".

Header Ads

ಖ್ಯಾತ ಸಂಗೀತ ನಿರ್ದೇಶಕ, ಗಾಯಕ 'ಎ.ಆರ್ ರೆಹಮಾನ್' ಸ್ಟುಡಿಯೋದಲ್ಲಿ ದುರಂತ ; ವಿದ್ಯುತ್ ಸ್ಪರ್ಶದಿಂದ ಲೈಟ್ ಮ್ಯಾನ್ ಸಾವು



ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಎ.ಆರ್ ರೆಹಮಾನ್ ಅವರ ಸ್ಟುಡಿಯೋದಲ್ಲಿ ಅಗ್ನಿ ಪ್ರಮಾದ ಸಂಭವಿಸಿದ್ದು, ಒರ್ವ  ಸಾವನ್ನಪ್ಪಿದ್ದಾನೆ. ಸಧ್ಯ ಈ ಘಟನೆ ಬಗ್ಗೆ ತಮಿಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಸಂಪೂರ್ಣ ವಿವರ ತಿಳಿಯಬೇಕಿದೆ.

 
ಚೆನ್ನೈನ ಪಂಚಥಾನ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಹಮಾನ್ ಕಾರ್ಯಕ್ರಮ ಆಯೋಜಿಸಲಿದ್ದು, ಇದಕ್ಕಾಗಿ ವ್ಯವಸ್ಥೆಗಳು ನಡೆಯುತ್ತಿವೆ.   ರೆಹಮಾನ್ ಅವರು ಪಂಚಥಾನ್ ಸ್ಟುಡಿಯೋದಿಂದ ಲೈವ್ ಶೋಗಳು ಮತ್ತು ಸಂಗೀತ ಕಚೇರಿಗಳನ್ನ ಮಾಡುತ್ತಿದ್ದು, ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ಈ ಸ್ಟುಡಿಯೊವನ್ನ ಸ್ಥಾಪಿಸಿದರು.  ಈ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಲೈಟ್ ಹಾಕುವ ವೇಳೆ ಅವಘಡ ಸಂಭವಿಸಿ ವಿದ್ಯುತ್ ಸ್ಪರ್ಶದಿಂದ ಲೈಟ್ ಮ್ಯಾನ್ ಸಾವನ್ನಪ್ಪಿದ್ದಾರೆ. ಲೈಟ್ ಬದಲಾಯಿಸುವಾಗ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ. ವಿದ್ಯುತ್ ಸ್ಪರ್ಶದ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿರುವಂತಿದೆ.

Powered by Blogger.