".

Header Ads

ಸೈಬರ್ ಕಳ್ಳರ ಜಾಲಕ್ಕೆ ನಟಿ ನಗ್ಮಾ ಬ್ಯಾಂಕ್ ಅಕೌಂಟ್ ನಿಂದ ಕ್ಷಣಾರ್ಧಲ್ಲೆ 1 ಲಕ್ಷ ರೂಪಾಯಿ ಡ್ರಾ


ಸೈಬರ್ ಕಳ್ಳರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರಲ್ಲದೇ ಇದೀಗ ಸೆಲೆಬ್ರೆಟಿಗಳು ಕೂಡ ಸೈಬರ್ ಜಾಲಕ್ಕೆ ಬೀಳುತ್ತಿದ್ದಾರೆ. ಇದೀಗ ಹಿರಿಯ ನಟಿ ನಗ್ಮಾ ಸೈಬರ್ ವಂಚಕರು ಬೀಸಿದ್ದ ಬಲೆಗೆ ಬಿದ್ದಿದ್ದಾರೆ. ಕೇವಲ ಐದೇ ನಿಮಿಷದಲ್ಲಿ ಸಾಕಷ್ಟು ಹಣವನ್ನೂ ಅವರು ಕಳೆದುಕೊಂಡಿದ್ದಾರೆ.

ನಗ್ಮಾ ಅವರ ಮೊಬೈಲ್ ಸಂಖ್ಯೆಗೆ ಮಸೇಜ್ ಬಂದಿದೆ. ಬ್ಯಾಂಕ್ ಖಾತೆಗಾಗಿ ಕೆವೈಸಿ ಭರ್ತಿ ಮಾಡಿ ಎಂದು ಮಸೇಜ್ ನಲ್ಲಿ ಉಲ್ಲೇಖಿಸಲಾಗಿದೆ. ಮಸೇಜ್ ಬಂದ ಹಿಂದೆಯೇ ಖದೀಮರು ಕಾಲ್ ಕೂಡ ಮಾಡಿದ್ದಾರೆ. ಮಸೇಜ್ ಹೇಳಿದಂತೆ ಭರ್ತಿ ಮಾಡಲು ತಿಳಿಸಿದ್ದಾರೆ. ಅದು ಬ್ಯಾಂಕ್ ನಿಂದ ಬಂದಿರುವ ಕರೆ ಎಂದು ನಂಬಿರುವ ನಗ್ಮಾ ಕೆವೈಸಿ ಭರ್ತಿ ಮಾಡಿದ್ದಾರೆ. ಕ್ಷಣಾರ್ಧಲ್ಲೆ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ.

ಸೈಬರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಸೈಬರ್ ವಂಚನೆಯ ಕುರಿತು ಸಾಕಷ್ಟು ಜಾಗ್ರತೆ ಮೂಡಿಸುತ್ತಿದ್ದರೂ, ಬುದ್ಧಿವಂತರೇ ಹೆಚ್ಚು ಮೋಸ ಹೋಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ  . 

Powered by Blogger.