".

Header Ads

ಪ್ಲಾಸ್ಟಿಕ್ ಡ್ರಮ್​ನಲ್ಲಿ‌ ಶವ ಪತ್ತೆ ಪ್ರಕರಣ: ಮಹಿಳೆಯ ಗುರುತು ಇನ್ನೂ ನಿಗೂಢ !



 ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ‌ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣದ ತನಿಖೆಯಲ್ಲಿರುವ ಪೊಲೀಸರಿಗೆ ಹಂತಕರಷ್ಟೇ ಅಲ್ಲ, ಮೃತ ಮಹಿಳೆ ಗುರುತು ಕೂಡಾ ಸಿಕ್ಕಿಲ್ಲ.
ಜನವರಿ 4ರಂದು ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿನೀಲಿ ಬಣ್ಣದ ಡ್ರಮ್ನಲ್ಲಿ ರಕ್ತ ಸಿಕ್ತ ಸ್ಥಿತಿಯಲ್ಲಿ ಮಹಿಳೆ ಯ ಕೊಳೆ ತ ಸ್ಥಿತಿಯಲ್ಲಿತ್ತು. ಮೃತದೇಹವನ್ನು ಪ್ಲಾಸ್ಟಿಕ್ ಟೇಪ್ನಿಂದ ಸುತ್ತಿಅದರ ಮೇಲೆ ಬಟ್ಟೆಗಳನ್ನು ಮಡಚಿ ಮುಚ್ಚಳ ಹಾಕಲಾಗಿತ್ತು. ರೈಲ್ವೇ ಎಸ್ಪಿ ಸೌಮ್ಯಲತಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಮೃತಳ ಗುರುತು ಹಾಗೂ ಹಂತಕರ ಪತ್ತೆಗಾಗಿ ಯಶವಂತಪುರ ರೈಲ್ವೇ ನಿಲ್ದಾಣ ಇನ್ಸ್ಪೆಕ್ಟರ್ ಪ್ರಭಾಕರ್ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು.ಪ್ರಾಥಮಿಕ ತನಿಖೆಯಲ್ಲಿ ಮೃತ ಮಹಿಳೆ ಉತ್ತರ ಭಾರತದ ಮೂಲದವಳು ಎಂದು ಶಂಕಿಸಿದ್ದರು. ಇದರಂತೆ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಈವರೆಗೂ ಮಹಿಳೆ ಯ ಗುರುತಾಗಲೀ ಅಥವಾ ಆರೋ ಪಿಗಳ ಬಗ್ಗೆ ಸ್ಪಷ್ಟ ಸುಳಿವಾಗಲೀ ಸಿಕ್ಕಿಲ್ಲ. 
ಇದುವರೆಗೂ ಮಹಿಳೆ ಯ ವಿಚಾರವಾಗಿ ಆಕೆಯ ಮನೆಯವರು ಅಥವಾ ಸಂಬಂಧಿಕರು ಯಾರೂ ಬಾರದೇ ಇರುವುದು ಪೊಲೀಸರ ನಿದ್ದೆಗೆಡಿಸಿದೆ.  ಇತ್ತೀಚೆಗೆ ಯಾವ ಸ್ಥಳದಲ್ಲಿಡ್ರಮ್ಗಳನ್ನು ಸಾಗಿಸಲಾಗಿತ್ತುಎಂಬುದರ ಬಗ್ಗೆಮಾಹಿತಿ ಕೇಳಿದ್ದಾರೆ. ದಕ್ಷಿಣ ಭಾರತದಲ್ಲಿಬಹುತೇಕ ಕಡೆ ಡ್ರಮ್ ಸರಬರಾಜು ಮಾಡಿದ್ದುಶೀಘ್ರದಲ್ಲಿವಿವರ ಒದಗಿಸುವುದಾಗಿಯೂ ಕಂಪನಿ ತಿಳಿಸಿದೆ ಎಂದು ರಾಜ್ಯ ರೈಲ್ವೆ ಎಸ್ಪಿ ಎಸ್.ಕೆ.ಸೌಮ್ಯಲತಾ ತಿಳಿಸಿದರು.


Powered by Blogger.