".

Header Ads

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ




  ನಾಳೆ ಪರೀಕ್ಷೆ ಬರೆಯಬೇಕಿದ್ದದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ಬಂಟ್ವಾಳ ತಾಲೂಕಿನ ಬಾಳ್ತಿಲ ಎಂಬಲ್ಲಿ ನಡೆದಿದೆ. ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವೈಷ್ಣವಿ (17) ಸಾವನ್ನಪ್ಪಿದ ಬಾಲಕಿ.

ಮನೆಯಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಬಾಳ್ತಿಲ ಗ್ರಾಮ ಪಂಚಾಯತ್ ಬಳಿಯ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿ ಮಗಳಾದ ವೈಷ್ಣವಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.  

 ಶಿಕ್ಷಕ ದಂಪತಿಗಳಾದ ಚಂದ್ರಶೇಖರ ಮತ್ತು ಸೌಮ್ಯಾ ಅವರ ಮೂವರು ಮಕ್ಕಳಲ್ಲಿ ಮೊದಲನೆಯವಳಾದ ವೈಷ್ಣವಿ ಬೆಳಗ್ಗೆಸುಮಾರು 10 ಗಂಟೆಯ ಆಸುಪಾಸಿನಲ್ಲಿಈ ಕೃತ್ಯವೆಸಗಿದ್ದಾಗಿ ಸಂಶಯಿಸಲಾಗಿದೆ. ದಿಢೀರನೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ವೈಷ್ಣವಿಯ ತಾಯಿ ಸೌಮ್ಯಾ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಕ್ಷಕಿಯಾಗಿದ್ದರೆ, ತಂದೆ ಚಂದ್ರಶೇಖರ್ ಅವರು ರಾಮಕುಂಜದಲ್ಲಿ ಶಿಕ್ಷಕರಾಗಿದ್ದಾರೆ. ಇವರಿಗೆ ಇಬ್ಬರು ತಂಗಿಯರಿದ್ದು, ಇಬ್ಬರೂ ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿದ್ದಾರೆ.  ಪರೀಕ್ಷೆಯ ಸಿದ್ಧತೆಯಲ್ಲಿದ್ದ ವೈಷ್ಣವಿ ಬೆಳಗ್ಗೆ ತಾಯಿ ಜೊತೆ ಶಾಲೆಗೆ ಹೋಗಿ  ಏನೋ ಮರೆತು ಹೋಗಿದ್ದೇನೆಂದು ವಾಪಾಸ್‌ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ.

ಮೃತ ವಿದ್ಯಾರ್ಥಿನಿಯು ಭಗವದ್ಗೀತೆಯ 700 ಶ್ಲೋಕವನ್ನು ಕಂಠಪಾಠ ಮಾಡಿ ಜಿಲ್ಲಾ ಪ್ರಶಸ್ತಿಯನ್ನು ಪಡೆದಿದ್ದಳು.

Powered by Blogger.