".

Header Ads

ಸಿರಿಯಾ-ಟರ್ಕಿ ಸಂಭವಿಸಿದ ಭೂಕಂಪ:- ಅಗತ್ಯ ನೆರವಿಗೆ ಸಿದ್ಧ: ಪ್ರಧಾನಿ ಮೋದಿ



ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ 7.8 ತೀವ್ರತೆಯ ಭಾರೀ ಭೂಕಂಪನದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು , ಸುಮಾರು 440 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಟರ್ಕಿ ಮತ್ತು ಸಿರಿಯಾ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ʼಟರ್ಕಿಯಲ್ಲಿ ನಡೆದ ಭಾರೀ ಭೂಕಂಪನದಿಂದಾದ ದೊಡ್ಡ ಮಟ್ಟದ ಜೀವಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟ ತೀವ್ರ ನೋವುಂಟು ಮಾಡಿದೆ. ಮಡಿದವರ ಕುಟುಂಬಕ್ಕೆ ಧೈರ್ಯ ಹೇಳುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖಲಾಗಲೆಂದು ಪ್ರಾರ್ಥಿಸುತ್ತೇನೆ. ಭಾರತ ಟರ್ಕಿಯ ಜನರ ನೋವಿನಲ್ಲಿ ಭಾಗಿಯಾಗುತ್ತದೆ ಮತ್ತು ದುರಂತದ ನೋವಿನಿಂದ ಹೊರಬರಲು ಟರ್ಕಿಗೆ ಬೇಕಾದ ಸಹಾಯ ಹಸ್ತ ಚಾಚಲು ನಾವು ಸಿದ್ಧರಿರುವುದಾಗಿʼ ಟ್ವೀಟ್‌ ಮಾಡಿದ್ಧಾರೆ.

 

Powered by Blogger.