".

Header Ads

ಬಿಲ್ಲವರ ಅಸೋಸಿಯೇಷನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಹರಶಿನ ಕುಂಕುಮ ಕಾರ್ಯಕ್ರಮ



ಬಿಲ್ಲವರ ಅಸೋಸಿಯೇಷನ್, ಮುಂಬೈಯ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಹರಶಿನ ಕುಂಕುಮ ಕಾರ್ಯಕ್ರಮವು ರವಿವಾರ ದಿನಾಂಕ 15.01.2023 ರಂದು ಅಪರಾಹ್ನ 4 ರಿಂದ ಸ್ಥಳೀಯ ಕಚೇರಿಯ ಸಭಾಗ್ರಹದಲ್ಲಿ ಬಹಳ ಸಂಭ್ರಮದಿಂದ ನಡೆಯಿತು.ಪ್ರಾರಂಭದಲ್ಲಿ ಪುರೋಹಿತರಾದ ಶ್ರೀ ಐತ್ತಪ್ಪ ಸುವರ್ಣ ರವರು ಗುರುಪೂಜೆ ನೆರವೇರಿಸಿದರು.

ಕಾರ್ಯಾಧ್ಯಕ್ಷರಾದ ಶ್ರೀ ಚಂದ್ರಹಾಸ್ ಪಾಲನ್ ಹಾಗು ಗೌರವ ಕಾರ್ಯಾಧ್ಯಕ್ಷರಾದ ಶ್ರೀ ದೇವರಾಜ್ ಪೂಜಾರಿ ಹಾಗು ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಜೊತೆ ಕಾರ್ಯದರ್ಶಿ ರವಿ ಸನಿಲ್, ಹಾಗು ಶ್ರೀಮತಿ ಶಕುಂತಲಾ ಕೋಟಿಯನ್ ರವರೊಂದಿಗೆ ಮುಖ್ಯ ಅತಿಥಿಗಳಾದ ಅಡ್ವೋಕೇಟ್ ಶ್ರೀಮತಿ ಸರೋಜಾ ಪೂಜಾರಿ,, ಸನ್ಮಾನ ಮೂರ್ತಿಗಳಾದ ಶ್ರೀಮತಿ ರಾಜಶ್ರೀ ಗಂಗಾಧರ್ ಪೂಜಾರಿ   ಮತ್ತು ಕಾರ್ಯಕಾರಿ ಸಮಿತಿಯ ಸದ್ಯಸರು, ಮಹಿಳಾ ವಿಭಾಗದ ಕಾರ್ಯಕರ್ತೆಯರಾದ ಶ್ರೀಮತಿ ಗುಣವತಿ ಎಸ್ .ಪೂಜಾರಿ, ಶ್ರೀಮತಿ ಸುಲೋಚನಾ ಆರ್.ಪೂಜಾರಿ, ಶ್ರೀಮತಿ ಯಶೋದಾ ಕರ್ಕೇರ, ಶ್ರೀಮತಿ ವಿನೋದ ಜೆ ಪೂಜಾರಿ, ಶ್ರೀಮತಿ ವಸಂತಿ ಜೆ ಅಮೀನ್, ಶ್ರೀಮತಿ ದೇವಿಕಾ ಸಾಲಿಯಾನ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾದ ಸದಸ್ಯೆರಿಂದ  ದೇವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಚಂದ್ರಹಾಸ್ ಪಾಲನ್ ವಹಿಸಿದರು. ಗೌರವ ಕಾರ್ಯಾಧ್ಯಕ್ಷರಾದ ಶ್ರೀ ದೇವರಾಜ್ ಪೂಜಾರಿ ಹಾಗು ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಜೊತೆ ಕಾರ್ಯದರ್ಶಿ ರವಿ ಸನಿಲ್ ಹಾಗು ಮಹಿಳಾ ವಿಭಾಗದ ಕಾರ್ಯದ್ಯೆಕ್ಷೆ ಶ್ರೀಮತಿ ಶಕುಂತಲಾ ಕೋಟಿಯನ್  ರವರೊಂದಿಗೆ ಮುಖ್ಯ ಅತಿಥಿಗಳಾದ ಅಡ್ವೋಕೇಟ್ ಶ್ರೀಮತಿ ಸರೋಜಾ ಪೂಜಾರಿ,, ಸನ್ಮಾನ ಮೂರ್ತಿಗಳಾದ ಶ್ರೀಮತಿ ರಾಜಶ್ರೀ ಗಂಗಾಧರ್ ಪೂಜಾರಿ   ಮತ್ತು ಕಾರ್ಯಕಾರಿ ಸಮಿತಿಯ ಸದ್ಯಸರು , ಮಹಿಳಾ ವಿಭಾಗದ ಕಾರ್ಯಕರ್ತೆಯರಾದ ಶ್ರೀಮತಿ ಗುಣವತಿ ಎಸ್ .ಪೂಜಾರಿ, ವೇದಿಕೆಯಲ್ಲಿ ಉಪ್ಪಸ್ಥಿತಾಡಿದ್ದರು. ಶ್ರೀಮತಿ ವಸಂತಿ ಅಮೀನ್ ರವರು ಎಲ್ಲರನ್ನು ಸ್ವಾಗತಿಸಿದರು, ಶ್ರೀಮತಿ ಯಶೋದಾ ಕರ್ಕೇರ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ಶ್ರೀಮತಿ ಗುಣವತಿ ಪೂಜಾರಿ ಸನ್ಮಾನಿತರ ಪರಿಚಯವಿತ್ತರು. ಶ್ರೀಮತಿ ದೇವಿಕಾ ಸಾಲಿಯಾನ್ ಹರಸಿನ ಕುಂಕುಮ ಬಗ್ಗೆ ವಿವರಿಸಿದರು. ಅಡ್ವೋಕೇಟ್ ಶ್ರೀಮತಿ ಸರೋಜಾ ಪೂಜಾರಿ ಯವರಿಗೆ ಶಾಲು,ಪುಷ್ಪ ನೀಡಿ ಗೌರವಿಸಲಾಯಿತು. ಶ್ರೀ ರವಿ ಸನಿಲ್ ರವರು ಹರಸಿನ ಕುಂಕುಮದ ಮಹತ್ವದ ಬಗ್ಗೆ ವಿವರವಾಗಿ ತಿಳಿ ಹೇಳಿದರು.

ಸನ್ಮಾನ ಮೂರ್ತಿಗಳಾದ ಶ್ರೀಮತಿ ರಾಜಶ್ರೀ ಗಂಗಾಧರ್ ಪೂಜಾರಿ ರವರಿಗೆ ಗಣ್ಯರ ಸಮುಖದಲ್ಲಿ ಶಾಲು,ಪುಷ್ಪ ನೀಡಿ ಸನ್ಮಾನಿಸಲಾಯಿತು.  

ಮುಖ್ಯ ಅತಿಥಿಯಾದ ಅಡ್ವೋಕೇಟ್ ಶ್ರೀಮತಿ ಸರೋಜಾ ಪೂಜಾರಿ ಯವರು ಗ್ರಹಿಣಿಯರಿಗೆ ಮಹತ್ವದ ಸೂಚನೆ ಯನ್ನು ನೀಡಿದರು ಹಾಗು ಯಾವುದೇ ಕೆಲಸ ಕಾರ್ಯಗಳಿಗೆ ಮಹಿಳೆ ಎಂಬ ಭಾವನೆಯಿಂದ  ಹಿಂಜರಿಯ ಬಾರದು ಎಂದು ಕಿವಿ ಮಾತು ಹೇಳಿದರು. ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗು ವಿದ್ಯಾಭ್ಯಾಸ ಹೊಂದಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಎಂದರು.

ಹರಸಿನ ಕುಂಕುಮ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಸಹಕರಿಸಿದ ದಾನಿಗಳಾದ, ಶ್ರೀ ಶ್ರೀಧರ್ ಅಮೀನ್, ಶ್ರೀಮತಿ ವೀಣಾ ಚಂದ್ರಹಾಸ್ ಪಾಲನ್, ಶ್ರೀಮತಿ ಕುಶ ರವಿ ಸನಿಲ್, ,ಶ್ರೀಮತಿ ಹೇಮಾ ದೇವರಾಜ್ ಪೂಜಾರಿ, ಶ್ರೀಮತಿ ಗುಲಾಬಿ ಬಾಬು ಪೂಜಾರಿ ,ಶ್ರೀಮತಿ ಚಾಂದಿನಿ ರಾಮಚಂದ್ರ ಬಂಗೇರ,ಶ್ರೀಮತಿ ಶೈಲಾ ರಾಜ್ ಪೂಜಾರಿ,ಶ್ರೀಮತಿ ಕುಸುಮ ಕೋಟಿಯನ್,ಶ್ರೀಮತಿ ಲಲಿತ ಧರ್ಮರಾಜ್ ಪೂಜಾರಿ,ಶ್ರೀಮತಿ ಶರ್ಮಿಳಾ ಸುವರ್ಣ ,ಶ್ರೀಮತಿ ಸೌಜನ್ಯ ಸತೀಶ್ ಕೋಟಿಯನ್ , ಶ್ರೀ ಶ್ರೀಮತಿ ಸುಪ್ರಿಯಾ ಸಚಿನ್ ಪೂಜಾರಿಶ್ರೀಮತಿ ದೇವಿಕಾ ಕೆ ಸಾಲಿಯಾನ್, ಗುರುಪೂಜೆ ಮಾಡಿ ಸಹಕರಿಸಿದ್ ಐತಪ್ಪ ಸುವರ್ಣ, ಧರ್ಮರಾಜ್ ಪೂಜಾರಿ, ಫೋಟೋಗ್ರಾಫರ್ ಶ್ರೀ ಧನಂಜಯ್ ಪೂಜಾರಿ ಹಾಗು ಅನೇಕ ದಾನಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

ಶ್ರೀಮತಿ ವಿನೋದ ಜೆ ಪೂಜಾರಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ನೀಡಿದರು, ಶ್ರೀಮತಿ ಸುಲೋಚನಾ ಪೂಜಾರಿ ಕಾರ್ಯಕ್ರಮ ನೀರೂಪಿಸಿದರು. ಶ್ರೀಮತಿ ವಸಂತಿ ಅಮೀನ್ ಹಾಗು ದೇವಿಕಾ ಸಾಲಿಯಾನ್, ಯಶೋದಾ ಕರ್ಕೇರ, ಗುಣವತಿ ಪೂಜಾರಿ ಸಹಕರಿಸಿದರು.ಕೊನೆಯಲ್ಲಿ ಧನ್ಯವಾದ ನೀಡಿದ ನಂತರ ಮಹಿಳೆಯರು ಹರಸಿನ ಕುಂಕುಮನೀಡಿ ಸಂಭ್ರಮಿಸಿದರು ಹಾಗು ನೆನಪಿನ ಕಾಣಿಕೆ , ಎಳ್ಳಿನ ಉಂಡೆ ಹಾಗು ಉಪಹಾರ ವಿತರಿಸಲಾಯಿತು.

ಸಂದರ್ಭದಲ್ಲಿ ಡೊಂಬಿವಲಿ ಸ್ಥಳೀಯ ಸಮಿತಿಯ ಉಪಕಾರ್ಯಧ್ಯಕ್ಷರಾದ ಶ್ರೀ ಶ್ರೀಧರ್ ಅಮೀನ್, ಶ್ರೀ ಪುರಂದರ ಪೂಜಾರಿ, ಕಾರ್ಯಧರ್ಶಿ ಶ್ರೀ ಸಚಿನ್ ಪೂಜಾರಿ, ಕೋಶಾಧಿಕಾರಿ ಶ್ರೀ ಆನಂದ್ ಪೂಜಾರಿ, ಜಗನಾಥ್ ಸನಿಲ್, ಮಂಜಪ್ಪ ಪೂಜಾರಿ, ಜಗದೀಶ್ ಕೋಟಿಯನ್ ,ರಾಜೇಶ್ ಕೋಟಿಯನ್, ಈಶ್ವರ್ ಕೋಟಿಯನ್, ಹಾಗು ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶ್ವಸಿಯಾಗಲು ಸಹಕರಿಸಿದರು.

Powered by Blogger.