ಭಗವಂತ ವಿಷ್ಣುವನ್ನೇ ವಿವಾಹವಾಗಿದ್ದಾಳೆ ಜೈಪುರದ 30 ವರ್ಷದ ಯುವತಿ .........
ಕೃಷ್ಣನನ್ನೇ ಪ್ರೀತಿಸುತ್ತ ಜೀವನ ಕಳೆದ ಮೀರಾಭಾಯಿ ಕಥೆಯನ್ನು ನಾವಲ್ಲ ಕೇಳಿದ್ದೇವೆ , ಈಗ ಆಧುನಿಕ ಕಾಲದಲ್ಲಿ ಯುವತಿಯೊಬ್ಬಳು ರಾಜಸ್ಥಾನದ ಗೋವಿಂದಗಢ ಸಮೀಪದ ಹಳ್ಳಿಯೊಂದರಲ್ಲಿ ನಡೆದಿರುವ ವಿವಾಹವೊಂದು ಇಂತಹದ್ದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ರಾಜಸ್ಥಾನದ ಜೈಪುರದ 30 ವರ್ಷದ ಯುವತಿ ಪೂಜಾ ಸಿಂಗ್ ಹೀಗೊಂದು ದೈವಿಕ ವಿವಾಹ ಆಗಿದ್ದಾರೆ.
ಸಂಪೂರ್ಣ ವಿಧಿವಿಧಾನಗಳೊಂದಿಗೆ ಭಗವಾನ್ ವಿಷ್ಣುವನ್ನೇ ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಶಿಷ್ಟ ಮದುವೆಯಲ್ಲಿ, ಪೂಜಾ ಸ್ವತಃ ವಿಷ್ಣುವಿನ ಹೆಸರಿನಲ್ಲಿ ಸಿಂಧೂರದ ಬದಲಿಗೆ ಶ್ರೀಗಂಧವನ್ನು ಹಚ್ಚಿಕೊಂಡಿದ್ದಾಳೆ.
ಭಗವಾನ್ ವಿಷ್ಣುವನ್ನು ಮದುವೆಯಾಗಲು ಕಾರಣವೇನು ಎಂದು ಕೇಳಿದಾಗ ಪೂಜಾ, ಬಾಲ್ಯದಿಂದಲೂ ತಂದೆ-ತಾಯಿಯ ನಡುವೆ ಜಗಳಗಳು ನಡೆಯುತ್ತಿದ್ದ ಕಾರಣ ತಾನು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದೆ. ಸಾಂಸಾರಿಕ ಜಂಜಾಟದಲ್ಲಿ ಸಿಲುಕಲು ಇಷ್ಟವೇ ಇಲ್ಲ. ಹಾಗಾಗಿ ಭಗವಂತ ವಿಷ್ಣುವನ್ನೇ ಮಾನಸಿಕವಾಗಿ ವರಿಸಿದ್ದೇನೆ. ಅವನೇ ನನ್ನ ಪತಿ' ಎ೦ದು ಹೇಳಿಕೊಂಡಿದ್ದಾಳೆ.
ಮದುವೆಯಾದ ಬಳಿಕ, ಪೂಜಾ ತನ್ನ ಮನೆಯಲ್ಲಿ ದೇವರ ಕೋಣೆಯಲ್ಲಿ ಕುಳಿತು ಭಗವಾನ್ ವಿಷ್ಣುವಿಗೆ ಆಹಾರವನ್ನು ತಯಾರಿಸುತ್ತಾಳೆ.
ಸಮಾಜ ತನ್ನನ್ನು ಗೇಲಿ ಮಾಡುತ್ತದೆ, ಆದರೆ ವಿಷ್ಣುವನ್ನು ಪತಿಯಾಗಿ ಸ್ವೀಕರಿಸಿದ್ದೇನೆ ಎಂದು ಪೂಜಾ ಹೇಳಿದ್ದಾರೆ. ಕೆಲವರು ಪೂಜಾ ಅವರನ್ನು ಬೆಂಬಲಿಸಿದ್ದಾರೆ.
Post a Comment