".

Header Ads

ಖ್ಯಾತ ಚಿತ್ರಕಲಾವಿದ ಬಿಕೆಎಸ್ ವರ್ಮಾ ಹೃದಯಾಘಾತದಿಂದ ನಿಧನ


 ಖ್ಯಾತ ಚಿತ್ರಕಲಾವಿದ ಬಿ.ಕೆ.ಎಸ್.ವರ್ಮಾ(74ವರ್ಷ)  ಹೃದಯಾಘಾತದಿಂದ ನಿಧನರಾಗಿದ್ದಾರೆ.


ಆ ದಿನಗಳಲ್ಲಿ ಬ್ಲೇಡ್ ನಿಂದ, ಉಗುರಿನಿಂದ, ಎಂಬಾಸಿಂಗ್, ಥ್ರೆಡ್ ಪೇಂಟಿಂಗ್ ಮಾಡಿ ಹಣಗಳಿಸುತ್ತಿದ್ದರು. ತಮ್ಮ ಎರಡೂ ಕೈಗಳ ಬೆರಳುಗಳನ್ನು ಉಪಯೋಗಿಸಿ ಸುಂದರವಾದ ಚಿತ್ರಗಳನ್ನು ರಚಿಸುವ ಪರಿ ಅನನ್ಯ. ಎರಡೇ ನಿಮಿಷಗಳಲ್ಲಿ ಸುಂದರವಾದ ಚಿತ್ರ ಬಿಡಿಸುವ ಕಲಾವಿದರಲ್ಲಿ ಮುಖ್ಯರಾಗಿದ್ದಾರೆ.

ಬಿಕೆಎಸ್ ಕಲೆಯನ್ನು ಮೇರುನಟ ಡಾ.ರಾಜ್ ಕುಮಾರ್, ರಜನಿಕಾಂತ್, ಅಂತಾರಾಷ್ಟ್ರೀಯ ಸುಪ್ರಸಿದ್ಧ ಕಲಾವಿದ ಡಾ.ರೋರಿಕ್ ಮತ್ತು ದೇವಿಕಾರಾಣಿ ದಂಪತಿ ಮೆಚ್ಚಿದ್ದರು. ಬಿಕೆಎಸ್ ಗೆ ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ, ಅಮೆರಿಕ, ಸಿಂಗಪುರ, ಕುವೈಟ್ ಸೇರಿದಂತೆ ಹಲವು ದೇಶಗಳಲ್ಲಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿದ್ದರು.

Powered by Blogger.