".

Header Ads

ನನ್ನ ಹತ್ಯೆಯಾದರೆ ಅದಕ್ಕೆ ಬಿಜೆಪಿ ರಾಜ್ಯಧ್ಯಕ್ಷ ಮತ್ತು ಅವರ ತಂಡ ಹೊಣೆ – ಸತ್ಯಜಿತ್ ಸುರತ್ಕಲ್


ಹೋರಾಟಗಾರರ ಮುಖಂಡ ಸತ್ಯಜೀತ್ ಸುರತ್ಕಲ್  ಭದ್ರತೆಯನ್ನು ಸರಕಾರ ಹಿಂತೆಗೆದುಕೊಂಡಿದ್ದು, ಈ ಮೂಲಕ ನನ್ನ ಹತ್ಯೆಗೆ ವ್ಯವಸ್ಥಿತ ಸಂಚು ನಡೆಯುತ್ತಿದೆ. ಒಂದು ವೇಳೆ ಹತ್ಯೆಯಾದರೆ ಅದಕ್ಕೆ ರಾಜ್ಯಧ್ಯಕ್ಷ ಮತ್ತು ಅವರ ತಂಡ ಹೊಣೆ ಎಂದು ಹಿಂದೂಪರ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ.
 ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಸುಮಾರು 16 ವರ್ಷಗಳಿಂದ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದ್ದ ಕಾರಣಕ್ಕೋಸ್ಕಕ್ಕೋಸ್ಕರ ಸರಕಾರವೇ ನನಗೆ ಭದ್ರತೆ ನೀಡಿತ್ತು.
ಆದರೆ ಕಳೆದ ಹದಿನಾರು ವರ್ಷಗಳಿಂದ ಇದ್ದ ಭದ್ರತೆಯನ್ನು ಈಗ ಚುನಾವಣೆ ನೆಪದಲ್ಲಿ ವಾಪಸ್ ಪಡೆಯಲಾಗಿದೆ. ಈ ಮೂಲಕ ನನ್ನ ಹತ್ಯೆಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಹಿಂದುತ್ವಕ್ಕಾಗಿ ರಾಷ್ಟ್ರ ಹಿತಕ್ಕಾಗಿ ನಡೆಸಿದ ಕಾರ್ಯಗಳಿಂದಾಗಿ ಬೆದರಿಕೆ ಬಂದಿತ್ತೆ ಹೊರತು ನನ್ನ ವೈಯಕ್ತಿಕ ವಿಷಯಕ್ಕಾಗಿ ಅಲ್ಲ ಎಂದರು.   ಶುಲ್ಕ ಪಾವತಿಸಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವಷ್ಟು ಸಶಕ್ತನಾಗದೇ ಇರುವುದರಿಂದ ಹಾಗೂ ಈಗಲೂ ಬೆದರಿಕೆ ಇರುವುದರಿಂದ ಇದನ್ನು ಮುಂದುವರಿಸಬೇಕು ಎಂದು ಹಿಂದೂ ಹೋರಾಟಗಾರ  ಸತ್ಯಜಿತ್ ಸುರತ್ಕಲ್ ಆಗ್ರಹಿಸಿದ್ದಾರೆ.


Powered by Blogger.