ಶ್ರೀ ಶನಿಮಹಾತ್ಮ ಪೂಜಾ ಸಮಿತಿ ; 68 ನೇಯ ವಾರ್ಷಿಕ ಪೂಜಾ ಮಹೋತ್ಸವ, ಭಕ್ತಿ ಸಂಭ್ರಮದೊಂದಿಗೆ ಸಂಪನ್ನ
ಮಲಾಡ್ ಪೂರ್ವದ ಇರಾನಿ ಕಾಲನಿಯ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ 68 ವಾರ್ಷಿಕ ಪೂಜಾ ಮಹೋತ್ಸವವು ಮಾ. 4ರಂದು ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.
ಬೆಳಗ್ಗೆಯಿಂದ ಗಣಪತಿ ಹೋಮ, ಅಶ್ವತ್ಥ ಪೂಜೆ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಮಹಾ ಆರತಿ, ಸಾವಿರಾರು ಭಕ್ತರ ಭಕ್ತಿಯ ಪ್ರಾರ್ಥನೆಯೊಂದಿಗೆ ಶ್ರೀ ಶನಿ ದೇವರಿಗೆ ದೇವಸ್ಥಾನದ ಅರ್ಚಕರಾದ ಸುಧಾಕರ ಎಂ. ಶೆಟ್ಟಿ, ಮಹಾಮಂಗಳಾರತಿಯನ್ನು ನಡೆಸಿದರು.
ಆ ಬಳಿಕ ಪ್ರಸಾದ ರೂಪದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ದಿನೇಶ್ ಕೋಟ್ಯಾನ್ ಜೆರಿಮೆರಿ ಅವರ ಸ್ಯಾಕ್ಸೋಫೋನ್ ಚಂಡೆ ಮದ್ದಲೆಯ ನೀನಾದದಲ್ಲಿ ಕಲಶ ಪ್ರತಿಷ್ಠಾಪನೆ, ಬಲಿ ಮೂರ್ತಿ ಮೆರವಣಿಗೆ ಆನಂತರ, ಶನಿಗ್ರಂಥ ಪಾರಾಯಣ, ಬಳಿಕ ಸಮಿತಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ, ಸಂಜೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ ಸಮಿತಿಯ ಅಧ್ಯಕ್ಷ ಮೋಹನ್ ಜಿ. ಬಂಗೇರ, ಗೌರವ ಕಾರ್ಯದರ್ಶಿ ಹರಿಶ್ಚಂದ್ರ.ಎಸ್. ಕರ್ಕೇರ, ಎಂ. ಎನ್. ಸುವರ್ಣ, ಗೌರವ ಕೋಶಾಧಿಕಾರಿ ಕೆ. ಎನ್. ಸಾಲ್ಯಾನ್, ಅತುಲ್ ಎಂ. ಓಜಾ, ಮಾಜಿ ಅಧ್ಯಕ್ಷ ದಿವಾಕರ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್. ಯು. ಬಂಗೇರ, ಕೆ. ಎನ್. ಸಿ. ಸಾಲ್ಯಾನ್, ಎಸ್. ಎ. ಸಾಲ್ಯಾನ್, ಎಂ. ಎನ್. ಕೋಟ್ಯಾನ್, ಪಿ. ಆರ್. ಅಮೀನ್, ಬಿ. ಎಚ್. ಹೆಜ್ಜಾಡಿ, ಜಯಾ ಎಂ. ಬಂಗೇರ, ತನುಜ' ಕಪ್ಪನ್‌ಕಲ್, ಯು.ವಿ. ರಾವ್, ಭುವಾಜಿ ಎಸ್. ಎಂ. ಬಂಗೇರ, ಉಪಸಮಿತಿಯ ಸದಸ್ಯರಾದ ಎಸ್ ಪಿ ದೇವಾಡಿಗ, ಚಂದ್ರಾವತಿ ಪುತ್ರನ್, ಜಿ ಆರ್ ಸಾಲಿಯಾನ್ , ಎನ್ ಎನ್ ಪೂಜಾರಿ, ಸುಜಿತ್ ಕರ್ಮೋಕರ್, ಆರ್ ಎಸ್ ದೇವಾಡಿಗ, ಪಿಪಿ ಸಾಲ್ಯಾನ್, ಆರ್ ವೈ ಪುತ್ರನ್,ಎನ್ ಆರ್ ಬಂಗೇರ, ವಿಶ್ವನಾಥ್ ವಾಗ್ಮಾರಿ, ಸದಸ್ಯರು ಮಹಿಳಾ ಸದಸ್ಯರು ಪರಿಸರದ ಭಕ್ತರು ಸಹಕರಿಸಿದರು.
ಪೂಜೆಯಲ್ಲಿ ನಗರದ ಪ್ರಸಿದ್ಧ ಉದ್ಯಮಿಗಳು ಧಾರ್ಮಿಕ ಮುಖಂಡರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಧಾರ್ಮಿಕ ಸಂತೆ ಪೂಜಾ ಶರ್ಮ (ಮುಂಬೈ ಕಿ ರೇಖಾ), ಸಾವಿರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.
ರಾತ್ರಿ ದೇವಸ್ಥಾನದ ಹೊರಹಾವರಣದಲ್ಲಿ ಸಾಂಸ್ಕೃತಿಕ ಕಾರಕ್ರಮವಾಗಿ ರ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಶ್ರೀಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಕೊರಗಜ್ಜ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.





Post a Comment