".

Header Ads

ಮಲ್ಪೆ ಮೀನುಗಾರಿಕಾ ಬೋಟ್ ಗೆ ಸಿಕ್ಕಿದ 200 ಕೆಜಿ ತೂಕದ ಮೀನು

 


ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದಕ್ಕೆ ಬರೋಬ್ಬರಿ 200 ಕೆಜಿ ಗೂ ಅಧಿಕ ತೂಕ ತೂಗುವ ಮೀನೊಂದು ಬಿದ್ದಿದೆ. ಶಾಂಭವಿ ಎನ್ನುವ ಹೆಸರಿನ ಬೋಟ್ ನ ಮೀನುಗಾರರಿಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಈ ದೈತ್ಯ ಮೀನು ಸೆರೆ ಸಿಕ್ಕಿದೆ.
 

ಸ್ಥಳೀಯವಾಗಿ ಈ ಮೀನಿಗೆ ಕಟ್ಟೆ ಕೊಂಬು ಮೀನು ಎಂದು ಕರೆಯಲಾಗುತ್ತಿದ್ದು, ಕೆಜಿಗೆ ಸುಮಾರು 250 ರೂಪಾಯಿ ನಷ್ಟು ಬೆಲೆ ಇದೆ ,ಈ ಜಾತಿಯ ಸಣ್ಣ ಮೀನಿಗೆ ಇರುವಷ್ಟು ರೇಟ್ ದೊಡ್ಡ ಮೀನಿಗೆ ಇಲ್ಲ ಎನ್ನಲಾಗಿದೆ.    ಸೆರೆಸಿಕ್ಕ  ಮೀನು ಮತ್ಸ್ಯ ಪ್ರಿಯರ ಗಮನ ಸೆಳೆಯಿತು.

Powered by Blogger.