".

Header Ads

200 ಕ್ಕೂ ಹೆಚ್ಚು ಮಂದಿಯಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ !!


ಮಾಸ್ಕೋದಿಂದ ಗೋವಾಕ್ಕೆ  ತೆರಳುತ್ತಿದ್ದ ವಿಮಾನವನ್ನು ಜಾಮ್‍ನಗರ   ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ವಿಮಾನದಲ್ಲಿ ಬಾಂಬ್   ಇದೆ ಎಂದು ಭಯೋತ್ಪಾದನಾ ನಿಗ್ರಹ ದಳ ಗೆ ಬೆದರಿಕೆ ಮೇಲ್ ಬಂದಿರುವ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಲಾಗಿದೆ.ಬಾಂಬ್ ಇರುವುದರ ಬಗ್ಗೆ ಮಾಹಿತಿ ತಿಳಿದ ಸಿಬ್ಬಂದಿ ತಕ್ಷಣವೇ ಪೈಲಟ್‍ಗೆ ಮಾಹಿತಿ ತಿಳಿಸಿದ್ದಾರೆ. ಆ ಬಳಿಕ ಗೋವಾಕ್ಕೆ ತೆರಳುತ್ತಿದ ವಿಮಾನವನ್ನು ಗುಜರಾತ್‍ನ ಜಾಮ್‍ನಗರದ ವಿಮಾನ ನಿಲ್ದಾಣದಲ್ಲಿ ಫ್ಲೈಟ್   ಲ್ಯಾಂಡ್ ಮಾಡಲಾಗಿತ್ತು.
 ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಇರಿಸಿರುವ ಬಗ್ಗೆ ಎಟಿಸಿಗೆ ಮಾಹಿತಿ ಬಂದ ಕೂಡಲೇ ವಿಮಾನವನ್ನು ಜಾಮ್‌ನಗರಕ್ಕೆ ತಿರುಗಿಸಲಾಯಿತು ಎಂದು ಜಾಮ್‌ನಗರ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು,ತರಾತುರಿಯಲ್ಲಿ  ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಯಿತು ವಿಮಾನವನ್ನು ಪರೀಶೋಧನೆ ಮಾಡಿ, 244 ‌ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಬೆದರಿಕೆಯ ಮೇಲ್ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆ ಮುಂದುವರೆದಿದೆ.

  ಪ್ರಯಾಣಿಕರು ಶಾಂತವಾಗಿರುವಂತೆ ಜಾಮ್‌ನಗರ ಪೊಲೀಸರು ತಿಳಿಸಿದ್ದಾರೆ. ವಿಮಾನದ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ತಂಡಗಳೂ ವಿಮಾನ ನಿಲ್ದಾಣ ತಲುಪಿವೆ. ವಿಮಾನದ ಕೂಲಂಕಷ ತನಿಖೆಯ ನಂತರವೇ ವಿಮಾನವನ್ನು ಮತ್ತಷ್ಟು ಹಾರಾಟಕ್ಕೆ ಅನುಮತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  
Powered by Blogger.