".

Header Ads

ಬೆಳ್ತಂಗಡಿ:- ಅಪರೂಪ ಪತ್ತೆಯಾದ ಹಾವು :- ಸಾರಿಬಳ ಹಾವು


 ಕೊಯ್ಯೂರು ಗ್ರಾಮದ ಅರಂತೊಟ್ಟು ಬಳಿ ಅಪರೂಪದ ಸಾರಿಬಳ ಹಾವು ಪತ್ತೆಯಾಗಿದ್ದು, ಕಾಡಿಗೆ ಬಿಡಲಾಗಿದೆ.ಅರಂತೊಟ್ಟು ದೀಪಕ್ ಮನೆಗೆ ಬಂದ ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿಮರಿಯನ್ನು ನುಂಗುತ್ತಿತ್ತು. ಮನೆಯವರು ತಕ್ಷಣವೇ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಹಾವಿನ ರಕ್ಷಣೆ ಮಾಡಿದ್ದಾರೆ.

ಸಾರಿಬಳ ಅಥವಾ ಅರಣ್ಯ ಬೆಕ್ಕು ಹಾವು (ಫೋರೆಸ್ಟನ್ಸ್ ಕ್ಯಾಟ್ ಸ್ನೇಕ್‌ ) ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡುಬರುವುದು ತೀರಾ ವಿರಾಳ. ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ, ಇಲಿ, ಬಾವಲಿ ಇತ್ಯಾದಿ.

ಇವುಗಳಲ್ಲೂ ಎರಡು ಪ್ರಭೇದಗಳಿದ್ದು ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ, ಇನ್ನೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ, ತಿಳಿಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ. ಕೊಯ್ಯೂರಿನಲ್ಲಿ ಈ ಪ್ರಭೇದದ ಹಾವು ಕಂಡುಬಂದಿದೆ. 11 ವರ್ಷಗಳಿಂದ ಹಾವು ಹಿಡಿಯುತ್ತಿದ್ದು, ತಿಳಿ ಕೆಂಪು ಕಂದು ಬಣ್ಣದ ಸಾರಿಬಳ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ.

Powered by Blogger.