".

Header Ads

ಕಾಪು NEWS – ಖಾಸಗಿ ಬಸ್ ಡಿಕ್ಕಿ :ಶಾಲಾ ಬಾಲಕಿ ಗಂಭೀರ


 ಖಾಸಗಿ ಬಸ್ ಒಂದು ಶಾಲಾ ಬಾಲಕಿಗೆ
ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕಿ ಗಂಭೀರ ಗಾಯಗೊಂಡ ರಾಷ್ಟ್ರೀಯ ಹೆದ್ದಾರಿ   ಮಂದಾರ ಹೊಟೇಲ್ ಬಳಿ ನಡೆದಿದೆ.

ಕಾಪು ಮಹಾದೇವಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ವರ್ಷಿತಾ ಶೇರ್ವೆಗಾರ (13) ಗಾಯಾಳು ವಿದ್ಯಾರ್ಥಿನಿ. ಶನಿವಾರ ಬೆಳಗ್ಗೆ ಶಾಲೆಗೆ ಬರುತ್ತಿದ್ದ ಆಕೆ ರಾಷ್ಟ್ರೀಯ ಹೆದ್ದಾರಿ 66ರ ಮಂದಾರ ಹೊಟೇಲ್ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಬಾಲಕಿಯ ತಲೆಗೆ ಗಂಭೀರ ಏಟಾಗಿದ್ದು ಗಂಭೀರ ಗಾಯಗೊಂಡಿರುವ ಆಕೆಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Powered by Blogger.