು ಮಾಡಲಿರುವರು.
ಗಣೇಶ್ ಎರ್ಮಾಳು ಬಳಗದ ಭಕ್ತಿ ರಸಮಂಜರಿ,
ನಗರದ ಜನಪ್ರಿಯ ಸಂಗೀತ ಕಲಾವಿದ ನಮ್ಮ ನಾಡಿನಲ್ಲಿ ಮತ್ತು ಮುಂಬೈ ನಗರದಲ್ಲಿ ಪ್ರಸಿದ್ಧಿಯನ್ನು ಪಡೆದ ಕಲಾವಿದ ಗಣೇಶ್ ಎರ್ಮಾಲ್ ಅವರ ಭಕ್ತಿರಸಮಂಜರಿ ಕಾರ್ಯಕ್ರಮ ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ, ತಮ್ಮ ಕಂಠಸಿರಿಗಳಿಂದ ಅಯ್ಯಪ್ಪನ ಭಕ್ತಿಗೀತೆ ಗಳನ್ನಾಡಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ



Post a Comment