ಬೆಂಗಳೂರಿನಿಂದ ಮುಂಬೈಗೆ ಜೊಮ್ಯಾಟೊ ಮೂಲಕ ಬಿರಿಯಾನಿ ಆರ್ಡರ್ ಮಾಡಿದ ಯುವತಿ!
ಮುಂಬೈನ ಯುವತಿಯೊಬ್ಬಳು ಶನಿವಾರ ಬೆಂಗಳೂರಿನ ಖ್ಯಾತ ಮೇಘನಾ ಫುಡ್ಸ್‌ನಿಂದ 2,500 ರೂಪಾಯಿ ಮೌಲ್ಯದ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಕುಡಿದ ನಶೆಯಲ್ಲಿ ನಾನು ಬೆಂಗಳೂರಿನಿಂದ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆ ಎಂದು ಸುಭಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ, ಸುಭೀ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನಿಮ್ಮ ಹ್ಯಾಂಗೋವರ್ ಸಂತೋಷದಾಯಕವಾಗಿರುತ್ತದೆ. ನಿಮ್ಮ ಅನುಭವದ ಬಗ್ಗೆ ಬರೆಯಿರಿ ಎಂದು ಹೇಳಿದೆ.ಮುಂಬೈಯ ಯುವತಿ ಬೆಂಗಳೂರಿನ ರೆಸ್ಟೋರೆಂಟ್ ನಿಂದ ಫುಡ್ ಆರ್ಡರ್ ಹೇಗೆ ಮಾಡಿದ್ದಾಳೆ ಎಂಬುದು ಎಲ್ಲರಲ್ಲಿ ಕುತೂಹಲ ಹುಟ್ಟಿಸಿದೆ.
ಅಂದಹಾಗೆ Zomato Intercity Legends ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಪ್ರಸ್ತುತ ಫುಡ್ ಡೆಲಿವರಿ ಫ್ಲಾಟ್ ಫಾರ್ಮ್ ಈ ಅವಕಾಶವನ್ನು ಬಳಸಿಕೊಂಡಿದೆ.ಜೊಮ್ಯಾಟೊ ಲೆಜೆಂಡ್ಸ್ ಎಂಬುದು Zomato ನ ಹೊಸ ಕೊಡುಗೆಯಾಗಿದ್ದು, ಇದು ಖಾದ್ಯದ ಶೆಲ್ಫ್ ಅವಧಿ ಹೆಚ್ಚಿಸುವ ಮೊಬೈಲ್ ಶೈತ್ಯೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ನಗರಗಳಾದ್ಯಂತ ಖ್ಯಾತ ರೆಸ್ಟೋರೆಂಟ್‌ಗಳಿಂದ ಭಾರತದ ಅತ್ಯಂತ ಸಾಂಪ್ರದಾಯಿಕ ಭಕ್ಷ್ಯಗಳ ವಿತರಣೆಯನ್ನು ಖಚಿತಪಡಿಸುತ್ತದೆ. ಅಂದಹಾಗೆ, ಈ ಕೊಡುಗೆಯನ್ನು ಪ್ರಯತ್ನಿಸಲು ಈ ಮಾಹಿತಿಯು ನಿಮಗೆ ಸಹಾಯ ಮಾಡುತ್ತದೆ ಎಂದು ಜೊಮ್ಯಾಟೊ ಹೇಳಿದೆ.

Post a Comment