".

Header Ads

ಇಸ್ತ್ರಿ ಹಾಕಿ ಸ್ವಿಚ್‌ ಆಫ್‌ ಮಾಡದ ಕಾರಣ ತಂದ ಆಪತ್ತು – ಪ್ಲಾಟ್ ನಲ್ಲಿ ಬೆಂಕಿ ಅನಾಹುತ !


ಕದ್ರಿ ಕಂಬಳ ರಸ್ತೆಯ ಸಾಯಿ ಜಗನ್ನಾಥ್‌ ಹೆಸರಿನ ಅಪಾರ್ಟ್‌ಮೆಂಟ್‌ನಲ್ಲಿ  ಒಂದರಲ್ಲಿ ಇಸ್ತ್ರೀ ಪೆಟ್ಟಿಗೆ ಆನ್ ಮಾಡಿಟ್ಟ ಕಾರಣ ಅಗ್ನಿ ಅನಾಹುತ ಸಂಭವಿಸಿದ ಘಟನೆ  ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ  ಕಾರಾಗೃಹ  ರಸ್ತೆ ಕದ್ರಿ ಕಂಬಳ ಮಾರ್ಗದ  2ನೇ ಮಹಡಿಯ ಫ್ಲ್ಯಾಟ್‌ನಲ್ಲಿರುವ ಬೆಡ್‌ರೂಂನಲ್ಲಿ ಭಾರೀ ಹೊಗೆ ಒಮ್ಮೆಲೇ ಕಾಣಿಸಿಕೊಂಡಿತ್ತು. 

ಸ್ಥಳೀಯರು ಅಗ್ನಿಶಾಮಕ ದಳದವರಿಗೆ ತಿಳಿಸಿದ   ಕೂಡಲೆ ಸ್ಥಳಕ್ಕೆ ಆಗಮಿಸಿದ  ಕದ್ರಿ ಮತ್ತು ಪಾಂಡೇಶ್ವರ  ಅಗ್ನಿಶಾಮಕ ಸಿಬ್ಬಂದಿಯರು ಕೂಡಲೆ ಕಾರ್ಯಾಚರಣೆ ನಡೆಸಿ  ಬೆಂಕಿ ನಂದಿಸಿದರು. ಹಾಸಿಗೆ ಮತ್ತಿತರ ಪರಿಕರಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

 ಕಂಬಳ ಫ್ಲಾಟ್ ನಗರದ ವೈದ್ಯರೊಬ್ಬರಿಗೆ ಸೇರಿದ್ದೆನ್ನಲಾಗಿದ್ದು, ಅವರು ಆಸ್ಪತ್ರೆಗೆ ಹೋಗುವ ಮುನ್ನ ಬಟ್ಟೆಗೆ ಇಸ್ತ್ರಿ ಹಾಕಿ ಸ್ವಿಚ್‌ ಆಫ್‌ ಮಾಡದ ಕಾರಣ ಬೆಂಕಿ ಹಿಡಿಯಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.

 

Powered by Blogger.