ನೇತ್ರಾವತಿ ನದಿಯಲ್ಲಿ ಕಲ್ಲಡ್ಕ ಭಜರಂಗದಳ ಮುಖಂಡನ ಶವ ಪತ್ತೆ !- ಸಾವಿನ ಬಗ್ಗೆ ಶಂಕೆ ?
ಬಂಟ್ವಾಳ ತಾಲೂಕಿನ ಸಜೀಪ ನಿವಾಸಿ ರಾಜೇಶ್ ಪೂಜಾರಿ ಮೃತರಾಗಿದ್ದು, ಅವರ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಹಿಂದೂಪರ ಸಂಘಟನೆಗಳ ಮುಖಂಡ ರಾಜೇಶ್ ಸುವರ್ಣ ಅವರ ದ್ವಿಚಕ್ರವಾಹನ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಇಂದು ಬೆಳಗ್ಗೆ ಅನಾಥ ಸ್ಥಿತಿಯಲ್ಲಿ ಬಿದ್ದುಕೊಂಡಿತು. ಈ ಬಗ್ಗೆ ಸಂಶಯಗೊಂಡ ಸಾರ್ವಜನಿಕರು ಯಾರೋ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿಶಾಮಕ ದಳವನ್ನು ಕರೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದಾಗ ರಾಜೇಶ್ ಪೂಜಾರಿಯ ಮೃತದೇಹ ಪತ್ತೆಯಾಗಿದೆ.
ಆರಂಭದಲ್ಲಿ ನೇತ್ರಾವತಿ ನದಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ತಂಡ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಬಳಿಕ ರಾಜೇಶ್ ಪೂಜಾರಿಯ ಮೃತದೇಹ ಪತ್ತೆಯಾಗಿದೆ. ನ್ಆದರೆ ಮೃತದೇಹ ಪತ್ತೆಯಾದ ಬಳಿಕ ಸಾರ್ವಜನಿಕ ರಲ್ಲಿ ಸಾವಿನ ಬಗ್ಗೆ ಊಹಾಪೋಹಗಳು ಸಂದೇಹಗಳು ಹುಟ್ಟಿ ಕೊಂಡಿದೆ.
ಇನ್ನು ರಾಜೇಶ್ ಅವರು ಸಜೀಪ ಮನೆಯಿಂದ ಬರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಹಳೆಯ ಪಾಣೆಮಂಗಳೂರು ಅವರು ಕಳೆದ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಸೇತುವೆಯಲ್ಲಿ ಅಪಘಾತಕ್ಕೀಡಾಗಿ ಅವರು ನದಿಗೆಸೆಯಲ್ಪಟ್ಟಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೋಲಿಸರು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ. ರಾಜೇಶ್ ಪೂಜಾರಿ ಭಜರಂಗದಳ ಕಲ್ಲಡ್ಕ ಪ್ರಖಂಡದ ಗೋ ರಕ್ಷಾ ಪ್ರಮುಖ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Post a Comment