".

Header Ads

ಗೋರೆಗಾಂವ್ ಕರ್ನಾಟಕ ಸಂಘ; ದಿ. ಕಟ್ಕೆರೆ ಸಂಜೀವ ಶೆಟ್ಟಿ ದತ್ತಿನಿಧಿ ಕಾರ್ಯಕ್ರಮ


ಗೋರೆಗಾಂವ್  ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ನ್ಯಾ. ದಿ. ಸಂಜೀವ ಶೆಟ್ಟಿಯವರ ಸ್ಮರಣಾರ್ಥ ಅವರ ಪತ್ನಿ ಯಶೋದ  ಶೆಟ್ಟಿ ಮತ್ತು ಮಕ್ಕಳು ಸ್ಥಾಪಿಸಿದ   ಕಾರ್ಯಕ್ರಮವು ಗೋರೆಗಾಂವ್  ಕರ್ನಾಟಕ ಸಂಘದ ವತಿಯಿಂದ ಡಿ.4 ರಂದು ಸಂಜೆ ಗೋರೆಗಾಂವ್ ಪಶ್ಚಿಮ ಕೇಶವ ಗೋರೆ ಸ್ಮಾರಕ ಸಭಾಗೃಹದಲ್ಲಿ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ಅವರು ವಹಿಸಿದ್ದು ನಿಸ್ವಾರ್ಥ ಸಮಾಜಸೇವಕ ಮಹಾನಗರದ ಹಿರಿಯ ಹಾಗೂ ಜನಪ್ರಿಯ ಕನ್ನಡ ಶಿಕ್ಷಕರಾದ ಅಮರೇಶ್ ಪಾಟೀಲ್ ಅವರಿಗೆ ನಾಲ್ಕನೆಯ  ನ್ಯಾ. ದಿ. ಕಟ್ಕರೆ ಸಂಜೀವ ಶೆಟ್ಟಿ ದತ್ತಿನಿಧಿ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿತ್ಯಾನಂದ ಡಿ ಕೋಟ್ಯಾನ್ ಮಾತನಾಡುತ್ತಾ . ದಿ. ಕಟ್ಕರೆ ಸಂಜೀವ ಶೆಟ್ಟಿ ನಮ್ಮೊಂದಿಗಿಲ್ಲದಿದ್ದರೂ ಅವರನ್ನು ಸ್ಮರಿಸುವ ಕೆಲಸ ಅವರ ಮನೆಯವರ ಮೂಲಕ ನಮ್ಮ ಸಂಘದಲ್ಲಿ ಪ್ರತೀ ವರ್ಷ ಆಗುತ್ತದೆ. ನಮ್ಮ ಸಂಘದಲ್ಲಿ ಇಂತಹ ಹಲವು ದತ್ತಿನಿಧಿ ಗಳನ್ನು ಸ್ಥಾಪಿಸಲಾಗಿದ್ದು ಪ್ರತೀ ವರ್ಷ ಆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುತ್ತಿರುವೆವು. ಇಂದು ಅಂತರಾಷ್ಟೀಯ ಮಟ್ಟದಲ್ಲಿ ಡಾಕ್ಟರೇಟ್ ಪದವಿ ಗಳಿಸಿ ಗುರುತಿಸಲ್ಪಟ್ಟ ಕನ್ನಡ ಶಿಕ್ಷಕ, ಸಮಾಜ ಸೇವಕ ಅಮರೇಶ್ ಪಾಟೀಲ್ ಅವರಿಗೆ ಈ ಪ್ರಶಸ್ತಿಯನ್ನು ನೀಡುವುದರ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿದೆ ಎಂದರು. 

ಸನ್ಮಾನವನ್ನು ಸ್ವಿಕರಿಸಿ ಮಾತನಾಡಿದ ಅಮರೇಶ್ ಪಾಟೀಲ್, ಅವರು ದಾರಾವಿ ಯಂತಹ ಕೊಳಗೇರಿಯಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಎಲ್ಲಾ ಸಮುದಾಯದ ಮಕ್ಕಳಿಗೆ ಸಾಧ್ಯವಾದ ಮಟ್ಟಿಗೆ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಿದ್ದು ಕನ್ನಡಿಗರ ಮಕ್ಕಳನ್ನೂ ಗುರುತಿಸಿ ಅವರು ಕನ್ನಡ ಶಾಲೆಗೆ ಸೇರುವಂತೆ ಮಾಡಿದ್ದು ಅಂತವರಲ್ಲಿ ಅನೇಕರು ಇಂದು ಉನ್ನತ ಮಟ್ಟದ ಜೀವನವನ್ನು ನಡೆಸುತ್ತಿದ್ದು ಅದರಲ್ಲಿ ನಾನು ಸಂತುಷ್ಟನಾಗಿರುವೆನು. 


ಈ ಸಂಧರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ ವಿಶ್ವೇಶ್ವರ ಮೇಟಿ, ಶಿವಯೋಗಿ ಸಣ್ಣಮನಿ ಮತ್ತು ಹರೀಶ್ ಪೇಜಾರವ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. 

ಸರಿತಾ ನಾಯಕ್ ಪ್ರಾಸ್ತಾವಿಕ ಬಾಷಣವನ್ನು ಮಾಡಿದ್ದು, ಸಂಘದ ಪಾರುಪತ್ಯರಾದ ದೇವಲ್ಕುಂದ ಭಾಸ್ಕರ್ ಶೆಟ್ಟಿಯವರು ಅಭಿನಂದನಾ ಭಾಷಣ ಮಾಡಿದರು.

ಗೌ.ಪ್ರ. ಕಾರ್ಯದರ್ಶಿ ವಾಣಿ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿ  ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಿರ್ವಹಿಸಿದರು.  ಉಷಾ ಎಸ್ ಶೆಟ್ಟಿ, ಸುಕನ್ಯಾ ನಾಯಕ್ ಮತ್ತು ಸುಜಾತಾ ಶೆಟ್ಟಿ ಯವರು ಪ್ರಾರ್ಥನೆಗೈದರು.

ಕೋಶಾಧಿಕಾರಿ ಆನಂದ ಶೆಟ್ಟಿ ಯವರು ಧನ್ಯವಾದ ಸಮರ್ಪಿಸಿದರು.

ಮಾಜಿ ಅಧ್ಯಕ್ಷರಾದ ಪಯ್ಯಾರು ರಮೇಶ್ ಶೆಟ್ಟಿ, ಸಂಘದ ಕೆಲವು ಹಿರಿಯ ಸದಸ್ಯರುಗಳು,  ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Powered by Blogger.