ಕೀರ್ತಿಶೇಷ ಗೋವಿಂದ ಭಟ್‌ರ ಸ್ಮರಣಾರ್ಥ ಆಧುನಿಕ ತಂತ್ರಜ್ಞಾನದ ಬಸ್ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ
ಸಾಮಾಜಿಕ ಜೀವನವು ಅನುಭವಿಸಬೇಕಾದ ವಾಸ್ತವ : ಶ್ರೀ ಚಂದ್ರಶೇಖರ ಸ್ವಾಮೀಜಿ
ಮಂಗಳೂರು : ಸಾಮಾಜಿಕ ಜೀವನವು ಪರಿಹರಿಸಬೇಕಾದ ಸಮಸ್ಯೆಯಲ್ಲ ಆದರೆ ಅನುಭವಿಸಬೇಕಾದ ವಾಸ್ತವವಾಗಿದೆ. ಸಮಾಜವು ನನ್ನ ಕೆಲಸವನ್ನು ಗುರುತಿಸುತ್ತದೆ ಎಂಬ ಯೋಚನೆಯನ್ನು ದೂರಮಾಡಿ ನಾನೆಷ್ಟು ಈ ಸಮಾಜಕ್ಕೆ ಸೇವೆ ನೀಡಿದ್ದೇನೆ ಎನ್ನುವುದರತ್ತ ಮನ ಮಾಡಿ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ನಮ್ಮನ್ನು ಎತ್ತರಕ್ಕೇರಿಸುತ್ತದೆ, ಬೆಳೆಯುತ್ತಿರುವ ಮೂಲ್ಕಿ ತಾಲೂಕಿಗೆ ಮೂಲ ಸೌಕರ್ಯ ನೀಡುವಲ್ಲಿ ನಾವೆಲ್ಲರೂ ಒಂದಾಗಬೇಕು, ನಮ್ಮ ಸೇವಾಶ್ರಮದಿಂದ ಮುಂದಿನ ದಿನದಲ್ಲಿಯೂ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಂತಾರಾಷ್ಟ್ರೀಯ ವಾಸ್ತು ತಜ್ಞರು, ಜ್ಯೋತಿಷಿಗಳು, ಆಧ್ಯಾತ್ಮಿಕ ಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಮೂಲ್ಕಿ-ಕಿನ್ನಿಗೋಳಿ ನಡುವಿನ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಬಳಿಯಲ್ಲಿ ನಿರ್ಮಿಸಿದ ಅತ್ಯಾಧುನಿಕ ತಂತ್ರಜ್ಞಾನದ ಬಸ್ ಪ್ರಯಾಣಿಕರ ಸಾರ್ವಜನಿಕ ತಂಗುದಾಣದ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಿಲ್ಪಾಡಿಯ ಜ್ಯೋತಿಷ್ಯರತ್ನ ಕೀರ್ತಿಶೇಷ ಶ್ರೀ ಗೋವಿಂದ ಭಟ್ ಅವರ ಸ್ಮರಣಾರ್ಥ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಯೋಜನೆಯಲ್ಲಿ ವಿಶೇಷವಾಗಿ ನಿರ್ಮಿಸಿದ ಬಸ್ ಪ್ರಯಾಣಿಕರ ಸಾರ್ವಜನಿಕ ತಂಗುದಾಣವನ್ನು ಶ್ರೀಮತಿ ಶಾರದಮ್ಮ ಗೋವಿಂದ ಭಟ್ ಅವರು ಗಣ್ಯರೊಂದಿಗೆ ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು.
ಮೂಲ್ಕಿ ನಗರ ಪಂಚಾಯತ್‌ನ ಅಧ್ಯಕ್ಷ ಸುಭಾಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವಾ ಶುಭ ಹಾರೈಸಿ, ನಿಸ್ವಾರ್ಥ ಸೇವೆಯಿಂದ ಗುರುತಿಸಿಕೊಂಡಿರುವ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ದೂರದೃಷ್ಟಿತ್ವದ ಚಿಂತನೆ ನಮಗ್ಗೆಲ್ಲರಿಗೂ ಮಾದರಿ ಎಂದರು.
ಈ ಸಂದರ್ಭದಲ್ಲಿ ಹಲವು ಸಾಧಕರನ್ನು ವಿಶೇಷವಾಗಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅಶ್ರಮದ ಮೂಲಕ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್, ರಾಹುಲ್ ಸಿ. ಭಟ್,
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಧಾರ್ಮಿಕ ಪಪರಷತ್‌ನ ಸದಸ್ಯರಾದ ಗಿರೀಶ್ ಪ್ರಕಾಶ್ ತಂತ್ರಿ, ಕೊಡೆತ್ತೂರು ಭುವನಾಭಿರಾಮ ಉಡುಪ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ. ರಾಜ್‌ಶೇಖರ್ ಕೋಟ್ಯಾನ್, ಸಮಾಜ ಸೇವಕಿ ಡಾ. ಅಮರಶ್ರೀ ಅಮರನಾಥ ಶೆಟ್ಟಿ, ಸದಸ್ಯ ಮೂಲ್ಕಿ ನಗರ ಪಂಚಾಯತ್‌ನ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ಶಾಂತಾ ಕಿರೋಡಿಯನ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವಾ, ಕಿಲ್ಪಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಗೋಪಿನಾಥ ಪಡಂಗ,ಸ್ವಾಮೀಜಿ ಸಹೋದರರಾದ ವಿಶ್ವನಾಥ್ ಭಟ್, ದಂಪತಿ, ರಾಜೇಶ್ ಭ ಟ್,ವೀಣಾ ಭಟ್ ಸಹೋದರಿಯರಾದ ಪುಷ್ಪ ಸಂಪತ್ ಕುಮಾರ್, ಕುಸುಮ ನಾಗರಾಜ್ ಆಚಾರ್ಯಹಾಗೂ ಮಾಧವ ತಂತ್ರಿ, ದೀಪಿಕಾ ತಂತ್ರಿ ಮೆಡಲಿನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ವೀಣಾ ಡಿಸೋಜಾ, ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ, ಮಾಧ್ಯಮ ಸಲಹೆಗಾರ ನರೇಂದ್ರ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಗೌರವಾಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು.
ಆಧುನಿಕ ಸ್ಪರ್ಶದ ತಂಗುದಾಣ...
ಬಸ್ ಪ್ರಯಾಣಿಕರ ಸಹಿತ ಸಾರ್ವಜನಿಕರು ತಮ್ಮ ದಣಿವನ್ನಾರಿಸಿಕೊಳ್ಳಲು ತಂಗುದಾಣವನ್ನು ಆಧುನಿಕ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗಿದೆ. ಬಸ್ ಸುಲಭವಾಗಿ ತಂಗುದಾಣದ ಬಳಿ ನಿಲ್ಲಲು ಇಂಟರ್‌ಲಾಕ್ ವ್ಯವಸ್ಥೆ, ಸ್ಟಿಲ್ ನಿರ್ಮಿತವಿಶೇಷ ಆಸನ, ಕುಡಿಯುವ ನೀರು, ಫ್ಯಾನ್-ಲೈಟ್ಸ್, ಮೊಬೈಲ್ ಛಾರ್ಜರ್, ವೈ-ಫೈ, ಎಲ್‌ಇಡಿ ಪರದೆ, ಡಿಜಿಟಲ್ ಗಡಿ ಯಾರ, ಸಿ.ಸಿ. ಕ್ಯಾಮರಾ, ಬಸ್ ತಂಗುದಾಣದ ಬಳಿಯಲ್ಲಿ ಅವಘಡ ಸಂಭವಿಸಿದಲ್ಲಿ ನೇರವಾಗಿ ಮೂಲ್ಕಿ ಪೊಲೀಸ್ ಠಾಣೆಗೆ ಸಂಪರ್ಕವಿರುವ ಸೈರನ್ ವ್ಯವಸ್ಥೆ ಇದ್ದು ಮುಂದಿನ ದಿನದಲ್ಲಿ ಓದುಗ ಪ್ರಯಾಣಿಕರಿಗೆ ಪುಸ್ತಕ ಭಂಡಾರ ಸಹಿತ ಇತರ ವ್ಯವಸ್ಥೆಯನ್ನು ಹಾಗೂ ಕಿನ್ನಿಗೋಳಿಯತ್ತ ತೆರಳುವ ಪ್ರಯಾಣಿಕರಿಗೆ ಪ್ರತ್ಯೇಕ ಬಸ್ ತಂಗುದಾಣವನ್ನು ನಿರ್ಮಿಸುವ ಯೋಜನೆ ಇದೆ ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
Post a Comment