ಬಾಲಕ ಮತ್ತು ವೃದ್ಧೆಯನ್ನು ಬಲಿ ಪಡೆದ ನರಭಕ್ಷಕ ಚಿರತೆ:- ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ
ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿಯಲ್ಲಿ ಇತ್ತೀಚೆಗೆ ಬಾಲಕ ಮತ್ತು ವೃದ್ಧೆಯನ್ನು ಬಲಿ ಪಡೆದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿಬಲಿ ಪಡೆದ ಪ್ರದೇಶಗಳಲ್ಲಿ ಸುಮಾರು 19 ಬೋನ್ ಗಳನ್ನು ಇರಿಸಲಾಗಿತ್ತು. ಜ.20 ರಂದು ಕನ್ನಾಯಕನಹಳ್ಳಿಯಲ್ಲಿ ವೃದ್ಧೆಯನ್ನು ಬಲಿ ಪಡೆದಿದ್ದ ಚಿರತೆ ಮರುದಿನ ಸಂಜೆ ಹೊರಳಹಳ್ಳಿ ಬಳಿ ಬಾಲಕನ ಮೇಲೆ ದಾಳಿ ಮಾಡಿ ಕೊಂದಿದ್ದಲ್ಲದೇ, ಅರ್ಧ ದೇಹವನ್ನು ತಿಂದಿತ್ತು. ಘಟನೆಯನ್ನು ಗಂಭಿರವಾಗಿ ಪರಿಗಣಿಸಿದ್ದ ಸರ್ಕಾರ ಚಿರತೆ ಕಂಡಲ್ಲಿ ಗುಂಡಿಕ್ಕಿ ಸಾಯಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿತ್ತು.
ಇಪತ್ತಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ ಬಳಸಿ ಚಿರತೆ ಅಡಗು ತಾಣ ಪತ್ತೆ ಹಚ್ವಿದ್ದ ಇಲಾಖೆ, ಆ ಸ್ಥಳದಲ್ಲಿ ತುಮಕೂರಿನಿಂದ ತರಿಸಿದ್ದ ದೊಡ್ಡ ಬೋನ್ ಅಳವಡಿಸಲಾಗಿತ್ತು. ಬುಧವಾರ ರಾತ್ರಿ ಬೋನ್ ನಲ್ಲಿ ಹೊರಳಹಳ್ಳಿ ಬಳಿ ಚಿರತೆ ಸೆರೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment