ಕರ್ನಾಟಕ ಸಂಘ ಡೊಂಬಿವಲಿ, ದಂಗಲ್ 2023 ವಾರ್ಷಿಕ ಕ್ರೀಡಾಕೂಟ
ಚಿತ್ರ : ಸತೀಶ್ ಶೆಟ್ಟಿ ಡಾಲಿ
ವರದಿ : ಇನ್ನಂಜೆ ಜಯರಾಮ್.
ಮುಂಬಯಿಯ ಉಪನಗರ ಡೊಂಬಿವಲಿಯ ಪ್ರಸಿದ್ಧ ಸಂಸ್ಥೆ ಕರ್ನಾಟಕ ಸಂಘ ಡೊಂಬಿವಲಿಯ ವಾರ್ಷಿಕ ಕ್ರೀಡಾ ಕೂಟ ದಂಗಲ್ 2023, ಜನವರಿ 22 ರಂದು ಡೊಂಬಿವಲಿ ಜಿಮ್ಖನ ಗ್ರೌಂಡ್ ನಲ್ಲಿ ದಿನವಿಡಿ ನಡೆಯಿತು.
ಮೊದಲಿಗೆ ಡೊಂಬಿವಲಿಯ 12 ವಿವಿಧ ಸಂಘ ಸಂಸ್ಥೆಗಳಿಂದ ಭವ್ಯವಾದ ಪಥಸಂಚಲನ ನಡೆಯಿತು.
ನಂತರ ಕರ್ನಾಟಕ ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.
ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಧ್ಯಕ್ಷ ಸುಕುಮಾರ್ ಎನ್.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡುತ್ತ ಇಂದಿನ ಈ ಅದ್ದೂರಿಯ ಕ್ರೀಡಾಕೂಟದಲ್ಲಿ ಎಲ್ಲಾ ವಯೋಮಾನದವರು ಭಾಗಿಯಾಗಿದ್ದು ನಮಗೆಲ್ಲಾ ಸಂತಸ ತಂದಿದೆ ಕ್ರೀಡಾಕೂಟವನ್ನು ಅತ್ಯಂತ ಶಿಸ್ತು ಬದ್ಧವಾಗಿ ನಡೆಸಲು ಪ್ರತಿಯೊಬ್ಬರೂ ಸಹಕರಿಸುತ್ತಿರಿ ಎಂಬ ವಿಶ್ವಾಸವಿದೆ ಪರಿಸರದ ಎಲ್ಲ ಸಮಾಜ ಬಾಂದವರನ್ನು ಒಗ್ಗೂಡಿಸಿ ಎಲ್ಲ ಸಂಘ, ಸಂಸ್ಥೆಗಳ ಸಹಕಾರದಿಂದ ಹಲವಾರು ವರ್ಷಗಳಿಂದ ಕರ್ನಾಟಕ ಸಂಘ ಡೊಂಬಿವಲಿ ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಇದರ ಪೂರ್ವ ವಲಯದ ಸಮನ್ವಯಕರಾದ ಸುಬ್ಬಯ್ಯ ಶೆಟ್ಟಿ ಅವರು ಮಾತನಾಡುತ್ತಾ ನಮ್ಮೆಲ್ಲರ ಜನ್ಮ ಭೂಮಿ ಕರ್ನಾಟಕವಾದರು ಕರ್ಮ ಭೂಮಿ ಮಹಾರಾಷ್ಟ್ರ ಇಲ್ಲಿ ಕನ್ನಡಿಗರು ಸಂಘಟಿತರಾಗಲು ಸಂಘ, ಸಂಸ್ಥೆಯನ್ನು ಕಟ್ಟಿ ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ. ಕರ್ನಾಟಕ ಸಂಘ ಡೊಂಬಿವಲಿ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿರುವುದನ್ನು ಕಂಡು ಅತೀವ ಸಂತೋಷ ವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತೀರ್ಪುಗಾರ ರಾಗಿ ಸಹಕಾರಿಸಿದವರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಕ್ರೀಡೆ ಪ್ರತಿಯೊಬ್ಬರ ಆರೋಗ್ಯ ಕ್ಕೆ ಉತ್ತಮ ನಮ್ಮೆಲ್ಲರ ಜೀವನದಲ್ಲಿ ಕ್ರೀಡೆಗಳಿಗೆ ಅನನ್ಯ ಮಹತ್ವ ಇದ್ದು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ನಾವು ಶಾರಿರೀಕ ಹಾಗೂ ಮಾನಸಿಕವಾಗಿ ಸದೃಡರಾಗಿ ಯಶಸ್ವಿ ಜೀವನ ಸಾಗಿಸಲು ಸಾಧ್ಯ, ಈ ವರ್ಷವೂ ಕ್ರಿಕೆಟ್ ಅಟಕ್ಕೆ ಬಹಳಷ್ಟು ಸಂಘ- ಸಂಸ್ಥೆಯ ಬೇಡಿಕೆ ಇತ್ತು ಮುಂದಿನ ದಿನದಲ್ಲಿ ಒಂದು ದಿನದ ಕ್ರಿಕೆಟ್ ಅಟವನ್ನು ಆಡಿಸುವ ಬಗ್ಗೆ ಚಿಂತನೆಯನ್ನು ಮಾಡುತ್ತಿದ್ದೇವೆ, ಡೊಂಬಿವಲಿ ಪರಿಸರದ ತುಳು - ಕನ್ನಡಿಗರನ್ನು ಒಗ್ಗೂಡಿಸಿ ಕ್ರೀಡಾಮನೊಭಾವನೆ ಹಾಗೂ ಒಗ್ಗಟನ್ನು ವೃದ್ಧಿಗೊಳಿಸುವುದೆ ಕ್ರೀಡೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.
ವೇದಿಕೆಯ ಮೇಲೆ ದಿವಾಕರ ಶೆಟ್ಟಿ ಇಂದ್ರಾಳಿ ಸುಕುಮಾರ ಎನ್ ಶೆಟ್ಟಿ, ಡಾ ವ್ಹಿ ಎಮ್ ಶೆಟ್ಟಿ, ಪ್ರೋ ಅಜೀತ ಉಮ್ರಾಣಿ,ದೇವದಾಸ್ ಕುಲಾಲ್, ಸುಬ್ಬಯ್ಯ ಶೆಟ್ಟಿ, ವಿಠ್ಠಲ ಎ ಶೆಟ್ಟಿ, ರಾಜೀವ್ ಭಂಡಾರಿ ಆನಂದ ಡಿ ಶೆಟ್ಟಿ ಎಕ್ಕಾರು, ಜಗನ್ನಾಥ ಶೆಟ್ಟಿ, ನ್ಯಾಯವಾದಿ ಆರ್ ಎಂ ಭಂಡಾರಿ, ರವಿ ಸನಿಲ್, ದಿನೇಶ್ ಕುಡ್ವ, ಜಗತ್ಪಾಲ ಶೆಟ್ಟಿ, ಪ್ರಭಾಕರ ಶೆಟ್ಟಿ, ಸುಷ್ಮಾ ಡಿ ಶೆಟ್ಟಿ, ವಿಮಲಾ ವಿ ಶೆಟ್ಟಿ, ಯೋಗಿನಿ ಶೆಟ್ಟಿ, ಪದ್ಮಾ ಮೂಲ್ಕಿ, ಮೊದಲಾದವರು ಉಪಸ್ಥಿತರಿದ್ದರು .
ಇದೇ ಸಂದರ್ಭದಲ್ಲಿ ಸುರೇಖಾ ಪಂಡಿತ್, ಕೋತಾಲಿ ಪ್ರಭು , ಹಾಗೂ ಸಂಘ- ಸಂಸ್ಥೆಗಳ ಪದಾಧಿಕಾರಿಗಳನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಯಿತು
ಕ್ರೀಡಾ ಕೂಟದ ಯಶಸ್ಸಿಗೆ ವಿಶೇಷವಾಗಿ ಜಗಜ್ಯೋತಿ ಕಲಾವೃಂದದ ಸದಸ್ಯರು ಸಹಕರಿಸಿದರು.
ಸಂಘಟಕ, ಸಮಾಜ ಸೇವಕ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಂತರ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಕ್ರೀಡೆಗೆ ಚಾಲನೆ ನೀಡಲಾಯಿತು.
ನಂತರ ಪರಿಸರದ ತುಳುವ, ಕನ್ನಡಿಗರಿಗಾಗಿ ವಯೋಮಿತಿಗೆ ಅನುಗುಣವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ರಾಜೀವ್ ಎಮ್ ಭಂಡಾರಿ ಸ್ವಾಗತಿಸಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉದ್ಯಮಿಗಳು, ಸಮಾಜ ಸೇವಕರುಗಳು ಅದ ರತ್ನಾಕರ ಹೆಗ್ಡೆ, ಸತೀಶ್ ಎನ್. ಶೆಟ್ಟಿ, ಅರುಣ್ ಎಸ್. ಶೆಟ್ಟಿ ಪಡುಕುಡೂರ್, ಸಚಿನ್ ಕೆ ಶೆಟ್ಟಿ, ಹರೀಶ್ ಎಸ್. ಶೆಟ್ಟಿ ಮಾತನಾಡುತ್ತ
ಕರ್ನಾಟಕ ಸಂಘ ಡೊಂಬಿವಲಿಯು ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ
ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಹಾಗೂ, ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಪಥಸಂಚಲನ ದಲ್ಲಿ ಸಿರಿನಾಡ ವೆಲ್ಫೇರ್ ಅಸ್ಸೊಸಿಯೇಶನ್ ಪ್ರಥಮ ಸ್ಥಾನ, ಕುಲಾಲ ಸಂಘ ದ್ವಿತೀಯ ಹಾಗೂ ಶ್ರೀ ಜೈ ಭವಾನಿ ಶನೀಶ್ವರ ಮಂದಿರ ತ್ರಿತಿಯ ಸ್ಥಾನ ಪಡೆಯಿತು.
ರಿಲೇ ಮಹಿಳೆಯರ ಪ್ರಥಮ ಜೈ ಭವಾನಿ ಶನೀಶ್ವರ ಮಂದಿರ, ಅಜ್ಜೆಪಡಾ, ದ್ವಿತೀಯ ಸ್ಥಾನ ಶ್ರೀ ಅಯ್ಯಪ್ಪ ಮಿತ್ರ ಮಂಡಳಿ, ಅಜ್ಜೆಪಡಾ , ತ್ರಿತಿಯ ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ
ರಿಲೇ ಪುರುಷರ ಪ್ರಥಮ ಶ್ರೀ ಅಯ್ಯಪ್ಪ ಮಿತ್ರ ಮಂಡಳಿ, ಅಜ್ಜೆಪಡಾ , ದ್ವಿತೀಯ ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ, ತ್ರಿತಿಯ ಜೈ ಭವಾನಿ ಶನೀಶ್ವರ ಮಂದಿರ, ಅಜ್ಜೆಪಡಾ,
ತ್ರೌ ಬಲ್ ಪಂದ್ಯದಲ್ಲಿ ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ ಸ್ಥಾನ ಪಡೆದರೆ ಸಿರಿನಾಡ ವೆಲ್ಫೇರ್ ಅಸ್ಸೋಸಿಯೇಷನ್ ದ್ವಿತೀಯ ಸ್ಥಾನ ಪಡೆಯಿತು.
ಅಗ್ಗಜಗ್ಗಾಟ ಮಹಿಳೆಯರ ವಿಭಾಗದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ ಹಾಗೂ ಶ್ರೀ ಅಯ್ಯಪ್ಪ ಮಿತ್ರ ಮಂಡಳಿ, ಅಜ್ಜೆಪಡಾ ದ್ವಿತೀಯ ಸ್ಥಾನ ಪಡೆಯಿತು.
ಅಗ್ಗಜಗ್ಗಾಟ ಪುರುಷರ ವಿಭಾಗದಲ್ಲಿ ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ ಹಾಗೂ ಜೈ ಭವಾನಿ ಶನೀಶ್ವರ ಮಂದಿರ, ಅಜ್ಜೆಪಡಾ ದ್ವಿತೀಯ ಸ್ಥಾನ ಪಡೆಯಿತು.
ಪರಿಸರದ 20 ಕ್ಕೊ ಹೆಚ್ಚಿನ ಸಂಸ್ಥೆಗಳು ಈ ಕ್ರೀಡಾಕೂಟ ದಲ್ಲಿ ಪಾಲ್ಗೊಂಡಿದ್ದರು.
ಉಪಾಧ್ಯಕ್ಷ ದೇವದಾಸ್ ಕುಲಾಲ್ ವಿಜೇತ ರ ಯಾದಿ ವಾಚಿಸಿದರೆ, ಸಂಘಟಕ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರವಿ ಸನಿಲ್ ಸಹಕರಿಸಿದರು.
ಸಂಘದ ಉಪಅಧ್ಯಕ್ಷರುಗಳಾದ ಡಾ. ವಿಜಯ್ ಶೆಟ್ಟಿ, ದೇವದಾಸ್ ಎಲ್. ಕುಲಾಲ್, ಗೌರವ ಕಾರ್ಯದರ್ಶಿ ಅಜಿತ್ ಬಿ ಉಮ್ರಾನಿ, ಗೌರವ ಕೋಶಾಧಿಕಾರಿ ಚಿತ್ತರಂಜನ್ ಎಮ್. ಆಳ್ವ, ಜೊತೆ ಕಾರ್ಯದರ್ಶಿ ದಿನೇಶ್ ಬಿ. ಕುಡ್ವ, ಜೊತೆ ಕೋಶಾಧಿಕಾರಿ ಲೋಕನಾಥ್ ಎ. ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಎಮ್. ಭಂಡಾರಿ, ಕಾರ್ಯದರ್ಶಿ ಜಗನಾಥ್ ವಿ. ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಕ್ರೀಡಾಕೂಟ ಸಾಂಗವಾಗಿ ನೆರವೇರುವಲ್ಲಿ ಸಹಕರಿಸಿದರು.
ಡೊಂಬಿವಲಿ ಪರಿಸರದಲ್ಲಿ ಎಲ್ಲ ತುಳುವ ಕನ್ನಡ ಸಂಸ್ಥೆ ಗಳಿಗೆ ಅಗ್ರಜನಂತಿರುವ ಕರ್ನಾಟಕ ಸಂಘ ಡೊಂಬಿವಲಿಯು ಪರಿಸರದ ತುಳುವ ಕನ್ನಡಿಗರಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಎತ್ತಿ ಹಿಡಿಯುವ ಕಾರ್ಯಗಳನ್ನು ಮಾಡುತ್ತಿದ್ದು ಅದಕ್ಕಾಗಿ ಹಲವಾರು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಇಂತಹ ಕ್ರೀಡಾಕೂಟಗಳನ್ನು ಅಯೋಜಿಸುತ್ತಿರುವುದು ಶ್ಲಾಘನೀಯ.
.jpeg)

.jpeg)

.jpeg)

.jpeg)


.jpeg)


.jpeg)

Post a Comment