".

Header Ads

ದೇವಾಡಿಗ ಸಂಘ ಮುಂಬಯಿ ಸಮನ್ವಯ ಸಮಿತಿ ಡೊಂಬಿವಲಿ ವಲಯ : ಮಹಿಳಾ ವಿಭಾಗದವರಿಂದ ಹಳದಿ-ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ದೇವಾಡಿಗ ಸಂಘ ಮುಂಬಯಿ ಸಮನ್ವಯ ಸಮಿತಿ ಡೊಂಬಿವಲಿ ವಲಯದ ಮಹಿಳಾ ವಿಭಾಗದವರಿಂದ ಹಳದಿ-ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು  ಇತ್ತೀಚೆಗೆ ಡೊಂಬಿವಲಿ ಪಶ್ಚಿಮದ ರೈಲ್ವೇ ಸ್ಟೇಷನ್ ಎದುರುಗಡೆ ಇರುವ ಜಾನಕಿ ಸಭಾಗೃಹದಲ್ಲಿ ನಡೆಯಿತು. 

ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಮಾರಿ ಜ್ಯೋತ್ಸ್ನಾ ದೇವಾಡಿಗ ಮತ್ತು ಕುಮಾರ್ ಅಭಿಜಿತ್ ದೇವಾಡಿಗರು ನಡೆಸಿ ಕೊಟ್ಟರು. ವಲಯದ ಸದಸ್ಯ ಬಾಂಧವರ ಚಿಕ್ಕ-ಪುಟ್ಟ ಮಕ್ಕಳು ಸೋಲೂಡಾನ್ಸ್, ಭಾವಗೀತೆ, ಭಕ್ತಿಗೀತೆ ನೃತ್ಯದ ಮೂಲಕ ಕುಣಿದು ಕುಪ್ಪಳಿಸಿದರು. ಅದರೊಂದಿಗೆ ವಲಯ ಮಹಿಳೆಯರಿಂದ ದೇಶದ ವಿವಿದ ರಾಜ್ಯದ ಉಡುಗೆ-ತೊಡುಗೆಗಳಿಂದ ಫ್ಯಾಶನ್ ಶೂ ನೃತ್ಯ ರೂಪಕದಲ್ಲಿ ಹಾಗೂ ನಮ್ಮ ನಾಡಿನ ತುಳು-ಕನ್ನಡ ಭಾಷೆಯ ನೃತ್ಯ ಮತ್ತು ಹಾಡುಗಳನ್ನು ಹಾಡುತ್ತಾ ತುಂಬಿರುವ ಸಭಾಗೃಹದಲ್ಲಿರುವವರೆಲ್ಲರನ್ನು ಮನೋರಂಜನೆಯ ಮೂಲಕ ಮನೋರಂಜಿಸಿದರು. 

ತದನಂತರ ಸಭಾಕಾರ್ಯಕ್ರಮದ ಮೊದಲಿಗೆ ಅಂದಿನ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶ್ರೀಮತಿ ಶಾಲಿನಿ ಜೆ ದೇವಾಡಿಗರು ಅಂದಿನ ಮುಖ್ಯ ಅತಿಥಿಗಳಾದ ತುಳು ವೆಲ್ಫೇರ್ ಅಸೋಸಿಯೇಷನ್ ಡೊಂಬಿವಲಿ, ಮಹಿಳಾ ವಿಭಾಗದ ಮಾಜೀ ಕಾರ್ಯಾಧ್ಯಕ್ಷೆ ಶ್ರೀಮತಿ  ವಿನೋದ ದೇವುದಾಸ್ ಶೆಟ್ಟಿ , ಮಾತೃ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಮಾಧವ ದೇವಾಡಿಗ ಹಾಗೂ ವಲಯದ ಪದಾಧಿಕಾರಿಗಳನ್ನು ವೇದಿಕೆಗೆ ಬರಮಾಡಿ ಕೊಂಡರು. ವೇದಿಕೆಯಲ್ಲಿರುವ ಅತಿಥಿ ಗಣ್ಯರೆಲ್ಲ ಸೇರಿ  ಕು. ಕೃತಿಕಾ, ಕು. ಮನಿಷ  ಹಾಗೂ  ಕು. ಕವನ ಇವರ ಪ್ರಾರ್ಥನೆಯೊಂದಿಗೆ ಜ್ಯೋತಿಯನ್ನು ಬೆಳಗಿಸುವ  ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ಸ್ಥಾನ ವಹಿಸಿದ ಶ್ರೀಮತಿ ಶಾಲಿನಿ ಜೆ ದೇವಾಡಿಗರು ಅತಿಥಿ ಗಣ್ಯರಿಗೆ ಶಾಲುಹೊದಿಸಿ ಪುಷ್ಪಗುಚ್ಛ ಕೊಟ್ಟು ಸ್ವಾಗತಿಸಿದರು. ಅತಿಥಿ ಗಣ್ಯರಾದ ಶ್ರೀಮತಿ ವಿನೋಧ ದೇವುದಾಸ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ  ಕೋರುತ್ತಾ ಹೆಣ್ಣಿಗೆ ಬಾಲ್ಯದಿಂದ ಮುಪ್ಪಿನ ವರೆಗೆ ಹಳದಿ -ಕುಂಕುಮ ಶಾಶ್ವತ ಹಾಗು  ಇಂತಹ ಕಾರ್ಯಕ್ರಮ ಮಾಡುವುದರಿಂದ ಸಂಘ ಹೆಚ್ಚು ಬಲಿಷ್ಟ ವಾಗಲು  ಸಾದ್ಯವಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಮಾತ್ರ  ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯರಾದ ಶ್ರೀಮತಿ ಜಯಂತಿ ಮಾಧವ ದೇವಾಡಿಗರು ತಮ್ಮ ಭಾಷಣದಲ್ಲಿ ಮಹಿಳೆಯರಿಗೆ ಯೋಗಾಭ್ಯಾಸದ ಬಗ್ಗೆ ಇನ್ನು ಒಳಾಂಗಣ/ಹೊರಾಂಗಣ ಕ್ರೀಡೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಮಾತೃ ಸಂಘದ ನೂತನ ಅಧ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ್ ದೇವಾಡಿಗ ಅವರ ಸಮಿತಿ ಸದ‌ಸ್ಯರಿಗೆ ಹಾಗೂ ವಿವಿಧ ವಲಯದ ಸಮಿತಿ ಸದ‌ಸ್ಯರಿಗೆ ಇನ್ನು ವಲಯದ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ  ವಲಯದ ಕಾರ್ಯಾಧ್ಯಕ್ಷರಾದ  ಅಶೋಕ್ ದೇವಾಡಿಗರು ‌ಹಾಗು ಪದಾಧಿಕಾರಿಗಳು ಪುಷ್ಪಗುಚ್ಛ ಕೊಟ್ಟು ಅಭಿನಂದಿಸಿದರು. ಕೊನೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಶ್ರೀಮತಿ  ಶಾಲಿನಿ ಜೆ ದೇವಾಡಿಗರು ‌ಹಳದಿ-ಕುಂಕುಮದ ಮಹತ್ವವನ್ನು ವಿವರವಾಗಿತಿಳಿಸಿದರು. 

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಣ್ಯರಿಗೆ ವಲಯದ ಬಾಂಧವರಿಗೆ, ಮಕ್ಕಳಿಗೆ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮಹಿಳಾ ಉಪಕಾರ್ಯಾಧ್ಯಕ್ಷೆಯಾದ ಶ್ರೀಮತಿ ವಿಶಾಲ ಎಚ್ ದೇವಾಡಿಗ ನಿರೂಪಿಸಿದರು. ಶ್ರೀಮತಿ ನಿರ್ಮಲ ದೇವಾಡಿಗ, ಶ್ರೀಮತಿ ಭಾರತಿ ಎಮ್ ದೇವಾಡಿಗ, ಕಾರ್ಯದರ್ಶಿಗಳಾದ ಶ್ರೀಮತಿ ಜಯತಾಕ್ಷಿ  ವಿ. ದೇವಾಡಿಗ ಶ್ರೀಮತಿ ಪದ್ಮಲತಾ ಆರ್. ಮೂಯಿಲಿ,   ಶ್ರೀಮತಿ ಪುಷ್ಪಲತಾ ಎಲ್. ದೇವಾಡಿಗ,  ಮಾಜಿ ಕಾರ್ಯಾಧ್ಯಕ್ಷೆಯರಾದ ಶ್ರೀಮತಿ ಮೀನಶಂಕರ್ ದೇವಾಡಿಗ, ಶ್ರೀಮತಿ ನಳಿನಿ ಎಸ್. ದೇವಾಡಿಗ,  ಮಾತ್ರ ಸಂಘದ ಪದಾಧಿಕಾರಿಗಳು, ವಲಯದ ಎಲ್ಲಾ ಸದಸ್ಯ ಬಾಂಧವರು ಅಂದಿನ ಎಲ್ಲಾ ಕಾರ್ಯಕ್ರಮದ ಯಶಸ್ಸಿಗೆ ಉಪಸ್ಥಿತರಿದ್ದು ಸಹಕರಿಸಿದರು. 

ಕಾರ್ಯದರ್ಶಿ ಶ್ರೀಮತಿ ಜಯತಾಕ್ಷೀ ವಿ. ದೇವಾಡಿಗರು ಎಲ್ಲರಿಗೂ ವಂದನಾರ್ಪಣೆಗೈದರು. ಕೊನೆಯಲ್ಲಿ ಕಾರ್ಯಕ್ರಮವು ಸ್ನೇಹ ಭೋಜನದೊಂದಿಗೆ ಮುಕ್ತಾಯಗೊಂಡಿತು.

Powered by Blogger.