ಫೆಬ್ರವರಿ 14 ಭಾರತದ ಇತಿಹಾಸದಲ್ಲಿ 'ಕರಾಳ ದಿನ' ಆ ದಿನ ನಡೆದಿದ್ದೇನು?
ಫೆಬ್ರವರಿ 14, ಭಾರತೀಯರು ಮರೆಯಲಾಗದ ದಿನ, ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದೇ ಹೇಳಬಹುದು.ಅದು 40 ಮನೆಗಳನ್ನು ಬೆಳಗುತ್ತಿದ್ದ ದೀಪ ಆರಿದ ದಿನ. ದೇಶದ ಕಣ್ಣುಗಳಲ್ಲಿ ಆಕ್ರೋಶ ತುಂಬಿ, ದುಃಖ ಉಮ್ಮಳಿಸಿ ಬಂದ ದಿನ. ರಕ್ತನಾಳಗಳಲ್ಲಿ ಬಿಸಿ ರಕ್ತ ಜಿನುಗುತ್ತಿದ್ದರೂ, 40 ವೀರ ಯೋಧರ ಛಿದ್ರ ಛಿದ್ರ ದೇಹಗಳನ್ನು ಕಂಡಾಗ ಕಣ್ಣೀರು ಧರೆ ಮುಟ್ಟಿದ ದಿನ. ಹೌದು ಅದುವೇ ಪುಲ್ವಾಮ ಕರಾಳ ದಿನ.
ಭಾರತದ ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿಯ ಕೆಲವು ದಿನಗಳ ನಂತರ, ಭಾರತದ ರಕ್ಷಣಾ ಪಡೆಗಳಿಂದ ಭಯೋತ್ಪಾದನಾ ನಿಗ್ರಹ ವೈಮಾನಿಕ ದಾಳಿ ನಡೆಸಲಾಯಿತು. ಫೆಬ್ರವರಿ 26, 2019 ರ ಮುಂಜಾನೆ, ಭಾರತೀಯ ವಾಯುಪಡೆಯ ಹಲವಾರು ಜೆಟ್‌ಗಳು ಬಾಲಾಕೋಟ್‌ನಲ್ಲಿರುವ ಜೈಶ್ ಸಂಘಟನೆಯ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಿ ಸುಮಾರು 500 ಭಯೋತ್ಪಾದಕರನ್ನು ಹತ್ಯೆಮಾಡಿತು.
ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಮಾರ್ಧದಲ್ಲಿ ಜೀವವನ್ನು ಬಲಿಕೊಟ್ಟರು. ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬೆಂಗಾವಲು ಪಡೆಗೆ ಅತ್ಯಂತ ಭೀಕರವಾಗಿ ದಾಳಿ ನಡೆಸಲಾಗಿತ್ತು. ಫೆಬ್ರವರಿ 14, 2019 ರಂದು ಮಧ್ಯಾಹ್ನ ಹೊತ್ತಿಗೆ ಈ ಭೀಕರ ದಾಳಿ ನಡೆದಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಲವತ್ತು ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್‌ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬಸ್‌ಗಳು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಅರೆಸೇನಾಪಡೆಯ ವಾಹನಗಳ ದೊಡ್ಡ ಗುಂಪಿನ ಭಾಗವಾಗಿತ್ತು. ದಾಳಿಯ ಸ್ವಲ್ಪ ಸಮಯದ ನಂತರ ಜೈಶ್ ಇ ಮೊಹಮ್ಮದ್ ಸಂಘಟನೆ ವಿಡಿಯೋವನ್ನು ಬಿಡುಗಡೆ ಮಾಡಿತು, ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿಬಾಗ್, ಕಾಕಪೋರಾದಲ್ಲಿ ವಾಸಿಸುತ್ತಿದ್ದ ಸ್ಥಳೀಯ ಕಾಶ್ಮೀರಿ ಜಿಹಾದಿ ಎಂದು ಹೇಳಿಕೊಂಡಿದ್ದಾನೆ.

Post a Comment