".

Header Ads

ಮುಂದೆ ಬರೋದು ಕಾಂತಾರ 1" "ನೀವೆಲ್ಲ ನೋಡಿದ್ದು ಕಾಂತಾರ 2,: ತಲೆಗೆ ಹುಳ ಬಿಟ್ಟ ರಿಷಬ್ ಶೆಟ್ಟಿ

 


 ಕಾಂತಾರ 2 ಚಿತ್ರ ತಯಾರಾಗುತ್ತಿದೆ ಎಂದು ಬಹಳ ದಿನಗಳ ಹಿಂದೆಯೇ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್ ಖಚಿತಪಡಿಸಿದ್ದರು. ನಿರ್ದೇಶಕ ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಕಾಂತಾರ 2 ಬಗ್ಗೆ ಮಾತನಾಡಿದ್ದಾರೆ.

ಕಾಂತಾರ ಶತದಿನೋತ್ಸವ ಸಂಭ್ರಮದಲ್ಲಿ ಈ ಬಗ್ಗೆ ರಿಷಬ್ ಹೇಳಿದ್ದು, ಎಲ್ಲರಿಗೂ ಆಶ್ಚರ್ಯವಾಗಿದೆ. ಯಾವುದೇ ಸಿನಿಮಾದ ಭಾಗ 2 ಎಂದರೆ ಅಂದರೆ ಅದು ಕಥೆಯ ಮುಂದುವರೆದ ಭಾಗವನ್ನು ಹೇಳುತ್ತದೆ. ಆದರೆ ಕಾಂತಾರ ಸಿನಿಮಾದ ವಿಚಾರದಲ್ಲಿ ಹಾಗಲ್ಲ. ಕಾಂತಾರ ಸೀಕ್ವೆಲ್ ಬದಲು ರಿಷಬ್‌ ಶೆಟ್ಟಿ ಪ್ರೀಕ್ವೆಲ್ ಹೇಳಲು ಹೊರಟಿದ್ದಾರೆ.

ಕಾಂತಾರ 100 ದಿನಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ಕಾಂತಾರ 2 ಖಂಡಿತವಾಗಿಯೂ ತಯಾರಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ.   ಕಾಂತಾರ - 2 ಯಾವಾಗ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ನೀವು ನೋಡಿರೋ ಸಿನಿಮಾನೇ ಕಾಂತಾರ ಪಾರ್ಟ್ 2. ಅತಿ ಶೀಘ್ರದಲ್ಲೇ ಕಾಂತಾರ ಪಾರ್ಟ್‌ - 1 ಬರುತ್ತದೆ. ಅಷ್ಟು ಮಾತ್ರ ಈಗ ನಾನು ಹೇಳಬಹುದು ಎಂದು ರಿಷಬ್‌ ಹೇಳಿದ್ದಾರೆ.

 ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಸಿನಿಮಾ ಸದ್ಯ ಆಸ್ಕರ್‌ ರೇಸ್‌ನಲ್ಲಿದೆ.

Powered by Blogger.