".

Header Ads

ಉಡುಪಿ:- ಮಂಗಳೂರು ,ಬೆಂಗಳೂರು ಮಾದರಿಯಲ್ಲಿ ಸಂತೆಕಟ್ಟೆಯಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಸಂಚಾರಕ್ಕೆ ತೊಂದರೆ !!!


ಮಂಗಳೂರು ,ಬೆಂಗಳೂರು ಮಾದರಿಯಲ್ಲಿ ಉಡುಪಿಯಾ  ಸಂತೆಕಟ್ಟೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಗೊಣಗಲಾರಂಭಿಸಿದ್ದಾರೆ.
ಉಡುಪಿಯಾ ಜಿಲ್ಲೆಯ ಸಂತೆಕಟ್ಟೆಯಲ್ಲಿ ಬಸ್ಸು ನಿಲ್ದಾಣದ ಬಳಿ ತೆರೆದ ಚರಂಡಿ ಇದೆ ಅದನ್ನು ಮುಚ್ಚಿಲ್ಲ. ವೃದ್ದರು , ಶಾಲಾ ಮಕ್ಕಳು   ಬಸ್ ನಿಲ್ದಾಣದ ರಸ್ತೆ ಸೇರಿದಂತೆ ನಾನಾ ಕಡೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದ್ದು, ಸಾರ್ವಜನಿಕರು ನಿತ್ಯ ತೊಂದರೆ ಪಡುತ್ತಿದ್ದಾರೆ.


ಕುಂದಾಪುರ ಬ್ರಹ್ಮಾವರ ಕಡೆ ಹೋಗುವ ಬಸ್ಸುಗಳನ್ನು ಪಬ್ಲಿಕ್ ಟೊಯಿಲೆಟ್ ಪಕ್ಕದ ಸರ್ವಿಸ್ ರೋಡಲ್ಲಿ ನಿಲ್ಲುವ ಹಾಗೆ ಹಾಗೂ ಕಲ್ಯಾಣ ಪುರ , ನೇಜಾರ್, ಬೆಂಗ್ರೆ ಹೂಡೆ ಗೆ ಹೋಗುವ ಬಸ್ಸುಗಳನ್ನು ಸಂತೆಕಟ್ಟೆ ಮೀನು ಮಾರ್ಕೆಟ್ ಹತ್ತಿರ ನಿಲ್ಲಿಸಿದ್ರೆ ಸಮಸ್ಯೆ ತುಂಬಾ ಬಗೆಹರಿಸಲು ಸಹಾಯ ಆಗುತ್ತದೆ. ಇಲ್ಲಿನ ಬಸ್ ನಿಲ್ದಾಣದ ಬಳಿ ಖಾಸಗಿ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಿದ್ದರಿಂದ ಬಸ್‌ಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಬಹುತೇಕ ಖಾಸಗಿ ವಾಹನಗಳು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.   ರಸ್ತೆ ಅಕ್ಕಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ  ನಿತ್ಯ ರೋಗಿಗಳನ್ನು ಕರೆದುಕೊಂಡು ಹೋಗುವ ಅಂಬ್ಯುಲೆನ್ಸ್ ಗಳು
  ಸಿಕ್ಕಾಪಟ್ಟೆ ಟ್ರಾಫಿಕ್   ಜಾಮ್ ನಲ್ಲಿ ಸಿಲುಕಿ  ರೋಗಿಗಳ ಜೀವ ಉಳಿಸಲು ಪರದಾಡುವ ಪರಿಸ್ಥಿತಿಯಾಗುತ್ತಿದೆ.  ಇಲ್ಲಿ ಬರುವ ಅಂಬ್ಯುಲೆನ್ಸ್ ಗಳು ಎಷ್ಟೇ ಸೈರನ್ ಹಾಕಿದರೂ ರೋಗಿಗಳನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ದುಸ್ತರವಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು    ಆದಷ್ಟು ಬೇಗ ಸಹಕರಿಸಿ  ಸಮಸ್ಯೆ ಅರಿತು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮುಂದಾಗಬೇಕು .ಟ್ರಾಫಿಕ್ ಜಾಮ್ ಸಮಸ್ಯೆಗೆ ಕಿಂಚಿತ್ತೂ ಗಮನ ಹರಿಸದೇ ಇರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.























Powered by Blogger.