".

Header Ads

ಟ್ವಿಟರ್‌ಗೆ ಠಕ್ಕರ್ ಪರ್ಯಾಯ 'ಬ್ಲೂಸ್ಕೈ' ಆಂಡ್ರಾಯ್ಡ್ ಅಪ್ಲಿಕೇಶನ್ ಆರಂಭ

ಟ್ವಿಟರ್‌ನ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ಗೆ ಪರ್ಯಾಯವಾದ 'ಬ್ಲೂಸ್ಕೈ'(Bluesky) ಸೋಶಿಯಲ್ ಮೀಡಿಯಾ ವೇದಿಕೆಯನ್ನು ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ಅನಾವರಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಎಲಾನ್ ಮಸ್ಕ್ ಅವರು ಟ್ವಿಟರ್ ಸಂಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ ಟ್ವಿಟರ್‌ನ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ಗೆ ಪರ್ಯಾಯವಾಗಿ ತಮ್ಮ ಹೊಸ ಬ್ಲೂಸ್ಕೈ ಅಪ್ಲಿಕೇಶನನ್ನು ಐಓಎಸ್ ಬಳಕೆದಾರರಿಗೆ ಪರಿಚಯಿಸಿದ್ದರು. 

ಇದೀಗ ಜ್ಯಾಕ್ ಡಾರ್ಸೆ ಅವರು ಆಂಡ್ರಾಯ್ಡ್ ಬಳಕೆದಾರರಿಗೆ ಸಹ ಈ 'ಬ್ಲೂಸ್ಕಿ' ಅಪ್ಲಿಕೇಶನನ್ನು ಪರಿಚಯಿಸಿದ್ದು, ಇದು ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟರ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ಇತ್ತೀಚಿನ ವರದಿಯು ತಿಳಿಸಿದೆ.

Powered by Blogger.