".

Header Ads

ಉಡುಪಿಯ ಕಮಲಾಕ್ಷಿ ಸೊಸೈಟಿ ನಿರ್ದೇಶಕರ ಆಸ್ತಿ ಮುಟ್ಟುಗೋಲಿಗೆ ಪೊಲೀಸ್ ಇಲಾಖೆ ಸೂಚನೆ


ಉಡುಪಿಯ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದಿಂದ ನಡೆದಿದೆ ಎನ್ನಲಾದ ಬಹುಕೋಟಿ ಆರ್ಥಿಕ ವಂಚನೆಗೆ ಸಂಬಂಧಪಟ್ಟಂತೆ ಇದೀಗ ಉಡುಪಿ ಪೋಲಿಸರು ತನಿಖೆಯನ್ನು ಚುರುಕುಗೊಳಿಸಿದಲ್ಲದೇ , ಇದೀಗ ಕಮಲಾಕ್ಷಿ ವಿವಿಧೋದ್ದೇಶ ಸಂಘದ ಕಚೇರಿಯನ್ನು ಪೋಲಿಸರು ಸೀಲ್ ಮಾಡಲಾಗಿದೆ.
ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಕ್ಕೆ ಸಂಬಂಧಿಸಿದಂತೆ ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಆಸ್ತಿಗಳಿವೆ ಅವುಗಳನ್ನುಗುರುತಿಸಿ, ಈ ಆಸ್ತಿಗಳನ್ನು ಪರಾಬಾರೆ ಮಾಡಬಾರದು ಎಂದು ಪೌರಾಯುಕ್ತರು ನಗರಸಭೆ, ಜೆಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಉಪನೋಂದಣಾಧಿಕಾರಿಯವರಿಗೆ ಕೋರಿಕೆ ಪತ್ರಗಳನ್ನುಸಲ್ಲಿಸಲಾಗಿದೆ.

Powered by Blogger.