".

Header Ads

ಖ್ಯಾತ ಹಿರಿಯ ನಟ ಕಾಸಿನಾಧುನಿ ವಿಶ್ವನಾಥ್ ಇನ್ನಿಲ್ಲ


ಕಲಾತಪಸ್ವಿ ಎಂದೇ ಖ್ಯಾತಿಯನ್ನು ಗಳಿಸಿದ್ದ ತೆಲುಗು ನಟ ಕಾಶಿನಾಧುನಿ ವಿಶ್ವನಾಥ್ ಅವರು ನಿನ್ನೆ ( ಫೆಬ್ರವರಿ 2 ) ಇಹಲೋಕ ತ್ಯಜಿಸಿ ಬಾರದ ಊರಿಗೆ ಪಯಣ ಬೆಳೆಸಿದ್ದಾರೆ. ನಟನಾಗಿ ಹಾಗೂ ನಿರ್ದೇಶಕನಾಗಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದ ವಿಶ್ವಾನಥ್ ಅವರ ಸಾಲು ಸಿನಿಮಾ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ವಿಶ್ವಾನಾಥ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

'ಕಲಾತಪಸ್ವಿ' ಎಂದೇ ಜನಪ್ರಿಯರಾಗಿದ್ದ ವಿಶ್ವನಾಥ್ ಅವರು ಫೆಬ್ರವರಿ 1930 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದರು.ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಸಹ ಪ್ರಮುಖ ಹೆಸರು ಪಡೆದಿದ್ದರು.

ಕಳೆದ 2016ನೆ ಸಾಲಿನ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದರು ಸಾಮಾನ್ಯ ಕಥೆಯನ್ನು ಆಯ್ದುಕೊಂಡು ಶ್ರೇಷ್ಠ ಚಿತ್ರಗಳನ್ನು ನೀಡುತ್ತಿದ್ದರು ಅದ್ಭುತ ಪ್ರತಿಭೆಯಿಂದ ಬೆಳ್ಳಿತೆರೆಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಸೌಂಡ್ ಆರ್ಟಿಸ್ಟ್ ಆಗಿ ಚಿತ್ರರಂಗದಲ್ಲಿ ಪಯಣ ಆರಂಭಿಸಿದ ವಿಶ್ವನಾಥ್, ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ಸಪ್ತಪದಿ ಕಾಮ್ಚೋರ್, ಸಂಜೋಗ್ ಮುಂತಾದ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

1965 ರಲ್ಲಿ ಆತ್ಮ ಗೌರವಂ ಚಿತ್ರದ ಮೂಲಕ ನಿರ್ದೇಶಕರಾಗಿ ತೆಲಗು ಚಿತ್ರರಂಗ ಪ್ರವೇಶ ಮಾಡಿದರು, ಇದರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದ್ದರು, ಅತ್ಯುತ್ತಮ ಚಲನಚಿತ್ರಕ್ಕಾಗಿ ನಂದಿ ಪ್ರಶಸ್ತಿ ಲಭಿಸಿತ್ತು. ಸೂಪರ್ ಹಿಟ್ ಚಿತ್ರಗಳಾದ ಚೆಲ್ಲೇಲಿ ಕಾಪುರಂ, ಓ ಸೀತಾ ಕಥೆ, ಜೀವನ ಜ್ಯೋತಿ ಪಾಂಡುರಂಗಡು, ನರಸಿಂಹ ನಾಯ್ಡು, ಲಕ್ಷ್ಮೀ ನರಸಿಂಹ ಮತ್ತು ಸೀಮಸಿಂಹಂ, ಕುರುತಿಪುನಲ  ಕಕ್ಕೈ ಸಿರಗಿನೀಳೆ ಮತ್ತು ಬಗವತಿ ಸೇರಿದಮತೆ ಆನೇಕ ಚಿತ್ರಗಳನ್ನು ತೆರೆಗೆ ತಂದು ಜನಮಾನಸದಲ್ಲಿ ಅಚ್ಚಳಿಯದ ಚಾಪು ಮೂಡಿಸಿದರು. ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
Powered by Blogger.