".

Header Ads

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ-ಕ್ರೀಡೋತ್ಸವದ ಸಮಾರೋಪ

ಸಮುದಾಯ ಬಾಂಧವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವುದೆ ಒಂದು ಗೆಲುವು : ಎನ್.ಟಿ. ಪೂಜಾರಿ

ಕ್ರೀಡೋತ್ಸವ ಎನ್ನುವುದು ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವ ಹಬ್ಬವಿದ್ದಂತೆ ಪುಟಾಣಿಗಳಿಂದ ಹಿಡಿದು ಹಿರಿಯರವರೆಗೆ ಯಾವುದೇ ತಾರತಮ್ಯವಿಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು ನೋಡಿದಾಗ ತುಂಬಾ ಸಂತೋಷವಾಗುತ್ತಿದೆ. ಇಲ್ಲಿ ಸೋಲು-ಗೆಲುವುಗಳು ಮುಖ್ಯವಲ್ಲ ಸಮುದಾಯ ಬಾಂಧವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವುದೆ ಒಂದು ಗೆಲುವು ನಾವೆಲ್ಲರೂ ಒಂದೆಡೆ ಸೇರಿ ಹಬ್ಬ ಆಚರಿಸಿದಂತೆ ಭಾಸವಾಗುತ್ತಿದೆ ಎಂದು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಧ್ಯಕ್ಷರು ಹಾಗೂ ಭಾರತ್ ಬ್ಯಾಂಕಿನ ನಿರ್ದೇಶಕರಾದ ಎನ್.ಟಿ. ಪೂಜಾರಿ ನುಡಿದರು.




ಅವರು ಜನವರಿ 8 ರಂದು ಸಯನ್ ಪೂರ್ವದ ಜಿಟಿಬಿ ನಗರದಲ್ಲಿರುವ ಗುರುನಾನಾಕ್ ಕಾಲೇಜು ಮೈದಾನದಲ್ಲಿ ಜರಗಿದ ಕುಂದಾಪುರ ಬಿಲ್ಲವ ಕೋಟಿ-ಚೆನ್ನಯ ಕ್ರೀಡೋತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ವಿಜೇತರನ್ನು ಅಭಿನಂದಿಸಿ ಮಾತನಾಡಿದರು. ಈ ಕ್ರೀಡೋತ್ಸವದಲ್ಲಿ ಪುಟಾಣಿಗಳು, ಮಹಿಳೆಯರು ಮತ್ತು ಸಾಕಷ್ಟು ಜನರು ಸೇರಿದ್ದೀರಿ ನಿಮ್ಮ ಪ್ರೋತ್ಸಾಹ ನಿರಂತರವಾಗಿದ್ದಲ್ಲಿ ಸಂಘ ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ, ಸದಸ್ಯರ ಸ್ಪಂದನೆ ಸದಾ ಹೀಗೆ ಮುಂದುವರೆದರೆ ನಮ್ಮ ಸಂಘ ಒಂದು ಮಾದರಿ ಸಂಘವಾಗಿ ಬೆಳೆಯಲಿದೆ ಎಂದರು

 

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು ಮಾತನಾಡುತ್ತಾ, ಸ್ಪರ್ಧೆಗಳಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಬೇಸರಿಸದೆ ಕ್ರೀಯಶೀಲರಾಗಿ ಮುಂದಡಿ ಇಟ್ಟಾಗ ಮುಂದಿನ ಕ್ರೀಡಾಕೂಟಗಳಲ್ಲಿ ಗೆಲುವು ನಿಮ್ಮದಾಗಲಿದೆ ಇಲ್ಲಿ ಸ್ಪರ್ಧೆ ಎನ್ನುವುದಕ್ಕಿಂತ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವುದು ಮುಖ್ಯ. ಸಂಘದ ಕಾರ್ಯ ಚಟುವಟಿಕೆಗಳೇ ಅಭಿವೃದ್ಧಿಯ ಕೈಗನ್ನಡಿ. ಕೇವಲ ಸಂಘದ ಸದಸ್ಯರಾಗಿ ಪ್ರಯೋಜನವಿಲ್ಲ, ಸಂಘದ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಸಾಧ್ಯವಾಗದೇ ಇದ್ದಲ್ಲಿ ಕೊನೆ ಪಕ್ಷ ಕಾರ್ಯಕ್ರಮದಲ್ಲಾದರೂ ಹಾಜರಿದ್ದು ಸಮಾಜ ಬಾಂಧವರೊ೦ದಿಗೆ ಬೆರೆತಾಗ ಮುಂಬರುವ ಯುವ ಪೀಳಿಗೆ ಕೂಡ ನಿಮ್ಮನ್ನು ಅನುಸರಿಸುತ್ತಾರೆ ಹಿರಿಯರು ಮಕ್ಕಳಿಗೆ ಸ್ಫೂರ್ತಿ ತುಂಬಬೇಕು ಸಮುದಾಯ ಸಂಘಟನೆಯ ಬಗ್ಗೆ ಮನವರಿಕೆ ಮಾಡಿ ಕೊಡಬೇಕು ಯುವ ಜನರನ್ನು ಸಂಘಟನೆಗಳಿ೦ದ ವಿಮುಖರನ್ನಾಗಿ ಮಾಡದೆ ಹೆಚ್ಚಿನ ಜವಬ್ದಾರಿ ಹೊತ್ತು ಅವರು ಕೆಲಸ ಮಾಡುವಂತೆ ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಮಾತನಾಡುತ್ತಾ ಸಂಘವು ನಿರಂತರವಾಗಿ ಕೆಲವಾರು ವರ್ಷಗಳಿಂದ ಕುಂದಾಪುರ ಬಿಲ್ಲವರಿಗಾಗಿ ಕ್ರೀಡೋತ್ಸವವನ್ನು ಆಯೋಜಿಸುತ್ತಿದ್ದು ವಿವಿಧ ವಯೋಮಿತಿಗೆ ಅನುಗುಣವಾಗಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಸದಸ್ಯ ಬಾಂಧವರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸಿದೆ ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಕ್ರೀಡಾಕೂಟಗಳಲ್ಲೂ ಭಾಗವಹಿಸಲು ಪ್ರೋತ್ಸಾಹಿಸಬೇಕು ಕ್ರೀಡಾರಂಗದಲ್ಲೂ ಉತ್ತಮ ಬದುಕನ್ನು ಕಟ್ಟುವ ವಿಪುಲ ಅವಕಾಶ ಇಂದಿನ ಯುವ ಜನತೆಗಿದೆ. ನಿಗದಿತ ಸಮಯಕ್ಕೆ ಸರಿಯಾಗಿ ತಾವೆಲ್ಲರೂ ಕಾರ್ಯಕ್ರಮಕ್ಕೆ ಬಂದಾಗ ಮಾತ್ರ ಸಮಯ ಹೊಂದಾಣಿಕೆ

ಸುಲಭವಾಗುವುದು ಹಾಗೂ ನಮ್ಮ ಪೂರ್ವ ಯೋಜನೆಯು ಸಫಲವಾಗುವುದು ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಯುತ್ತಿದ್ದು ಸಂಘದ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಲು

ನೂತನ ಕಾರ್ಯಾಲಯದ ನಿರೀಕ್ಷೆಯಲ್ಲಿದ್ದೇವೆ ಆ ನಿಟ್ಟಿನಲ್ಲಿ ತಮ್ಮೆಲ್ಲರ ತುಂಬು ಹೃದಯದ ಸಹಕಾರದ ಅಗತ್ಯವಿದೆ. ಇಂದು ಕ್ರೀಡೋತ್ಸವದಲ್ಲಿ ಭಾಗವಹಿಸಿದವರಿಗೂ ಮತ್ತು ವಿಜೇತರಿಗೂ ಅಭಿನಂದನೆಗಳು ಸಂಘದ ಸದಸ್ಯರ ಹಾಗೂ ಆಡಳಿತ ಮಂಡಳಿ ಮತ್ತು ಉಪಸಮಿತಿಗಳ ಸಹಕಾರದಿಂದ ನಾವು ಈ ಅದ್ಭುತವಾದ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಯಿತು ಎಂದರು.

ಖ್ಯಾತ ಶಿಶು ತಜ್ಞ ಡಾ| ಶೇಖರ ಹೆಮ್ಮಾಡಿ, ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಆನಂದ ಎಮ್. ಪೂಜಾರಿ ಮತ್ತು ನ್ಯಾಯವಾದಿ ಶಕುಂತಲಾ ಎ. ಪೂಜಾರಿ ವಿಜೇತರನ್ನು ಅಭಿನಂದಿಸಿ ಶುಭ ಹಾರೈಸುವುದರೊಂದಿಗೆ ಸಂಘಟನೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ಸದಸ್ಯರಿಗೆ ಕರೆ ನೀಡಿದರು.

ವಿವಿಧ ವಯೋಮಿತಿಗೆ ಅನುಗುಣವಾಗಿ ಜರಗಿದ ವೈವಿಧ್ಯಮಯ ಸ್ಪರ್ಧೆಯಲ್ಲಿ ಧ್ಯಾನ್ ಬಿಲ್ಲವ, ಶ್ರೀಸಾ ಪೂಜಾರಿ, ಹೃಷಿಕೇಶ್ ಪೂಜಾರಿ, ಸುನೀಲ್ ಪೂಜಾರಿ, ಪಾಂಡುರ೦ಗ ಪೂಜಾರಿ, ಶಶಿರಾಜ್ ಪೂಜಾರಿ, ನಾಗರಾಜ್ ಪೂಜಾರಿ, ಸುಧಾಕರ ಪೂಜಾರಿ, ಚೈತಾಲಿ ಪೂಜಾರಿ, ಪ್ರೇಕ್ಷಾ ಪೂಜಾರಿ, ಆತ್ಮೀಕಾ ಪೂಜಾರಿ, ಚೈತ್ರಾ ಬಿಲ್ಲವ, ದೀಪಾ ಪೂಜಾರಿ, ಸವಿತಾ ಪೂಜಾರಿ, ಕಮಲಾಕ್ಷಿ ಪೂಜಾರಿ ಇವರುಗಳು ಕುಂದಾಪುರ ಬಿಲ್ಲವ ಕೋಟಿ-ಚೆನ್ನಯ ಕ್ರೀಡೋತ್ಸವ -2023ರ ಚಾಂಪಿಯನ್ ಆಗಿ ಹೊರಹೊಮ್ಮಿದರು. 

ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರೆ ಮುಖ್ಯ ಅತಿಥಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಧ್ಯಕ್ಷರಾದ ಎನ್. ಟಿ. ಪೂಜಾರಿ, ಗೌರವ ಅತಿಥಿಗಳಾದ ಮಾಜಿ ಅಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು, ಶಿಶು ತಜ್ಞ ಡಾ| ಶೇಖರ ಹೆಮ್ಮಾಡಿ, ನ್ಯಾಯವಾದಿಗಳಾದ ಆನಂದ ಎಂ. ಪೂಜಾರಿ ಮತ್ತು ಶಕುಂತಲಾ ಎ. ಪೂಜಾರಿ, ಸಂಘದ ಉಪಾಧ್ಯಕ್ಷ ನರಸಿಂಹ ಎಮ್. ಬಿಲ್ಲವ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಕಾರ್ಯದರ್ಶಿ ಮನೀಷಾ ಎಮ್. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿದ್ದ ಗಣ್ಯರಿಗೆ ಮಹಿಳಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪುಷ್ಪಗುಚ್ಚ ನೀಡಿ ಗೌರವಿಸಿದರು. ಕ್ರೀಡೋತ್ಸವ ಯಶಸ್ವಿಯಾಗಿ ನೆರವೇರಲು ಆಡಳಿತ ಸಮಿತಿ ಮತ್ತು ಉಪಸಮಿತಿಗಳು ಶ್ರಮಿಸಿದವು ಅಮರೇಶ್ ಪಾಟೀಲ್, ಸಂತೋಷ ಮಿಶ್ರಾ, ಶ್ರದ್ಧಾ ಜಾಧವ ಮತ್ತು ರಾಜೇಶ್ ಶರ್ಮಾ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರೆ ಯುವ ಅಭ್ಯುದಯ ಸಮಿತಿಯ ಹಾಲಿ ಮತ್ತು ಮಾಜಿ ಸದಸ್ಯರು ಸಮನ್ವಯಕರಾಗಿ ಸಹಕರಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮದ ನಿರ್ವಹಣೆಗೈದರೆ ಸಂಘದ ಜತೆ ಕಾರ್ಯದರ್ಶಿ ಹರೀಶ್ ಎನ್. ಪೂಜಾರಿ ಜತೆ ಕೋಶಾಧಿಕಾರಿ ರತ್ನಾಕರ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಜಯಶ್ರೀ ಎ. ಕೋಡಿ, ಜತೆ ಕಾರ್ಯದರ್ಶಿ ದಿವ್ಯಾ ಪೂಜಾರಿ ವಿಜೇತರ ಯಾದಿಯನ್ನು ವಾಚಿಸಿದರು. ಸಂಘದ ಜತೆ ಕಾರ್ಯದರ್ಶಿ ಹರೀಶ್ ಎನ್. ಪೂಜಾರಿ ವಂದನಾರ್ಪಣೆ ಸಲ್ಲಿಸಿದರು. ಸಂಘದ ಸದಸ್ಯರು, ಆಡಳಿತ ಸಮಿತಿ ಮತ್ತು ಉಪಸಮಿತಿಗಳ ತನು-ಮನ-ಧನದ ಸಹಕಾರದಿಂದ ಕುಂದಾಪುರ ಬಿಲ್ಲವ ಕೋಟಿ-ಚೆನ್ನಯ ಕ್ರೀಡೋತ್ಸವ ಅದ್ಧೂರಿಯಾಗಿ ನೆರವೇರಿತು

Powered by Blogger.