ಶರತ್ ಶೆಟ್ಟಿ ಕೊಲೆ ಪ್ರಕರಣ – ನಾಲ್ವರು ಅರೆಸ್ಟ್
ಪಾಂಗಾಳದಲ್ಲಿ ಕೊಲೆಯಾದ ಶರತ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಸುರತ್ಕಲ್‌ನ ಕುಳಾಯಿ ನಿವಾಸಿಗಳಾದ ದಿವೇಶ್ ಶೆಟ್ಟಿ(20), ಲಿಖೀತ್ ಕುಲಾಲ್(21), ಮಂಗಳೂರು ನಿವಾಸಿ ಆಕಾಶ್(25), ಪಣಂಬೂರು ನಿವಾಸಿ ಪ್ರಸನ್ನ ಶೆಟ್ಟಿಯನ್ನು(40) ಎಂದು ಗುರುತಿಸಲಾಗಿದೆ.
ಕೊಲೆಯ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಸಹಿತ ಕೆಲವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ ಪಿ, ಫೆಬ್ರವರಿ 05 ರಂದು ನಾಲ್ವರು ಶರತ್ ಶೆಟ್ಟಿಯನ್ನು ಶಸ್ತ್ರಾಸ್ತ್ರಗಳನ್ನು ಬಳಸಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಆದರೆ ನಮ್ಮ ತಂಡಗಳ ಪರಿಣತಿಯಿಂದ ನಾವು ಈ ಪ್ರಕರಣವನ್ನು ಭೇದಿಸಿದ್ದೇವೆ ಮತ್ತು ನಾಲ್ವರನ್ನು ಬಂಧಿಸಲಾಗಿದೆ ಮತ್ತು ಅವರಲ್ಲಿ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಇಬ್ಬರನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ. ಪ್ರಮುಖ ಆರೋಪಿ ಮತ್ತು ಕೊಲೆಯಾದವ ಈ ಹಿಂದೆ ಉತ್ತಮ ಸ್ನೇಹಿತರಾಗಿದ್ದರು ಆದರೆ ವೈಯಕ್ತಿಕ ಪೈಪೋಟಿಯಿಂದಾಗಿ ಅವರು ಬೇರೆಯಾಗಿದ್ದರು. ಇವರಿಬ್ಬರೂ ಡಿಸೆಂಬರ್‌ನಲ್ಲಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಕೊಲೆಯ ಹಿಂದೆ ಭೂಗತ ಲೋಕದ ಕೈವಾಡವಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅಜ್ಞಾತ ಸ್ಥಳದಲ್ಲಿ ಕುಳಿತು ಇಂಟರ್‌ನೆಟ್ ಕರೆ ಮಾಡಿ ಸ್ಥಳೀಯರನ್ನು ಕೊಲೆಗೆ ಬಳಸಿಕೊಳ್ಳಲಾಗಿದೆ. ಕೊಲೆಗೆ ಹಣಕಾಸು ನೆರವು ನೀಡಿದ, ವಾಹನ, ಶಸ್ತ್ರಾಸ್ತ್ರ ಪೂರೈಕೆ ಮಾಡಿದವನ್ನು ಬಂಧಿಸಲಾಗಿದೆ,ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಯೋಗೀಶ್ ಆಚಾರ್ಯನಿಗೆ ಅವಮಾನವಾಗಿದ್ದು, ಅದಕ್ಕೆ ಶರತ್ ಶೆಟ್ಟಿಯೇ ಕಾರಣವಾಗಿದ್ದು, ಆತನನ್ನು ಕೊಲೆ ಮಾಡಲು ನಿರ್ಧರಿಸುತ್ತಾನೆ. ಅದಕ್ಕೆ ತನ್ನ ಹಳೆಯ ಕಲಿ ಯೋಗೀಶನ ಮೂಲಕ ಆಕಾಶ ಕರ್ಕೇರ ಎಂಬಾತನ ಸಹಾಯ ಪಡೆದುಕೊಂಡು ಕೊಲೆ ಮಾಡಿದ್ದಾನೆ ಎಂಬುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ

Post a Comment