".

Header Ads

ಏಪ್ರಿಲ್ 30 ರಂದು ಯು.ಎ.ಇ ಬಂಟ್ಸ್ ನ 46 ನೇ ಕೂಡು ಕಟ್ಟ್



ದುಬೈ: ಯು.ಎ.ಇ.ಬಂಟ್ಸ್ ನ 46 ನೇ ವರ್ಷದ ಕೂಡುಕಟ್ಟ್ ಮತ್ತು ವರ್ಷಂಪ್ರತಿ ಕೊಡಲ್ಪಡುವ 2023 ನೇ ಸಾಲಿನ "ಬಂಟ ವಿಭೂಷಣ ಪ್ರಶಸ್ತಿ" ಪ್ರದಾನ ಕಾರ್ಯಕ್ರಮವು 30-04-2023ನೇ ಭಾನುವಾರದಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನಗರದ ದೇರಾದ ಬ್ರಿಸ್ಟೊಲ್ ಹೋಟೆಲ್ ನಲ್ಲಿ ಜರಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎ.ಇ ಬಂಟ್ಸ್ ನ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟಿಯವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಅತಿಥಿ ಸಮನ್ವಯಕಾರರಾಗಿ ಮುಂಬಯಿಯ ಉದ್ಯಮಿ, ಕಾರ್ಯಕ್ರಮ ಸಂಘಟಕ, ನಿರೂಪಣೆಕಾರ  ಅಶೋಕ ಪಕ್ಕಳರವರು ಭಾಗವಹಿಸಲಿದ್ದಾರೆ.

ಪ್ರತಿ ವರ್ಷ ಕೊಡಲ್ಪಡುವ "ಬಂಟ  ವಿಭೂಷಣ ಪ್ರಶಸ್ತಿಯನ್ನು ಈ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಚೇರ್ ಮಾನ್ ಆಗಿರುವ ಡಾ. ಮೋಹನ್ ಆಳ್ವ ಅವರಿಗೆ ಗೌರವ ಪ್ರಧಾನ ಮಾಡಲಿದ್ದಾರೆ.

ಯು.ಎ.ಇ.ಯಲ್ಲಿ ಇರುವ ಬಂಟ ಬಾಂದವರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಎಂದು ಯು.ಎ.ಇ. ಬಂಟ್ಸ್ ನ ಅಧ್ಯಕ್ಷರಾದ  ಶ್ರೀ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ದೇವೇಶ್ ಆಳ್ವ. ಕೋಶಾಧಿಕಾರಿ ಅನಿತಾ ದಯಾನಂದ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-----------------
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
Powered by Blogger.