ಫೆ 12ರಂದು ಬಂಟರ ಸಂಘ ಮುಂಬಯಿಯ ಕ್ರೀಡಾ ಉತ್ಸವ : ಮಹಾರಾಷ್ಟ್ರದ ಮುಖ್ಯಮಂತ್ರಿ ಗೆ ಆಹ್ವಾನ
ಮುಂಬಯಿ : ಬಂಟರ ಸಂಘ ಮುಂಬೈ ಇದರ ಕ್ರೀಡಾ ವಿಭಾಗದ ವತಿಯಿಂದ ಫೆಬ್ರವರಿ 12ರಂದು ರವಿವಾರ ಕಾಂದಿವಲಿ ಪಶ್ಚಿಮದ ಪೊಯ್ಸರ್ ಜಿಮ್ಖಾನದಲ್ಲಿ 35ನೇ ವಾರ್ಷಿಕ ಕ್ರೀಡಾ ಉತ್ಸವ-2023 ವು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ ಆರ್ ಶೆಟ್ಟಿ ತೆಳ್ಳಾರ್ ಸಾರಥ್ಯದಲ್ಲಿನಡೆಯಲಿದೆ.
ಈ ಅದ್ದೂರಿಯ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರನ್ನು ಬಂಟರ ಸಂಘದ ಬೊರಿವಲಿ ಹೈಯರ್ ಎಜ್ಯುಕೇಶನಿನ ಕಾರ್ಯಾಧ್ಯಕ್ಷ, ಡಾ. ಪಿ. ವಿ. ಶೆಟ್ಟಿ, ಬಂಟರ ಸಂಘ ಮುಂಬಯಿಯ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಆರ್ ಶೆಟ್ಟಿ ತೆಳ್ಳಾರ್ ಮತ್ತು ಕ್ರೀಡಾ ಉತ್ಸವದ ಮೇಲ್ವಿಚಾರಕ ಜಯ ಎ. ಶೆಟ್ಟಿ (ಕಬ್ಬಡಿ) ಅವರು ಆಹ್ವಾನ ನೀಡಿ ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.
ಮುಖ್ಯಮಂತ್ರಿಗಳಿಗೆ ಬಂಟರ ಸಂಘದ ಕಾರ್ಯ ಚಟುವಟಿಕೆಗಳನ್ನು ಡಾ. ಪಿ.ವಿ. ಶೆಟ್ಟಿ ತಿಳಿಸಿದರು. ಕ್ರೀಡಾ ಉತ್ಸವದ ಬಗ್ಗೆ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಆರ್ ಶೆಟ್ಟಿ ತೆಳ್ಳಾರ್ ಮತ್ತು ಕ್ರೀಡಾ ಉತ್ಸವದ ಮೇಲ್ವಿಚಾರಕ ಜಯ ಎ. ಶೆಟ್ಟಿ ವಿಹಾರವಾಗಿ ತಿಳಿಸಿದರು. ಬಂಟರ ಸಂಘದ ಸಮಗ್ರ ವಿಹಾರಗಳನ್ನು ತಿಳಿದ ಮುಖ್ಯಮಂತ್ರಿ ಅವರು ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳುವ ಭರವಸೆಯನ್ನು ನೀಡುವುದರೊಂದಿಗೆ ಬಂಟರ ಸಂಘದ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Post a Comment