".

Header Ads

ನಿಯಮ ಉಲ್ಲಂಘಿಸಿ ದಂಡ ಕಟ್ಟದ ವಾಹನ ಮಾಲೀಕರು ಕಂಗಾಲು :FC ಗೆ ಪೊಲೀಸ್ ಇಲಾಖೆ NOC ಕಡ್ಡಾಯವಂತೆ!


ಯೆಲ್ಲೋ ಬೋರ್ಡ್ ವಾಹನ FC (Fitness Certificate)ಗೆ ಪೊಲೀಸ್ ಇಲಾಖೆಯ NOC ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಸಂಚಾರ ನಿಯಮ ಉಲ್ಲಂಘಿಸಿ ದಂಡಕಟ್ಟದ ವಾಹನಗಳಿಗೆ ಮೂಗುದಾರ ಹಾಕಲು ಚಿಂತನೆ ನಡೆದಿದ್ದು, ಕಾನೂನು ತಿದ್ದುಪಡಿಗೆ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ವಾಹನಗಳಿಗೆ FC ಮಾಡಿಸುವ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಮತ್ತು ವಸೂಲಿ ಮಾಡಲು ಪೊಲೀಸ ಇಲಾಖೆ ಚಿಂತನೆ ನಡೆಸಿದೆ. yellow board ವಾಹನಗಳ ವಾರ್ಷಿಕ ಸದೃಢ ಪ್ರಮಾಣ ಪತ್ರ ಪಡೆಯುವ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಾಕಿ ದಂಡ ಪಾವತಿಸಿರುವ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು ಎನ್ನುವ ಕಾನೂನು ಜಾರಿಗೊಳಿಸಲು ಕೋರಲಾಗಿದೆ.

ಎಂಟು ವರ್ಷದೊಳಗಿನ ವಾಹನಗಳಿಗೆ ಎರಡು ವರ್ಷಕ್ಕೊಮ್ಮೆ, ಎಂಟು ವರ್ಷ ಮೇಲ್ಪಟ್ಟ ವಾಹನಗಳಿಗೆ ಪ್ರತಿ ವರ್ಷ NOC ಮಾಡಿಸಬೇಕಿದೆ. ಈ ಸಂದರ್ಭದಲ್ಲಿ ಮಾಲಿನ್ಯ ಪ್ರಮಾಣ ಪತ್ರ, ತೆರಿಗೆ ಪತ್ರ, ವಾಹನ ನೋಂದಣಿ ದಾಖಲಾತಿ ನೀಡಬೇಕು. ಈಗ ಪೊಲೀಸ್ ಇಲಾಖೆಯಿಂದಲೂ ಎನ್‌ಒಸಿ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗಿರುವಾಗ RTO ಮತ್ತು ಪೊಲೀಸ್ ಇಲಾಖೆ ಜಾರಿಗೆ ತರಲು ಆಲೋಚಿಸುತ್ತಿರುವ ಎನ್ಓಸಿ (NOC) ನೀತಿ ಸರಿಯಿಲ್ಲ. ಕೂಡಲೇ ಅದನ್ನು ಕೈ ಬಿಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಅಂದಹಾಗೆ ರಾಜ್ಯದಲ್ಲಿ 30,42,350 ವಾಣಿಜ್ಯ ಉದ್ದೇಶದ ವಾಹನಗಳಿಗಳಿವೆ.




Powered by Blogger.