ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ನಡೆದ ಗುಂಡಿನ ದಾಳಿಯ ಹಿಂದೆ ಪಿ.ಎಫ್.ಐ. ಅಥವಾ ನಕ್ಸಲ್ ಗಳ ಕೈವಾಡವಿದೆಯೇ ಎಂದು ಪತ್ತೆ ಹಚ್ಚಿ! : ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ*
ಉಡುಪಿ : ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಮೊನ್ನೆ ಬುಧವಾರ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆಸಲಾಗಿದೆ. ನ್ಯಾಯವಾದಿ ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ತಮ್ಮ ಕಾರಿನಲ್ಲಿ ಚೆಟ್ಟಳ್ಳಿಯಿಂದ ಮಡಿಕೇರಿಗೆ ಹೊರಡುತ್ತಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆದಿದೆ. ಈ ಹೇಡಿತನದ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ದಾಳಿಯ ಹಿಂದೆ ಪಿ.ಎಫ್.ಐ ಅಥವಾ ನಕ್ಸಲ್ ಗಳ ಕೈವಾಡವಿದೆಯೇ ಎಂದು ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಬಿ. ಎನ್. ಇವರಿಗೆ ಮನವಿಯನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ಶ್ರೀ ವಿಜಯ ಕುಮಾರ್, ಉದ್ಯಮಿಗಳಾದ ಶ್ರೀ ಆನಂದ ಅಮೀನ್, ಶ್ರೀ ರಾಘವೇಂದ್ರ ಶೆಟ್ಟಿ, ಶ್ರೀ ರಾಮಣ್ಣ, ಶ್ರೀ ಹರಿಪ್ರಸಾದ್, ಕಟಪಾಡಿ ಕಾಳಿಕಾಂಬಾ ದೇವಸ್ಥಾನದ ಶ್ರೀ ರಮೇಶ ಆಚಾರ್ಯ, ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀ ಪದ್ಮನಾಭ ಶೆಣೈ, ಯುವ ಶಕ್ತಿ ಸಂಘಟನೆಯ ಶ್ರೀ ರಂಜನ್ ಮಲ್ಪೆ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಇದೇ ರೀತಿ, ಕಾರ್ಕಳದ ಮಾನ್ಯ ತಹಸೀಲ್ದಾರರ ಮುಖಾಂತರ, ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ಇವರಿಗೆ ಕೂಡಾ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ವಿಜಯ ಕುಮಾರ್ ಇವರು ಮಾತನಾಡಿ, ಈ ದಾಳಿಯ ಹಿಂದೆ ಯಾರ ಕೈವಾಡವಿದೆ, ಎಂಬುವುದರ ಬಗ್ಗೆ ಕರ್ನಾಟಕ ಪೊಲೀಸರು ತನಿಖೆ ಮಾಡಿ ಈ ಪ್ರಕರಣದ ದಾಳಿಕೋರರು ಹಾಗೂ ಮಾಸ್ಟರ್ ಮೈಂಡ್ ಯಾರು ಎಂಬುವುದನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ ಹಿಂದೂ ಆರೋಪಿಗಳ ಪರವಾಗಿ ವಾದ ಮಾಡುವ ನ್ಯಾಯವಾದಿಗಳ ಮೇಲೆ ಆಕ್ರಮಣವಾಗುವುದು ಅತ್ಯಂತ ಗಂಭೀರ ಮತ್ತು ಅನುಮಾನಾಸ್ಪದವಾಗಿದೆ. ಗೌರಿ ಲಂಕೇಶ್ ಅವರು ನಕ್ಸಲೀಯರ ಸಂಪರ್ಕದಲ್ಲಿದ್ದರು ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಅವರ ಹತ್ಯೆಯ ನಂತರ ನಕ್ಸಲೀಯರೂ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ವಕೀಲರ ಮೇಲೆ ಒತ್ತಡ ಹೇರಲು ಈ ದಾಳಿ ನಡೆದಿದೆಯೇ ಎಂಬ ಶಂಕೆ ಮೂಡುತ್ತದೆ. ದಾಳಿಯಲ್ಲಿ ನ್ಯಾಯವಾದಿ ಕೃಷ್ಣಮೂರ್ತಿ ಇವರು ಬದುಕುಳಿದಿದ್ದರೂ ಅವರ ಮೇಲೆ ಮತ್ತೊಮ್ಮೆ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಅವರಿಗೆ ಸಶಸ್ತ್ರ ಪೊಲೀಸ್ ರಕ್ಷಣೆಯ ಅಗತ್ಯವಿದೆ. ಈ ದಾಳಿಯ ಹಿಂದೆ ಕಟ್ಟರ್ ವಾದಿ ಜಿಹಾದಿ ಸಂಘಟನೆ ಅಥವಾ ಗೌರಿ ಲಂಕೇಶ್ ಅವರನ್ನು ಬೆಂಬಲಿಸುವ ಅರ್ಬನ್ ನಕ್ಸಲಿಸ್ಟ್ ಗಳು ಇದ್ದಾರೆಯೇ ಎಂಬುದನ್ನು ತನಿಖೆ ಮಾಡುವುದು ಅನಿವಾರ್ಯವಾಗಿದೆ ಎಂದು ಶ್ರೀ ವಿಜಯ ಕುಮಾರ್ ಇವರು ಹೇಳಿದರು.


Post a Comment