ಶೋಭಾ ಸೋಮನಾಚೆ ಬೆಳಗಾವಿ ಮೇಯರ್ ಖಚಿತ; ಮರಾಠಿಗರ ಕೈಗೆ ಬೆಳಗಾವಿ ಪಾಲಿಕೆ
ಮರಾಠಿ ಬಿಜೆಪಿ ಅಭ್ಯರ್ಥಿ ಶೋಭಾ ಸೋಮನಾಚೆ ಅವರು ಬೆಳಗಾವಿ ಮೇಯರ್ ಆಗುವುದು ಬಹುತೇಕ ಖಚಿತವೆನಿಸಿದ್ದು ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೇಯರ್ ಸ್ಥಾನಕ್ಕೆ ಶೋಭಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯಾಹ್ನ 1ಗಂಟೆಗೆ ನಾಮಪತ್ರ ಸ್ವೀಕರಿಸುವ ಅವಧಿ ಮುಗಿದಿದ್ದು ಅವಿರೋಧ ಆಯ್ಕೆ ಘೋಷಣೆ ಮಾತ್ರ ಬಾಕಿ ಇದೆ.
ಬಿಜೆಪಿಯವರೇ ಆದ ವಾಣಿ ವಿಲಾಸ ಜೋಶಿ ಹಾಗೂ ರೇಷ್ಮಾ ಪಾಟೀಲ ಕೂಡ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಭಾನುವಾರ ತಡರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಪದೇಪದೇ ಚರ್ಚೆ ನಡೆಸಿದ ಬಿಜೆಪಿ ಮುಖಂಡರು ಕೊನೆಗೆ ಶೋಭಾ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದರು. ಹೀಗಾಗಿ, ಉಳಿದಿಬ್ಬರು ಸದಸ್ಯರು ಉಮೇದುವಾರಿಕೆ ಕೂಡ ಸಲ್ಲಿಸದಂತೆ ನೋಡಿಕೊಂಡರು.
ಉಪಮೇಯರ್ ಸ್ಥಾನವನ್ನೂ ಬಿಜೆಪಿ ಅಭ್ಯರ್ಥಿ, ಮರಾಠಿಗರಾದ ರೇಷ್ಮಾ ಪಾಟೀಲ ಪಡೆಯುವ ಸಾಧ್ಯತೆ ಇದೆ.

Post a Comment