".

Header Ads

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ Z ಶ್ರೇಣಿ ಭದ್ರತೆ:- ಕೇಂದ್ರ ಗೃಹ ಸಚಿವಾಲಯ


ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ Z ಶ್ರೇಣಿಯ ಭದ್ರತೆ ನೀಡಲಾಗುತ್ತದೆ. ಗುಪ್ತಚರ ಇಲಾಖೆ ವರದಿಯ ಅನ್ವಯ ಕೇಂದ್ರ ಗೃಹ ಇಲಾಖೆ ಈ ಭದ್ರತೆ ನೀಡಲಿದೆ.
 ಅಣ್ಣಾಮಲೈಗೆ ಝೆಡ್ ಶ್ರೇಣಿ ಭದ್ರತೆ ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಒಟ್ಟು 33 ಕಮಾಂಡೋಗಳು ಅವರ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಮಾವೋವಾದಿಗಳು ಸೇರಿದಂತೆ ಇತರರಿಂದ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿತ್ತು.
ಆದ್ದರಿಂದ ಗೃಹ ಇಲಾಖೆ ಝೆಡ್ ಶ್ರೇಣಿ ಭದ್ರತೆ ನೀಡಲಿದೆ. ಈ ಹಿಂದೆ ಅವರಿಗೆ 'ವೈ' ಶ್ರೇಣಿ ಭದ್ರತೆಯನ್ನು ನೀಡಲಾಗಿತ್ತು. ಈಗ ಝೆಡ್ ಶ್ರೇಣಿ ಭದ್ರತೆಯಲ್ಲಿ ಒಟ್ಟು 33 ಸಿಆರ್‌ಪಿಎಫ್ ಕಮಾಂಡೋಗಳು ಅಣ್ಣಾಮಲೈ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ.
Powered by Blogger.