".

Header Ads

 ರಾಜ್ಯ ಕಾರಾಗೃಹ ಕೈದಿಗಳಿಗೆ ಬಂತು ಅಚ್ಛೇದಿನ್ ಏಕಾಏಕಿ ಮೂರು ಪಟ್ಟು ಸಂಬಳ ಏರಿಕೆ !


ರಾಜ್ಯ ಕಾರಾಗೃಹ ಕೈದಿಗಳಿಗೆ ಹೊ ಸ ವರ್ಷಕ್ಕೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಮೂರು ಪಟ್ಟು ಸಂಬಳ ಜಾಸ್ತಿಮಾಡಿ 'ಅಚ್ಛೇದಿನ್' ದಯಪಾಲಿಸಲಾಗಿದೆ. 

ಒಂದು ವರ್ಷದವರೆಗೆ ಕೈದಿಗಳಿಗೆ ನಿತ್ಯ 524 ರೂ. ಸಂಬಳ ನಿಗದಿ ಪಡಿಸಲಾಗುತ್ತದೆ. ವರ್ಷದ ಬಳಿಕ ಅವರನ್ನು ಕುಶಲ ಬಂಧಿ ಎಂದು ಪರಿಗಣಿಸಲಾಗುತ್ತದೆ. ಆಗ ಅವರಿಗೆ ದಿನಕ್ಕೆ 548 ರೂಪಾಯಿ ಸಂಬಳ ನೀಡಲಾಗುತ್ತದೆ. ವಾರದ ರಜೆ ಪಡೆದು ಕೆಲಸ ಮಾಡಿದರೆ, ಆ ಕೈದಿಗೆ ತಿಂಗಳಿಗೆ 14,248 ರೂಪಾಯಿ ವೇತನ ಸಿಗುತ್ತದೆ. 

ಎರಡು ವರ್ಷಗಳಾದ ಮೇಲೆ ಆ ಕೈದಿಯನ್ನು ಅರೆ ಕುಶಲ ಬಂಧಿ ಎಂದು ಪರಿಗಣಿಸಲಾಗುತ್ತೆ. ಆಗ ಆ ಕೈದಿಗೆ ದಿನಕ್ಕೆ 615 ರೂಪಾಯಿ ಸಂಬಳ ನೀಡಲಾಗುತ್ತದೆ. ವಾರದ ರಜೆ ಪಡೆದು ಕೆಲಸ ಮಾಡಿದರೆ ತಿಂಗಳಿಗೆ 15,990 ರೂಪಾಯಿ ಸಿಗುತ್ತದೆ. ಮೂರು ವರ್ಷ ಅನುಭವ ಆದ ಬಳಿಕ ತರಬೇತಿ ಕೆಲಸಗಾರ ಬಂಧಿ ಎಂದು ಪರಿಗಣಿಸಿ, ಆ ಕೈದಿಗೆ ದಿನಕ್ಕೆ 663 ರೂಪಾಯಿ ಸಂಬಳ ನಿಗದಿಪಡಿಸಲಾಗುತ್ತದೆ. ವಾರದ ರಜೆ ಪಡೆದು ಕೆಲಸ ಮಾಡಿದರೆ ಸಿಗುವ ತಿಂಗಳ ಸಂಬಳ 17,238 ರೂಪಾಯಿ! ಒಟ್ಟಾರೆ ಅಪರಾಧ ಕೃತ್ಯಗಳಲ್ಲಿಭಾಗಿಯಾಗಿ ಜೈಲು ಪಾಲಾಗಿರುವ ಕೈದಿಗಳಿಗೆ 'ಅಚ್ಛೇದಿನ್' ಆರಂಭವಾಗಿವೆ.

Powered by Blogger.