ʻಅಮಿತ್ ಶಾʼ ರ‍್ಯಾಲಿಯಿಂದ ಹಿಂದಿರುಗುವಾಗ ಘೋರ ದುರಂತ; 2 ಬಸ್‌ಗೆ ಟ್ರಕ್ ಡಿಕ್ಕಿಯಾಗಿ 8 ಸಾವು, 50 ಮಂದಿಗೆ ಗಾಯ
ಮಧ್ಯಪ್ರದೇಶದ ಸಿಧಿಯಲ್ಲಿ ಶುಕ್ರವಾರ ತಡರಾತ್ರಿ ಟ್ರಕ್‌ವೊಂದು ಎರಡು ಬಸ್‌ಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ.
ಮೊಹಾನಿಯಾ ಸುರಂಗದ ಸಮೀಪ ಬರ್ಖಾಡ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯಿಂದ ಹಿಂದಿರುಗುತ್ತಿದ್ದ ಜನರನ್ನು ಈ ಬಸ್ಸುಗಳು ಸಾಗಿಸುತ್ತಿದ್ದವು.
ಅಧಿಕಾರಿಗಳ ಪ್ರಕಾರ, ಟ್ರಕ್‌ನಲ್ಲಿ ಟೈರ್ ಸ್ಫೋಟಗೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.
ಮುಕೇಶ್ ಶ್ರೀವಾಸ್ತವ, ಎಸ್ಪಿ, ರೇವಾ ಹೇಳಿದರು, 'ಎರಡು ಬಸ್ಸುಗಳು ನಿಂತಿದ್ದವು, ಹಿಂದಿನಿಂದ ಟ್ರಕ್ ಬಂದು ಅದರ ಟೈರ್ ಒಡೆದ ನಂತರ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದೆ ಜನರು ಗಾಯಗೊಂಡಿದ್ದಾರೆ, ಅದರಲ್ಲಿ 15-20 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಾಣ ಹಾನಿಗೆ .ಟ್ವಿಟರ್‌ನಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ .

Post a Comment