ಯು ಏ ಇ ಯಲ್ಲಿ ಗಾಣಿಗ ಸಂಗಮ : ಸತ್ಕರ್ಮಾದಿಗಳಿಂದ ಸುಕೃತ ಫಲ ಹಾಗು ಆತ್ಮದ ಶುದ್ದಿಯಾಗುತ್ತದೆ - ಶ್ರೀನಿವಾಸ್ ಸಾಫಲ್ಯ
ಯುನೈಟೆಡ್ ಅರಬ್ ಎಮಿರೇಟ್ಸ್ (ಯು ಏ ಇ) ಯಲ್ಲಿ ಗಾಣಿಗ ಸಂಗಮ -2022 ಕಾರ್ಯಕ್ರಮದಲ್ಲಿ ಭಾಗವಸಿದ ಸಾಫಲ್ಯ ಸೇವಾ ಸಂಘ ಮುಂಬೈಯ ಅಧ್ಯಕ್ಷ ಶ್ರೀನಿವಾಸ್ ಸಾಫಲ್ಯರವರು ಗಾಣಿಗ ಹಾಗೂ ಸಪಳಿಗ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ಸಮಾಜದ ಬೆಳವಣಿಗೆಗೆ ಹಾಗು ಸಮುದಾಯದ ಏಳಿಗೆಗೆ ಸಂಘ ಹಾಗು ಸಂಘಟನೆಯ ಪಾತ್ರ ಬಹಳ ಪ್ರಾಮುಖ್ಯವಾಗಿದೆ ಎಂದು ನುಡಿದರು.
ಸುಮಾರು 800 ವರುಷ ಇತಿಹಾಸ ಇರುವ ಉಳ್ಳಾಲ್ತಿ ಧರ್ಮರಸ ಕ್ಷೇತ್ರ ದ ಜೀರ್ಣೋದ್ದಾರದ ಕಾರ್ಯಕ್ರಮ ಹಾಗು ಸತ್ಯನಾರಾಯಣ ಮಹಾಪೂಜೆ, ಸಂಜೆ 4 ಕ್ಕೆ ಫಾರ್ಚ್ಯೂನ್ ಪ್ಲಾಜಾ ಹೋಟೆಲ್, ದುಬೈ ಯಲ್ಲಿ ಜರಗಿತು.
ಸಾಫಲ್ಯ ಸೇವಾ ಸಂಘ ಮುಂಬೈ ಇದರ ಅಧ್ಯಕ್ಸರಾದ ಶ್ರೀಯುತ ಶ್ರೀನಿವಾಸ್ ಸಪಲ್ಯ ರ ಅಧ್ಯಕ್ಷೆತೆಯಲ್ಲಿ ನಡೆದ ಕಾರ್ಯಕ್ರಮ ದೇವಸ್ಥಾನದ ಜೀರ್ಣೋದ್ದಾರ ಸಭೆ, ಭಜನೆ, ರಕ್ತದಾನ ಶಿಬಿರ ಹಾಗೂ ಸತ್ಯನಾರಾಯಣ ಪೂಜೆಯೊಂದಿಗೆ ಸಂಪನ್ನಗೊಂಡಿತು.
ಉದ್ಯೋಗ ಹಾಗು ಉದ್ಯಮ ಸಲುವಾಗಿ ಅರಬ್ ದೇಶದಲ್ಲಿ ನೆಲೆಸಿರುವ ಸಮಾಜದವರನ್ನು ಯು ಏ ಇ ಗಾಣಿಗ ಫ್ಯಾಮಿಲಿ ಎಂಬ ವೇದಿಕೆಯಡಿ ಒಟ್ಟುಗೂಡಿಸುವಲ್ಲಿ ಇಲ್ಲಿಯ ಯುವ ಪ್ರತಿಭೆ ಪ್ರಯತ್ನಶೀಲರಾಗಿದ್ದರೆ. ಪರ ರಾಷ್ಟ್ರದಲ್ಲಿದ್ದು ತಮ್ಮ ದೈನಂದಿನ ಕೆಲಸದೊಂದಿಗೆ ಸಮಾಜದ ಏಳಿಗೆಗಾಗಿ ಪ್ರಯಾತಿಸುತ್ತಿರುವುದು ಬಹಳ ಪ್ರಶಂಸನೀಯವಾಗಿದೆ. ಇದು ಸಂಘ ದ ಬೆಳವಣಿಗೆಗೆ ಪೂರಕವಾಗಿದೆ ಮತ್ತು ನಮ್ಮ ಜಲ -ನೆಲ, ಆಚಾರ -ವಿಚಾರ, ಸಂಸ್ಕೃತಿ - ಸಂಸ್ಕಾರ ದ ಬೆಳವಣಿಗೆಗೆ ಭದ್ರ ಬುನಾದಿಯಾಗುತ್ತದೆ ಎಂದು ನುಡಿದರು.
ಸಾಫಲ್ಯ ಸೇವಾ ಸಂಘದ ಪ್ರದಾನ ಕಾರ್ಯದರ್ಶಿ ಶ್ರೀಮತಿ ಶೋಭಾ ಬಂಗೇರ, ಮಹಿಳಾ ವಿಭಾಗದ ಪರವಾಗಿ ಶ್ರೀಮತಿ ರತಿಕ ಸಪಲ್ಯ, ಶ್ರೀಮತಿ ಪ್ರಮೀಳಾ ಶೇರಿಗಾರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಯುತ ಲೀಲಾಧರ್ ಬಂಗೇರ, ದೀಪಕ್ ಕುಂದರ್, ಕಿರಣ್ ಕುಮಾರ್ ಸಪಳಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದ್ಯಾ ಪುತ್ರನ್, ಕಾರ್ಯದರ್ಶಿ ಶ್ವೇತಾ ಬಂಗೇರ , ರಿತೇಶ್, ಸತೀಶ್, ಪುಷ್ಪ ಬಂಗೇರ, ದಿವ್ಯ, ನಿಶಾಂತ್, ಅನಿತಾ ಪುತ್ರನ್, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಪ್ರತೀಕ್ ಕರ್ಕೇರ, ಈ ಗಾಣಿಗ -2022 ಉತ್ಸವದಲ್ಲಿ ಭಾಗವಹಿಸಿದರು. ಯು ಏ ಇ ಗಾಣಿಗ ಫ್ಯಾಮಿಲಿ ಪರವಾಗಿ ಗೌತಮ್ ಗಾಣಿಗ, ಹರ್ಷದ್ ಸಪಳಿಗ, ಸುಪ್ರೀತ್ ಕುಮಾರ್, ಶೋಧನ್ ಪ್ರಸಾದ್ ಅತ್ತಾವರ್, ಭರತ್ ಅಮೀನ್, ಸತೀಶ್ ಉಳ್ಳಾಲ್, ರಮೇಶ್, ಸೌಜನ್ಯ, ಹೇಮಲತಾ, ಸ್ವರೂಪ್, ಸಂದೀಪ್, ಯಶವಂತ, ಅಶ್ವಿತ, ಸುಭಾಸ್ ನಿತ್ಯಾನಂದ, ಶಶಿಧರ್, ಯತೀಶ್ ಪುತ್ರನ್, ತುಕಾರಾಂ, ರಕ್ಷಿತ್, ದೀಕ್ಷಾ, ಪ್ರಭಾಕರ್, ಕಾರ್ಯಕ್ರಮವನ್ನು ನಡೆಸಿದರು. ಸುಮಾರು 320 ಮಂದಿ ಈ ಜೀರ್ಣೋದ್ದಾರ ಸಭೆ ಹಾಗು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಸಿದರು ಹಾಗು ಮಹಾಪ್ರಸಾದವನ್ನು ಪಡೆದರು.







Post a Comment