".

Header Ads

ಸಮಾಜದಿಂದ ಪಡೆದು ಸಮಾಜಕ್ಕೆ ಸಮರ್ಪಿಸಿ : ಕೆ. ಪ್ರಕಾಶ್ ಶೆಟ್ಟಿ


















ಸಮಾಜದಿಂದ ಆರ್ಥಿಕವಾಗಿ ಸಧೃಢವಾಗುವ ನಾವು ಸಮಾಜದ ಬಡವರ್ಗಕ್ಕೆ ಆಸರೆಯಾಗಿ ಸಮಾಜದಿಂದ ಪಡೆದು ಮರಳಿ ಸಮಾಜಕ್ಕೆ ಅರ್ಪಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ, ಮಹಾನ್ ಚೇತನರನ್ನು ಸ್ಮರಿಸಿಕೊಂಡು ಹೆತ್ತವರನ್ನು ಗೌರವಿಸುವ ಕೆಲಸ ಸಮಾಜ ಸೇವಾ ಸಂಘಟನೆಗಳು ಜಾಗೃತಿ ಮೂಡಿಸಬೇಕು ಎಂದು ಎಂಆರ್ ಜಿ ಗ್ರೂಪ್ ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ  ಹೇಳಿದರು. 

ಅವರು ಮೂಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ  ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 4ಜಿ 5ಜಿ ಬದಲು ಮಾತಾಜಿ ಪಿತಾಜಿ ಬಗ್ಗೆ ಎಳೆಯರಿಗೆ ಮನವರಿಕೆ ಮಾಡುವ ಜವಾಬ್ದಾರಿ ಪೋಷಕರಿಗಿದೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದರು. 

 ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಒಕ್ಕೂಟದಿಂದ ನಿರಂತರ ಸೇವಾ ಯೋಜನೆಯಲ್ಲಿ ಬಡವರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಇದಕ್ಕೆ ದಾನಿಗಳ ಸಹಕಾರ ಬೇಕು. ಒಕ್ಕೂಟಕ್ಕೆ ಬರುವ ಅರ್ಜಿಗಳನ್ನು ಪರಿಶೀಲಿಸಿ ಸಹಾಯ ಮಾಡಲಾಗುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು. 


ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅವರು ಸೇವಾ ಯೋಜನೆಗಳನ್ನು ವಿವಿಧ ರೀತಿಯಲ್ಲಿ ಒಟ್ಟು 40 ಲಕ್ಷ ರೂ.ವನ್ನು ಶಿಕ್ಷಣ, ಬಡವರ್ಗದ ಮನೆ ರಿಪೇರಿ, ಹೆಣ್ಣು ಮಕ್ಕಳ ಮದುವೆ, ವೈದ್ಯಕೀಯ, ಕ್ರೀಡಾ ನೆರವನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಬ್ರಹ್ಮಣ್ಯ ಧಾರೇಶ್ವರ, ಪಿ ಕಮಲಾಕ್ಷ ಆಚಾರ್, ಡಾ. ಪ್ರಭಾಕರ ಜೋಷಿ, ಗುಡ್ಡ ಪಾಣಾರ, ಎಂ. ಎ. ನಾಯ್ಕ್, ಸರಪಾಡಿ ಅಶೋಕ ಶೆಟ್ಟಿ, ಎಂ. ನಾರಾಯಣ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಯುವವಾಹಿನಿಯ ರಾಜೇಶ್, ದೇವಿದಾಸ ಶೆಟ್ಟಿ, ಕ್ರೀಡಾಪಟು ಅಶ್ವಿನಿ ಅಕ್ಕುಂಜೆ, ಕ್ರೀಡಾಪಟು ಸಾನ್ವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾಂತಾರ ಸಿನಿಮಾದ  ಕಲಾವಿದರನ್ನು ಗೌರವಿಸಲಾಯಿತು.

ಶಾಸಕ ಉಮಾನಾಥ ಎ. ಕೋಟ್ಯಾನ್ ಶುಭ ಹಾರೈಸಿದರು. 
ಪಟ್ಲ ಫೌಂಡೇಶನ್ ಟ್ರಸ್ಟ್ ನ  ಸಹಯೋಗದೊಂದಿಗೆ ಶ್ರೀ ಪಾವಂಜೆ ಯಕ್ಷಗಾನ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.  

ಕಟೀಲು ದೇವಳದ ಲಕ್ಷ್ಮೀ ನಾರಾಯಣ ಆಸ್ರಣ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜೀ ಸಚಿವ ರಮಾನಾಥ ರೈ,  ಪಟ್ಲ ಫೌಂಡೇಶನ್ ಟ್ರಸ್ಟ್ ನ  ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ಬಪ್ಪನಾಡು, ಅರವಿಂದ ಪೂಂಜಾ, ರತ್ನಾಕರ ಶೆಟ್ಟಿ ಮುಂಡ್ಕೂರು, ಸುಭಾಶ್ ಶೆಟ್ಟಿ, ಯೋಗೀಶ್ ಕೊಟ್ಯಾನ್, ಸಂತೋಷ್ ಕುಮಾರ್ ಹೆಗ್ಡೆ, ಉಳ್ತೂರು ಮೋಹನ್ ದಾಸ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಸಿಎ ಸದಾಶಿವ ಶೆಟ್ಟಿ, ಸುಧಾಕರ ಪೂಂಜ, ಸಿಎ ಸುದೇಶ್ ಕುಮಾರ್ ಮತ್ತಿತರರು ಇದ್ದರು. ಡಾ ಮಂಜುಳಾ ಶೆಟ್ಟಿ, ಪ್ರಿಯಾ ಹರೀಶ್ ಶೆಟ್ಟಿ, ರಾಜೇಶ್ವರಿ ಡಿ ಶೆಟ್ಟಿ, ಸುಧಾ ಶೆಟ್ಟಿ, ದೀಪಾ ಶೆಟ್ಟಿ, ಸಾಯಿನಾಥ್ ಶೆಟ್ಟಿ, ಶರತ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್, ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

*ಸಮಾಜದಲ್ಲಿ ವಿಶ್ವಾಸದಿಂದ ಕೆಲಸ ಮಾಡುವವರ ಜತೆಗಿದ್ದೇನೆ : ಕನ್ಯಾನ ಸದಾಶಿವ ಶೆಟ್ಟಿ* 
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟ್ ಉತ್ತಮ ಸಮಾಜ ಸೇವೆ ಮಾಡುತ್ತಿದ್ದು ಸರ್ವ ರೀತಿಯ ಬೆಂಬಲವನ್ನು ಎಲ್ಲರೂ ನೀಡಬೇಕು. ಯಾರೂ ಸಮಾಜಕ್ಕಾಗಿ ವಿಶ್ವಾಸ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ನಾನು ಅವರ ಜತೆಗಿರುತ್ತೇನೆ. ಸಾಮಾನ್ಯ ಮಧ್ಯಮ ವರ್ಗದ ಬಡ ಕುಟುಂಬದಲ್ಲಿ ಜನಿಸಿ ಶಿಕ್ಷಣ ಪಡೆಯಲು ಕಷ್ಟವಾದಾಗ ಬಂಟರ ಸಂಘವು ಆರ್ಥಿಕ ಸಹಾಯ ಮಾಡಿ ಬೆಂಬಲಿಸಿ ಬೆಳೆಸಿದೆ. ಇದೀಗ ನಾನು ಆರ್ಥಿಕವಾಗಿ ಬಲವಾದಾಗ ನಮ್ಮ ಬಂಟ ಸಮಾಜ ಹಾಗೂ ಇತರ ಸಮಾಜಕ್ಕೆ ತನ್ನಿಂದಾಗುವ ಸಹಾಯ ಮಾಡುತ್ತಿದ್ದೇನೆ. ಐಕಳ ಹರೀಶ್ ಶೆಟ್ಟಿ ಅವರ ಮೂಲಕ ಒಕ್ಕೂಟದ ಇರುವಿಕೆ ವಿಶ್ವಕ್ಕೆ ತಿಳಿಯಿತು. ಅವರ ಸಮಾಜ ಸೇವಾ ಕಾರ್ಯದಲ್ಲಿ ನಾನು ಎಂದಿಗೂ ಬೆಂಬಲ ನೀಡುವೆ. ಕೇವಲ ಭವನದ ಕೆಲಸ ಮಾತ್ರವಲ್ಲದೆ ಮುಂದಿನ ಕೆಲವೇ ವರ್ಷಗಳಲ್ಲಿ ಬಿಪಿಎಲ್ ಕಾರ್ಡಿನ ಬಂಟರು ಎಪಿಎಲ್ ಕಾರ್ಡ್ ಹೊಂದುವಷ್ಟು ಬೆಳವಣಿಗೆ ಹೊಂದಲಿ. 

ಸದಾಶಿವ ಶೆಟ್ಟಿಯವರನ್ನು ದೇವರ ರೂಪದಲ್ಲಿ ಕಾಣುತ್ತಿದ್ದೇವೆ : ಐಕಳ
 ಮನುಷ್ಯರು ದೇವರನ್ನು ಕಂಡಿಲ್ಲ. ಆದರೆ ಕೂಳೂರು ಸದಾಶಿವ ಶೆಟ್ಟಿ ಕನ್ಯಾನರಂತಹ ಮಹಾದಾನಿಗಳ ರೂಪದಲ್ಲಿ ದೇವರನ್ನು ಕಾಣುತ್ತಿದ್ದೇವೆ. ಒಕ್ಕೂಟದ ಬೆಳವಣಿಗೆಯಲ್ಲಿ ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ, ಆನಂದ ಶೆಟ್ಟಿ ಮತ್ತಿತರ ಅನೇಕ ದಾನಿಗಳ ಪಾತ್ರವಿದೆ. ಆಶ್ವಿನಿ ಅಕ್ಕುಂಜೆ ಅವರಿಗೆ ಪ್ರಶಸ್ತಿ ಬಂದಿರುವುದು ಎಲ್ಲಾ ಸಮಾಜಕ್ಕೆ ಹೆಮ್ಮೆ. ನಾನು ನನಗಾಗಿ ಬೇಡಿಲ್ಲ, ಉಳ್ಳವರಿಂದ ದಾನ ಪಡೆದು ಇಲ್ಲದವರಿಗೆ ನೀಡಿದ್ದೇನೆ. ಮುಂದೆಯೂ ದಾನಿಗಳ ಸಹಕಾರ ಹಾಗೂ ಕಟೀಲು ಶ್ರೀದೇವಿಯ ಆರ್ಶಿವಾದದಿಂದ ಒಕ್ಕೂಟವು ಸಮಾಜದ ಎಲ್ಲರಿಗೂ ಸಹಾಯ ಮಾಡುವಂತಾಗಲಿ.

ಸದಾಶಿವ ಶೆಟ್ಟರ ಮನಸ್ಸು ಎಲ್ಲರಿಗೂ ಬರಲಿ : ಅಸ್ರಣ್ಣ
 ಕೂಳೂರು ಸದಾಶಿವ ಶೆಟ್ಟಿ ಅವರಂತಹ ಮನಸ್ಸು ಎಲ್ಲರಿಗೂ ಬಂದರೆ ಸಮಾಜದ ಎಲ್ಲರ ಸಮಸ್ಯೆಯನ್ನು ಪರಿಹರಿಸಬಹುದು. ಬಿಪಿಎಲ್ ಕಾರ್ಡಿನವರು ಎಪಿಎಲ್ ಕಾರ್ಡ್ ಹೊಂದುವಷ್ಟು ಅಭಿವೃದ್ಧಿ ಮಾಡಲು ಎಲ್ಲರೂ ಬಯಸಿದರೆ ಸಮಾಜ ರಾಮರಾಜ್ಯವಾಗುತ್ತದೆ. ಕಷ್ಟದವರ ಕಣ್ಣೀರೋರೆಸುವ ಕೆಲಸವನ್ನು ಐಕಳರು ಒಕ್ಕೂಟದ ಮೂಲಕ ಮಾಡುತ್ತಿದ್ದಾರೆ. ಕೇವಲ ಬಂಟರಲ್ಲದೇ ಎಲ್ಲಾ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಮೆಚ್ಚುಗೆ ವಿಷಯ. ಕೇವಲ ಪೂಜೆ, ಪುನಸ್ಕಾರ ಮಾತ್ರವಲ್ಲದೆ ದಾನ ಧರ್ಮದ ಕೆಲಸವು ಮಾಡಿದಾಗ ಹಿಂದೂ ಸಮಾಜವೂ ಉದ್ಧಾರವಾಗುತ್ತದೆ. ಒಕ್ಕೂಟದ ಸಮಾಜಮುಖಿ ಕಾರ್ಯಗಳಿಗೆ ಕಟೀಲು ಶ್ರೀದೇವಿಯು ಒಳಿತನ್ನು ಮಾಡಲಿ.
 
ಕಟೀಲು ಶ್ರೀ ದೇವಿಯ ಅನುಗ್ರಹ ಇರಲಿ : ಪಟ್ಲ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪಟ್ಲ ಫೌಂಡೇಶನ್ ಹಾಗೂ ಒಕ್ಕೂಟ ಬೇರೆಯಲ್ಲ. ಒಂದೇ ರೀತಿಯ ಸಮಾಜಸೇವೆ ಮಾಡುತ್ತಿದೆ. ಐಕಳರ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಕಟೀಲು ಶ್ರೀದೇವಿ ಹಾಗೂ ಪಾವಂಜೆ ಸುಬ್ರಹ್ಮಣ್ಯ ದೇವರು ಮತ್ತಷ್ಟು ಶಕ್ತಿ ನೀಡಿ ಬೆಳೆಸಲಿ.
 
ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿಯ ಅಗತ್ಯ ಇದೆ. ಕೆ.ಪ್ರಕಾಶ್ ಶೆಟ್ಟಿ
ಮೂಲ್ಕಿ ನಮ್ಮ ಸಮಾಜದ ಒರ್ವ ಮಹಾನ್ ದಾನಿ, ಮಹಾನುಭಾವ ಸುಂದರ ರಾಮ್ ಶೆಟ್ಟಿ ಅವರು ಊರು. ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿರುವುದು ಸಂತೋಷದ ತಂದಿದೆ. ಇಂದಿನ ಯುವಜನತೆಗೆ ಶಿಕ್ಷಣದ ಜತೆ ಕೌಶಲ್ಯ ತರಬೇತಿಯ ಅಗತ್ಯವಿದೆ. ಹರೀಶಣ್ಣ ಒಕ್ಕೂಟದ ಮೂಲಕ ಅರ್ಥ ಪೂರ್ಣ ಕಾರ್ಯ ಮಾಡುತ್ತಿದ್ದಾರೆ. ಎಲ್ಲಾ ವಲಯದ ಬಂಟರನ್ನು ಒಗ್ಗೂಡಿಸಿ ಆರ್ಥಿಕ ಹಿಂದುಳಿದವರನ್ನು ಗುರುತಿಸಿ ಸಹಾಯ ಮಾಡುವ ಕಾರ್ಯ ನಿರಂತರವಾಗಿ ನಡೆಯಲಿ. 
 
 ನಾಲ್ ಪಟ್ಲ ಫೌಂಡೇಶ
ಒಕ್ಕೂಟದ ಜತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಒಕ್ಕೂಟದ ನೂತನ ಕಟ್ಟಡ ನಿರ್ಮಾಣದ ಭೂಮಿಗೆ ಶ್ರೀದೇವಿಯ ಆಗಮನವಾಗಿರುವುದು ಸಂತೋಷ ತಂದಿದೆ ಎಂದರು.

 *ಕ್ರೀಡಾಕ್ಷೇತ್ರದಲ್ಲಿ ಬೆಳೆಯಲು ಬಂಟರ ಸಂಘ ಬೆಂಬಲ ನೀಡಿದೆ:ಅಶ್ವಿನಿ* ಕ್ರೀಡಾಕ್ಷೇತ್ರದಲ್ಲಿ ಬೆಳೆಯಲು ಬಂಟರ ಸಂಘವು ನಿರಂತರವಾಗಿ ಬೆಂಬಲ ನೀಡಿದೆ.

ಒಕ್ಕೂಟಕ್ಕೆ ಚಿರ ಋಣಿ : ಜೋಷಿ
ಪ್ರಶಸ್ತಿ ಪಡೆಯಲು ಅರ್ಹರಾದ ಅನೇಕರಿದ್ದಾರೆ. ಒಕ್ಕೂಟವು ನಾಡಿನ ಸಾಧಕರ ನೆಲೆಯಲ್ಲಿ ಗುರುತಿಸಿ ಸನ್ಮಾನಿಸಿ ಗೌರವಿಸಿದಕ್ಕೆ ಚಿರರುಣಿಯಾಗಿದ್ದೇನೆ. ಕೇವಲ ಬಂಟರಲ್ಲದೇ ಬೇರೆ ಸಮಾಜದವರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡುವ ಮೂಲಕ ಒಕ್ಕೂಟವು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ. ಒಕ್ಕೂಟದ ಸಮಾಜಮುಖಿ ಕಾರ್ಯಕ್ರಮಗಳಿಗೆ ಶುಭವಾಗಲಿ, ಕೀರ್ತಿ ವೃದ್ಧಿಸಲಿ.

ಕಲಾವಿದರಿಗೆ ಗೌರವ
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದಲ್ಲಿ ನಟಿಸಿದ ಭಾಸ್ಕರ ಮಣಿಪಾಲ್, ಸತೀಶ್ ಆಚಾರ್ಯ ಪೆರ್ಡೂರು, ಬಾಸುಮ‌ ಕೊಡಗು, ಪ್ರಭಾಕರ ಕುಂದರ್, ನವೀನ್ ಪಚ್ಚನಾಡಿ-ಬೋಂದೆಲ್, ಜ್ಯೋತಿಷ್ ಶೆಟ್ಟಿ, ದೀಪಕ್ ರೈ ಪಾಣಾಜೆ, ರಘು ಪಾಂಡೇಶ್ವರ್, ಪುಷ್ಪರಾಜ್ ಬೊಳ್ಳೂರ್, ಪ್ರತಿಮಾ ನಾಯ್ಕ್, ಚಂದ್ರಕಲಾ, ಸುಕನ್ಯ ಮೊದಲಾದವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಗೌರವಿಸಿದರು.
Powered by Blogger.