ದಹಿಸರ್ ಪೂರ್ವ ರಾವಾಡಾದಲ್ಲಿ ಭಕ್ತಿ ಸಂಭ್ರಮದೊಂದಿಗೆ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಸಂಪನ್ನ
(ಚಿತ್ರ ವರದಿ : ದಿನೇಶ್ ಕುಲಾಲ್)
ಅತ್ತೂರು ಗುಂಡ್ಯಕ್ ಜಯ ಸ್ವಾಮಿ, ದಹಿಸರ್ ಅವರ ನೇತೃತ್ವದಲ್ಲಿ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅಂಧೇರಿ ಇವರ ಆಶೀರ್ವಾದದೊಂದಿಗೆ ಅಯ್ಯಪ್ಪ ಭಕ್ತಾದಿಗಳ ಉಪಸ್ಥಿತಿಯಲ್ಲಿ ಡಿ. 13 ರಂದು ಮಂಗಳವಾರ ದಹಿಸರ್ ಪೂರ್ವ ರಾವಲ್ಲಾಡಾದಲ್ಲಿ 16ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ರಾಧಾಕೃಷ್ಣ ಮುಂದಿರ ಹಾಲ್, ಸೈಂಟ್ ಥೋಮಸ್ ಶಾಲೆಯ ಹತ್ತಿರ, ರಾವಾಡ, ದಹಿಸರ್‌ಪೂರ್ವ ಇಲ್ಲಿ ನಡೆಯಿತು.
ಬೆಳಿಗ್ಗೆ ಗಂಟೆ ಮಹಾಗಣಪತಿ ಹೋಮ, ಪ್ರಾಣ ಪ್ರತಿಷ್ಠಾಪನ ಪೂಜಾ ಅರ್ಚನೆ, ನಾರಾಯಣಿಯಂ, ಕೇರಳ ಗ್ರೂಪ್ ದಹಿಸರ್, ಹನುಮಾನ್ ಭಜನಾ ಮಂಡಳಿ ದಹಿಸರ್ ,ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರ ದಹಿಸರ್ ಇವರಿಂದ ಭಜನೆ, ಆ ಬಳಿಕ ಭಜನೆ ಭವಾಜಿ ಪ್ರಕಾಶ್ ಅಮೀನ್ ಅವರಿಂದ ಭಕ್ತಿ ಗಾಯನ ನಡೆಯಿತು.
ಮಧ್ಯಾಹ್ನ ದೀಪಾರಾಧನೆ ಆ ಬಳಿಕ ಅತ್ತೂರು ಗುಂಡ್ಯಕ್ ಜಯ ಸ್ವಾಮಿ ಮತ್ತು ಸ್ವಾಮಿಗಳ ಶರಣು ಘೋಷಗಳೊಂದಿಗೆ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರಿಂದ ಕರ್ಪೂರದ ಮಹಾಆರತಿ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನದಾನ ನಡೆಯಿತು.
ಪೂಜೆಯ ಸಂದರ್ಭದಲ್ಲಿ ಸತೀಶ್ ಹೆಗಡೆ ವೈಶಾಲಿ ನಗರ, ಪ್ರಕಾಶ್ ಗುರುಸ್ವಾಮಿ ಇನ್ನಂಜೆ, ಸದಾನಂದ ಗುರುಸ್ವಾಮಿ ಬೈಲೂರು, ವಿನಯ ಗುರುಸ್ವಾಮಿ ದಸರ್, ಮೋಹನ್ ಗುರುಸ್ವಾಮಿ ಶೈಲೇಂದ್ರನಗರ್,
ಶ್ರೀ ದುರ್ಗಾಪರಮೇಶ್ವರಿ ಶನೇಶ್ವರ ಮಂದಿರದ ಅಧ್ಯಕ್ಷ ಜಯರಾಮ್ ಎನ್ ಮೆಂಡನ್, ಮಾಜಿ ಅಧ್ಯಕ್ಷ ಶೇಖರ್ ಟಿ ಶೆಟ್ಟಿ (ಸರ್ವೋದಯ), ದೇವಿ ಪಾತ್ರೆ ಸಿ ಎನ್ ಪೂಜಾರಿ, ದಯಾನಂದ ಪೂಜಾರಿ ಕಲ್ಯ, ನಾರಾಯಣ ಸುವರ್ಣ ಕಲ್ವ,, ಪ್ರವೀಣ್ ಶೆಟ್ಟಿ ಕುಕ್ಕುಂದೂರು, ಜಯ ಪೂಜಾರಿ (ಸಮುದ್ರ), ದಿನೇಶ್ ಪೂಜಾರಿ( ಸಮುದ್ರ), ರವಿ ಶೆಟ್ಟಿ ವಿರಾರ ಬಿಲ್ಡರ್, ಸಂಜಯ್ ಬಿಲ್ಡರ್, ಪ್ರವೀಣ್ ಶೆಟ್ಟಿ ಅತ್ತೂರು, ಸಂತೋಷ್ ಕೆ ಪುತ್ರನ್, ಮಹೇಶ್ ಶೆಟ್ಟಿ ತೆಲ್ಲಾರ್, ಗಿರೀಶ್ ಶೆಟ್ಟಿ ತೆಲ್ಲಾರ್, ರಾಜೇಶ್ ಶೆಟ್ಟಿ ತೆಲ್ಲಾರ್, ಸತೀಶ್ ಪುತ್ರನ್ ಮತ್ತಿತರ ಉದ್ಯಮಿಗಳು ಹೋಟೆಲ್ ಮಾಲಕರು ಸಿಬ್ಬಂದಿಗಳು ಅಯ್ಯಪ್ಪ ವ್ರತದಾರಿಗಳು ಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ದೇವರ ಮಂಟಪದ ಹೂವಿನ ಸಿಂಗಾರವನ್ನು ದೀಪಕ್ ಪೂಜಾರಿ ಅವರು ನಡೆಸಿದರು,
ಪಾಲ್ಗೊಂಡೆಲ್ಲರಿಗೂ ಅತ್ತೂರು ಗುಂಡಕ್ಕ ಜಯ ಸ್ವಾಮಿ ದಹಿಸರ್ ಮಹಾಪ್ರಸಾದವನ್ನು ನೀಡಿದರು, ಪೂಜೆಯನ್ನು ನಡೆಸಿದ ಚಂದ್ರಹಾಸ ಗುರುಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು
ಪೂಜೆಯ ಯಶಸ್ವಿಗೆ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರ ದಹಿಸರ್ ನ ಸರ್ವ ಸದಸ್ಯರು ಸಹಕರಿಸಿದರು.






Post a Comment